/newsfirstlive-kannada/media/post_attachments/wp-content/uploads/2025/06/South_Africa.jpg)
ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025ರ ಟ್ರೋಫಿಯನ್ನು ದಕ್ಷಿಣ ಆಫ್ರಿಕಾ ಗೆದ್ದುಕೊಂಡಿದೆ. ಇಂಗ್ಲೆಂಡ್ನ ಲಾರ್ಡ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 5 ವಿಕೆಟ್ಗಳಿಂದ ಆಫ್ರಿಕಾ ಗೆಲುವು ಸಾಧಿಸಿದೆ.
ಐಸಿಸಿ ಟ್ರೋಫಿಯೊಂದನ್ನು ಬರೋಬ್ಬರಿ 27 ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾ ತಂಡ ಗೆದ್ದುಕೊಂಡಿದೆ. ಈ ಮೂಲಕ 27 ವರ್ಷಳಿಂದ ಇದ್ದಂತಹ ಚೋಕರ್ಸ್ ಪಟ್ಟವನ್ನು ನಾಯಕ ಟೆಂಬಾ ಬವುಮಾ ನೇತೃತ್ವದಲ್ಲಿ ಕಳಚಿದಂತೆ ಆಗಿದೆ. ಆಸ್ಟ್ರೇಲಿಯಾ ವಿರುದ್ಧ ಗೆಲುವು ಪಡೆದಿರುವುದು ಐತಿಹಾಸಿಕ ದಾಖಲೆ ಆಗಿದೆ. ಆಸ್ಟ್ರೇಲಿಯಾ ತಂಡವನ್ನು ಫೈನಲ್ನಲ್ಲಿ ಮಣಿಸುವುದು ಅಷ್ಟೊಂದು ಸುಲಭ ಅಲ್ಲ.
ಇದನ್ನೂ ಓದಿ: ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟ್ರೋಫಿಗೆ ಮುತ್ತಿಕ್ಕಿದ ದಕ್ಷಿಣ ಆಫ್ರಿಕಾ.. ಆಸೀಸ್ಗೆ ಭಾರೀ ಮುಖಭಂಗ
ಆದರೆ ಎಲ್ಲ ಕಠಿಣ ಸವಾಲುಗಳನ್ನು ಮೆಟ್ಟಿನಿಂತ ದಕ್ಷಿಣ ಆಫ್ರಿಕಾ ಅಮೋಘವಾದ ವಿಜಯ ಸಾಧಿಸಿದೆ. 1998ರ ನಂತರ ಮೊದಲ ಬಾರಿಗೆ ಪುರುಷರ ಐಸಿಸಿ ಸೀನಿಯರ್ ಟ್ರೋಫಿಯನ್ನು ಟೆಂಬಾ ಬವುಮಾ ನೇತೃತ್ವದ ತಂಡ ಆಫ್ರಿಕಾಕ್ಕೆ ತಂದುಕೊಟ್ಟಿದ್ದಾರೆ. ಕಳೆದ ವರ್ಷ ಟೀಮ್ ಇಂಡಿಯಾ ವಿರುದ್ಧದ ಟಿ20 ಫೈನಲ್ ಪಂದ್ಯದಲ್ಲಿ ಆಫ್ರಿಕಾ ಸೋಲುಂಡಿತ್ತು. ಈ ವೇಳೆ ಆಟಗಾರರು ಭಾರೀ ನಿರಾಸೆಗೆ ಒಳಗಾಗಿದ್ದರು. ಇದೊಂದೆ ಅಲ್ಲ, 27 ವರ್ಷಗಳಿಂದಲೂ ಐಸಿಸಿ ಟೂರ್ನಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದ ಈ ತಂಡ ಎಷ್ಟೋ ಭಾರಿ ಸೆಮಿಫೈನಲ್, ಫೈನಲ್ಗೆ ಬಂದು ವಾಪಸ್ ಮನೆಗೆ ಹೋಗುತ್ತಿತ್ತು.
ಮೊದಲು ಆಗುತ್ತಿದ್ದ ತಪ್ಪುಗಳು ಆಗದಂತೆ ಈ ಬಾರಿ ದೊಡ್ಡ ಯೋಜನೆಗಳನ್ನು ರೂಪಿಸಿದ್ದ ಟೀಮ್ ಫೈನಲ್ನಲ್ಲಿ ಆಸ್ಟ್ರೇಲಿಯಾವನ್ನು ಮಣ್ಣುಮುಕ್ಕಿಸಿ ಟ್ರೋಫಿಯೊಂದಿಗೆ ವಿಜಯಮಾಲೆ ಧರಿಸಿಕೊಂಡಿದೆ. ಇನ್ನು ಟ್ರೋಫಿ ಗೆಲ್ಲುತ್ತಿದ್ದಂತೆ ಎಲ್ಲ ಆಟಗಾರರು ಹಾಗೂ ಸ್ಟೇಡಿಯಂ ಗ್ಯಾಲರಿಗಳಲ್ಲಿ ಕುಳಿತ್ತಿದ್ದ ಹಲವು ಅಭಿಮಾನಿಗಳು ಕಣ್ಣೀರು ಹಾಕಿರುವುದು ಕಂಡು ಬಂದಿದೆ.
Congratulate south africa wtc
2025!!💐💐💐
Best wishes
New world test champions is here!!#WtcFinal2025#WTC25pic.twitter.com/ppGZqfBlCj— Manisha Prajapati (@Manishagola123) June 14, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ