newsfirstkannada.com

ಕೊಹ್ಲಿ ಕ್ಯಾಪ್ಟನ್ಸಿ ತೊರೆದಾಗ ನಾನು ಶಾಕ್​ ಆಗಿದ್ದೆ- ಸೌರವ್​ ಗಂಗೂಲಿ ಬಿಚ್ಚಿಟ್ಟ ಸತ್ಯವೇನು..?

Share :

Published June 13, 2023 at 6:11pm

  2 ವರ್ಷಗಳ ಹಿಂದೆ ಟೀಂ ಇಂಡಿಯಾ ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದ ಕೊಹ್ಲಿ

  ಕೊಹ್ಲಿ ನಾಯಕತ್ವ ಸ್ಥಾನದಿಂದ ಕೆಳಗಿಳಿದ ಬಗ್ಗೆ ಕೊನೆಗೂ ಮೌನಮುರಿದ ಗಂಗೂಲಿ

  ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್​ ಗಂಗೂಲಿ ವಿರಾಟ್​​ ಕೊಹ್ಲಿ ಬಗ್ಗೆ ಹೇಳಿದ್ದೇನು..?

ವಿರಾಟ್​​ ಕೊಹ್ಲಿ ಟೀಂ ಇಂಡಿಯಾದ ಎಲ್ಲಾ ಮಾದರಿ ಕ್ಯಾಪ್ಟನ್ಸಿ ತೊರೆದು ಬರೋಬ್ಬರಿ 2 ವರ್ಷಗಳು ಆಗಿವೆ. ಕೊಹ್ಲಿ ನಂತರ ಟೀಂ ಇಂಡಿಯಾದ ಎಲ್ಲಾ ಮಾದರಿ ನಾಯಕನಾಗಿ ರೋಹಿತ್​ ಶರ್ಮಾ ಆಯ್ಕೆಯಾಗಿದ್ದಾರೆ. ರೋಹಿತ್​ ಟೀಂ ಇಂಡಿಯಾದ ಕ್ಯಾಪ್ಟನ್​ ಆದ್ರೂ ಫಾರ್ಮ್​​ನಲ್ಲೇ ಇದ್ದ ಕೊಹ್ಲಿಯನ್ನು ನಾಯಕತ್ವ ಸ್ಥಾನದಿಂದ ಕಿತ್ತು ಹಾಕಿದ್ದು ಯಾಕೆ? ಎಂಬ ಚರ್ಚೆ ನಡೆಯುತ್ತಿದೆ. ಕೊಹ್ಲಿ ನಾಯಕತ್ವ ಸ್ಥಾನದಿಂದ ಕೆಳಗಿಳಿಯಲು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್​ ಗಂಗೂಲಿಯೇ ಕಾರಣ ಎಂದು ಹೇಳಲಾಗುತ್ತದೆ. ಹೀಗಿರುವಾಗ ಮೊದಲ ಬಾರಿಗೆ ಕೊಹ್ಲಿ ಕ್ಯಾಪ್ಟನ್ಸಿ ತೊರೆದ ಬಗ್ಗೆ ಸೌರವ್​ ಗಂಗೂಲಿ ಮಾತಾಡಿದ್ದಾರೆ.

ಖಾಸಗಿ ಚಾನೆಲ್​​ಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ಸೌರವ್​ ಗಂಗೂಲಿ, ವಿರಾಟ್​​ ಕೊಹ್ಲಿ ಟೀಂ ಇಂಡಿಯಾದ ಅದ್ಭುತ ಕ್ಯಾಪ್ಟನ್​​. ಇವತ್ತಿಗೂ ಯಾಕೆ ಕೊಹ್ಲಿ ಟೀಂ ಇಂಡಿಯಾದ ಟೆಸ್ಟ್​ ಕ್ಯಾಪ್ಟನ್ಸಿ ಬಿಟ್ರು ಎಂದು ಯಾರಿಗೂ ಗೊತ್ತಿಲ್ಲ. ಟೀಂ ಇಂಡಿಯಾ ಕ್ಯಾಪ್ಟನ್ಸಿ ತೊರೆದಿದ್ದಕ್ಕೆ ಕಾರಣವೇನು ಎಂದು ಕೊಹ್ಲಿ ಮಾತ್ರ ರಿವೀಲ್​ ಮಾಡಲು ಸಾಧ್ಯ. ಕೊಹ್ಲಿ ಟೆಸ್ಟ್​ ಕ್ಯಾಪ್ಟನ್ಸಿ ತೊರೆದಾಗ ಬಿಸಿಸಿಐ ಪ್ರಿಪೇರ್​ ಆಗಿರಲಿಲ್ಲ, ನಾನಂತೂ ಶಾಕ್​ ಆಗಿದ್ದೆ. ಸೆಲೆಕ್ಟರ್ಸ್​​​ ರೋಹಿತ್​ಗೆ ಟೆಸ್ಟ್​ ಕ್ಯಾಪ್ಟನ್ಸಿ ಪಟ್ಟ ಕಟ್ಟಿದ್ರು. ನಮಗೆ ಇದಕ್ಕಿಂತ ಬೆಸ್ಟ್​ ಆಪ್ಷನ್​​ ಯಾವುದು ಸಿಗಲಿಲ್ಲ ಎಂದರು.

ಟೆಸ್ಟ್​ ಕ್ಯಾಪ್ಟನ್ಸಿಯನ್ನು ಕೊಹ್ಲಿ ತೊರೆದ ಬಳಿಕ ಟೀಂ ಇಂಡಿಯಾಗೆ ಒಳ್ಳೇ ನಾಯಕ ಸಿಗಲಿಲ್ಲ. ರೋಹಿತ್​​ ಟೆಸ್ಟ್​ ಮಾದರಿಯಲ್ಲಿ ಟೀಂ ಇಂಡಿಯಾಗೆ ಒಳ್ಳೇ ಕ್ಯಾಪ್ಟನ್​​ ಅಲ್ಲ, ಅಂದು ವೈಸ್​ ಕ್ಯಾಪ್ಟನ್​ ಆಗಿದ್ದ ಅಜಿಂಕ್ಯ ರಹಾನೆಯನ್ನೇ ಆಯ್ಕೆ ಮಾಡಬಹುದಿತ್ತು. ಆದರೆ, ರಹಾನೆಯನ್ನೇ ಬೇಕಂತಲೇ ಕಡೆಗಣಿಸಿ ರೋಹಿತ್​ಗೆ ಪಟ್ಟ ಕಟ್ಟಿದ್ರು ಎಂಬ ಆರೋಪಗಳು ಕೇಳಿ ಬಂದಿದ್ದವು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಹ್ಲಿ ಕ್ಯಾಪ್ಟನ್ಸಿ ತೊರೆದಾಗ ನಾನು ಶಾಕ್​ ಆಗಿದ್ದೆ- ಸೌರವ್​ ಗಂಗೂಲಿ ಬಿಚ್ಚಿಟ್ಟ ಸತ್ಯವೇನು..?

https://newsfirstlive.com/wp-content/uploads/2023/06/Kohli_Ganguly.jpg

Load More