/newsfirstlive-kannada/media/post_attachments/wp-content/uploads/2024/06/GANGULY-3.jpg)
ಸ್ಟಾರ್ ಕಲ್ಚರ್.. ದಶಕದಿಂದ ಟೀಮ್ ಇಂಡಿಯಾಗೆ ಅಂಟಿಕೊಂಡಿರುವ ಅಂಟು ರೋಗ. ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಆಡಿರೋ ಒಂದು ಮಾತು ಸ್ಟಾರ್ ಕಲ್ಚರ್ ಬಗ್ಗೆ ಮತ್ತೆ ಡಿಬೇಟ್ಗೆ ಕಾರಣವಾಗಿದೆ.
ಅನಾದಿ ಕಾಲದಿಂದಲೂ ಟೀಮ್ ಇಂಡಿಯಾ ಅನೇಕ ಮ್ಯಾಚ್ ವಿನ್ನರ್ಗಳನ್ನು ಕಂಡಿದೆ. ದಿಗ್ಗಜ ಆಟಗಾರರನ್ನು ನೋಡಿದೆ. ಟನ್ ಗಟ್ಟಲೇ ರನ್ ಹೊಡೆದ ಬ್ಯಾಟ್ಸ್ಮನ್ಗಳು, ದೇವರಾಗಿದ್ದಿದೆ. ಕ್ರಿಕೆಟ್ ದೇವರ ಹಾದಿಯಲ್ಲೇ ಸಾಗಿದ ವಿರಾಟ್ ಕೊಹ್ಲಿ, ಮಾಡ್ರನ್ ಡೇ ಕ್ರಿಕೆಟ್‌ನ ದೊರೆಯಾಗಿದ್ದಿದೆ. ಟೀಮ್ ಇಂಡಿಯಾಗೆ ವಿಶ್ವಕಪ್ ತಂದ ಕೊಟ್ಟ ಮಹೇಂದ್ರ ಸಿಂಗ್ ಧೋನಿ, ಆರಾಧ್ಯ ದೈವರಾಗಿದ್ದಿದೆ. ಜಸ್ಪ್ರೀತ್ ಬೂಮ್ರಾನೂ ಕೂಡ ಈಗ ಆರಾಧಿಸುವವರಿದ್ದಾರೆ. ಇದೇ ವ್ಯಕ್ತಿ ಪೂಜೆ ಬಗ್ಗೆ ಕೊಲ್ಕತ್ತಾ ಪ್ರಿನ್ಸ್ ಸೌರವ್ ಗಂಗೂಲಿ, ಅಪಸ್ವರ ಎತ್ತಿದ್ದಾರೆ.
ಬೂಮ್ರಾ, ಕೊಹ್ಲಿ ಬಗ್ಗೆ ಮಾತಾಡ್ತೀವಿ!
ನಾವು ಬೂಮ್ರಾ, ಕೊಹ್ಲಿ ಬಗ್ಗೆ ಮಾತ್ರ ಮಾತಾಡ್ತೀವಿ. ಭಾರತದಲ್ಲಿ ತುಂಬಾ ಟ್ಯಾಲೆಂಟ್ ಇದೆ. ಆಕಾಶ್ ದೀಪ್, ಸಿರಾಜ್ ಅದ್ಭುತ ಆಟವಾಡ್ತಿದ್ದಾರೆ. ಗಿಲ್ ಚೆನ್ನಾಗಿದ್ದಾನೆ. ಯಶಸ್ವಿ ಚೆನ್ನಾಗಿದ್ದಾನೆ. ದೇಶದಲ್ಲಿ ಅಪಾರ ಪ್ರತಿಭೆಗಳು ಇವೆ. ನಮ್ಮ ಹುಡುಗರು ಚೆನ್ನಾಗಿದ್ದಾರೆ. ಇವರೆ ನಮ್ಮ ಭವಿಷ್ಯ-ಸೌರವ್ ಗಂಗೂಲಿ, ಮಾಜಿ ಕ್ರಿಕೆಟರ್
ಮಾಜಿ ಕ್ರಿಕೆಟರ್ ಸೌರವ್ ಗಂಗೂಲಿ ಯಂಗ್ ಇಂಡಿಯಾ ಬಗ್ಗೆ ಸಂದರ್ಶನವೊಂದರಲ್ಲಿ ಹೀಗೆ ಮಾತನಾಡಿದ್ದಾರೆ. ಬಿಗ್ಸ್ಟಾರ್ ಬಗ್ಗೆ ಕೇಳಿದ ಪ್ರಶ್ನೆಗೆ ಬೆಂಗಾಲ್ ಟೈಗರ್ ಉಳಿದ ಆಟಗಾರರ ಹೆಸರನ್ನ ಹೇಳಿ ಇವ್ರು ಆಟಗಾರರೇ ಅಲ್ವಾ ಎಂದಿದ್ದಾರೆ. ಪರೋಕ್ಷವಾಗಿ ಸೌರವ್ ಗಂಗೂಲಿ, ಹೀರೋ ಕಲ್ಚರ್ ಬಿಡಬೇಕು ಎಂಬ ಸಂದೇಶ ಸಾರಿದ್ದಾರೆ.
ಸ್ಟಾರ್ ಗಿರಿಯ ಮುಂದೆ ಉಳಿದವರು ಕಣ್ಮರೆ
ಕ್ರಿಕೆಟ್ ಅನ್ನೋದು 11 ಮಂದಿಯ ಆಟ.. ಈ ಆಟದಲ್ಲಿ ಒಬ್ಬ ತಪ್ಪು ಮಾಡಿದ್ರೂ ಇಡೀ ಟೀಮ್, ಬೆಲೆ ತೆತ್ತಬೇಕಿರುತ್ತೆ. ಈ ಟೀಮ್ ಗೇಮ್ನಲ್ಲಿ ಒಂದಿಬ್ಬರು ಮಾತ್ರವೇ ಸ್ಟಾರ್ಗಳಾಗಿರ್ತಾರೆ. ಈ ಸ್ಟಾರ್ಗಳ ಮುಂದೆ ಇತರೆ ಆಟಗಾರರು ಕಣ್ಮರೆಯಾಗ್ತಿದ್ದಾರೆ. ಸ್ಟಾರ್ಗಳ ಮುಂದೆ ಉಳಿದವರ ಕೊಡುಗೆ ಲೆಕ್ಕಕ್ಕೇ ಇರಲ್ಲ.
ಫೇವರಿಟ್ ಕಿಂಗ್ ಕೊಹ್ಲಿ, ಬೂಮ್ರಾ
ಗಂಗೂಲಿ, ವಿರಾಟ್ ಕೊಹ್ಲಿ, ಬೂಮ್ರಾ ಹೆಸರನ್ನೇ ಉಲ್ಲೇಖಿಸಲು ಕಾರಣ ಇದೆ. ಕ್ರಿಕೆಟ್ ಕಾಮೆಂಟೇಟರ್ಸ್, ಕೇವಲ ವಿರಾಟ್ ಕೊಹ್ಲಿ, ಜಸ್ಪ್ರಿತ್ ಬೂಮ್ರಾ ಮಾತ್ರವೇ ಮ್ಯಾಚ್ ವಿನ್ನರ್ಸ್ ಎಂಬಂತೆ ಬಿಂಬಿಸ್ತಾರೆ. ಇದು ಸಹಜವಾಗೇ ಫ್ಯಾನ್ಸ್ ಅಟೆನ್ಷನ್ ಅವರತ್ತಲೇ ಸೆಳೆಯುತ್ತೆ. ಇವರಿಲ್ಲದೇ ಟೀಮ್ ಇಂಡಿಯಾ ಇಲ್ಲ ಎಂಬ ಮಟ್ಟಕ್ಕೆ ವ್ಯಕ್ತಿ ಪೂಜೆ ನಡೆಯುತ್ತೆ. ಇದರ ಹಿಂದೆ ಉಳಿದ ಆಟಗಾರರು, ತಂಡದಲ್ಲಿದ್ದು ಇಲ್ಲದಂತಾಗುತ್ತೆ ಇದಕ್ಕೆ ಬೆಸ್ಟ್ ಎಕ್ಸಾಂಪಲ್ 2022ರ ಏಷ್ಯಾಕಪ್ ಸೂಪರ್-4 ಮ್ಯಾಚ್.
ಇದನ್ನೂ ಓದಿ:ನದಿಗೆ ತಳ್ಳಿದ ಕೇಸ್ಗೆ ಮತ್ತೊಂದು ಟ್ವಿಸ್ಟ್.. ಗದ್ದೆಮ್ಮಳ ಕಾಲುಂಗುರ, ತಾಳಿ ವಾಪಸ್ ಪಡೆದ ತಾತಪ್ಪ ಕುಟುಂಬ..!
ಅಫ್ಘಾನಿಸ್ತಾನ ಎದುರಿನ ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ರು. ಬಿಗ್ ಟಾರ್ಗೆಟ್ ಸೆಟ್ ಮಾಡಲು ಕಾರಣರಾಗಿದ್ರು. ಶತಕ ಸಿಡಿಸಿದ ಕೊಹ್ಲಿನಾ ಕೊಂಡಾಡಿದ್ದರು. ಬೊಂಬಾಟ್ ಬೌಲಿಂಗ್ ಮರೆಯಾದ್ರು. ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ್ದ ಭುವನೇಶ್ವರ್ ಕುಮಾರ್, 1 ಮೇಡನ್ ಸಹಿತ ಕೇವಲ 4 ರನ್ ನೀಡಿ 5 ವಿಕೆಟ್ ಬೇಟೆಯಾಡಿದ್ರು. ಇದು ಎಷ್ಟು ಜನರಿಗೆ ನೆನಪಿದೆ.
ಇದು ಕೇವಲ ಏಷ್ಯಾಕಪ್ಗೆ ಮಾತ್ರವೇ ಸೀಮಿತವಾಗಿಲ್ಲ. 2011ರ ಏಕದಿನ ವಿಶ್ವಕಪ್ ಟೂರ್ನಿಗೂ ಅನ್ವಯವಾಗುತ್ತೆ. ಟೂರ್ನಿಯುದ್ದಕ್ಕೂ ಯುವರಾಜ್ ಸಿಂಗ್, ಜಹೀರ್ ಖಾನ್ ಅದ್ಭುತ ಆಟವಾಡಿದ್ರು. ಹೀರೋ ಆಗಿದ್ದು ಮಾತ್ರ ಧೋನಿ.
ದೊಡ್ಡ ದೊಡ್ಡ ಕಾಣಿಕೆಗಳು ಮಾತ್ರವೇ ಹೆಡ್ಲೈನ್ ಆಗುತ್ತೆ. ಸಣ್ಣ ಸಣ್ಣ ಕೊಡುಗೆಗಳು ತೆರೆ ಹಿಂದೆಯೇ ಇರುತ್ತೆ. ವೈಯಕ್ತಿಕವಾಗಿ ಟ್ರೋಫಿ ಗೆಲ್ಲಲು ಆಗಲ್ಲ. ಸಣ್ಣ ಕೊಡುಗೆಗೆ ಬೆನ್ನುತಟ್ಟಲ್ಲ. ನೀವು 97 ರನ್ ಗಳಿಸಿ, 5 ವಿಕೆಟ್ ಪಡೆದರೆ ಅದೇ ಸಕ್ಸಸ್ ಅಲ್ಲ. ಆ ರೀತಿ ಮಾಡಬೇಡಿ. ಅವರಷ್ಟೇ ಮತ್ತೊಬ್ಬರು ಇಂಪಾರ್ಟೆಂಟ್. ಎಷ್ಟು ಮಂದಿಗೆ 2011ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಜಹೀರ್ ಖಾನ್ ಪ್ರದರ್ಶನ ನೆನಪಿದೆ. ಯಾರಿಗೂ ಇಲ್ಲ -ಗೌತಮ್ ಗಂಭಿರ್
ಜಹೀರ್ ಖಾನ್, ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪವರ್ ಪ್ಲೇನಲ್ಲಿ 5 ಓವರ್ ಬೌಲಿಂಗ್ ಮಾಡಿ ಕೇವಲ 4 ರನ್ ನೀಡಿದ್ರು. ಇದು ಶ್ರೀಲಂಕಾ ತಂಡವನ್ನ ಒತ್ತಡಕ್ಕೆ ಸಿಲುಕಿಸಿತ್ತು. ಟೀಮ್ ಇಂಡಿಯಾ ಗೆಲುವಲ್ಲೂ ಮಹತ್ವದ ಪಾತ್ರವನ್ನೇ ವಹಿಸಿತ್ತು.
ಬದಲಾಗಬೇಕಿದೆ ಸ್ಟಾರ್ ಸಂಸ್ಕೃತಿಯ ಆ ದಿನಗಳು
ಇತರೆ ದೇಶಗಳಿಗೆ ಹೋಲಿಕೆ ಮಾಡಿದ್ರೆ, ಟೀಮ್ ಇಂಡಿಯಾದಲ್ಲಿ ಸ್ಟಾರ್ ಕಲ್ಚರ್ ಹೆಚ್ಚಿದೆ. ಒಬ್ಬನಿಂದಲೇ ಟೀಮ್ ಇಂಡಿಯಾ ಎಂಬ ಭ್ರಮೆ ಇದೆ. ಇದೀಗ ಆ ಭ್ರಮೆ ಬಿಡಬೇಕಿದೆ. ಟೀಮ್ ವರ್ಕ್ ಎಂಬ ಎಥಿಕ್ ಫಾಲೋ ಮಾಡಬೇಕಿದೆ. ಗಂಭೀರ್, ಹೆಡ್ ಕೋಚ್ ಆಗಿ ಬಂದ್ಮೇಲೆ ಈ ಕೆಲಸ ಮಾಡ್ತಿದ್ದಾರೆ. ಫ್ಯಾನ್ಸ್ ಕೂಡ ಟೀಮ್ ಇಂಡಿಯಾ ಒಬ್ಬರಿಂದಲ್ಲ ಎಂಬ ನಿಜ ಅರಿಯಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ