/newsfirstlive-kannada/media/post_attachments/wp-content/uploads/2025/02/HINDU-STUDENT.jpg)
ದಕ್ಷಿಣ ಆಫ್ರಿಕಾದ ಶಿಕ್ಷಕನೊಬ್ಬ ಹಿಂದೂ ವಿದ್ಯಾರ್ಥಿಯು ಕೈಗೆ ಕಟ್ಟಿಕೊಂಡಿದ್ದ ದೇವರಿಗೆ ಸಂಬಂಧಿಸಿದ ದಾರವನ್ನು ಕತ್ತರಿಸಿ ಆತನಿಗೆ ಅವಮಾನ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಕೆರಳಿದ ದಕ್ಷಿಣ ಆಫ್ರಿಕಾದ ಹಿಂದೂ ಸಮುದಾಯ ಇದನ್ನು ತೀವ್ರವಾಗಿ ಖಂಡಿಸಿದೆ. ಇದೊಂದು ಸೂಕ್ಷ್ಮತೆಯಿಲ್ಲದ ಹಾಗೂ ಬೇಜವಾಬ್ದಾರಿ ಕಾರ್ಯ ಎಂದು ಆಕ್ರೋಶ ಹೊರಹಾಕಿದೆ.
ಈ ಒಂದು ಘಟನೆ ಕಳೆದ ವಾರ ಡ್ರ್ಯಾಕನ್ಸ್ಬರ್ಗ್ ಸೆಂಕಡರಿ ಸ್ಕೂಲ್ನಲ್ಲಿ ನಡೆದಿದೆ. ಇದು ಕ್ವಾಜುಲು ನಟಲಾ ಪ್ರಾಂತ್ಯದಲ್ಲಿದೆ. ಈ ಒಂದು ಕ್ರಮವನ್ನ ದಕ್ಷಿಣ ಆಫ್ರಿಕಾದ ಹಿಂದೂ ಮಹಾಸಭಾ ತೀವ್ರವಾಗಿ ಖಂಡಿಸಿದ್ದು ಶಿಕ್ಷಣ ಪ್ರಾಧಿಕಾರಕ್ಕೆ ಕೂಡಲೇ ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸಿದೆ. ಮಣಿಕಟ್ಟಿಗೆ ಕಟ್ಟಿಕೊಂಡಿದ್ದ ಪವಿತ್ರದಾರವನ್ನು ಶಿಕ್ಷಕ ಶಾಲೆಯಲ್ಲಿ ಧರ್ಮವನ್ನು ಪ್ರತಿನಿಧಿಸುವ ಸಂಸ್ಕೃತಿಯನ್ನು ಪ್ರತಿನಿಧಿಸುವ ಸಂಕೇತಗಳನ್ನ ಯಾವುದೇ ರೀತಿ ಧರಿಸುವಂತಿಲ್ಲ ಎಂದು ವಿದ್ಯಾರ್ಥಿಯ ಮಣಿಕಟ್ಟು ದಾರವನ್ನ ಕತ್ತರಿಸಿ ಹಾಕಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ:ಅಕ್ರಮ ವಲಸಿಗ ಭಾರತೀಯರ ಗಡಿಪಾರಿಗೆ ಸಜ್ಜಾದ ಟ್ರಂಪ್; ಮಿಲಿಟರಿ ವಿಮಾನದಲ್ಲಿ ಹೊರಟ ಇಂಡಿಯನ್ಸ್!
ಇನ್ನು ಘಟನೆಯನ್ನು ಖಂಡಿಸಿರುವ ದಕ್ಷಿಣ ಆಫ್ರಿಕಾದ ಹಿಂದೂ ಮಹಾಸಭಾ. ಇದೊಂದು ಧಾರ್ಮಿಕ ಅಸಹಿಷ್ಣುತೆ. ಇದರ ಬಗ್ಗೆ ಸಂಪೂರ್ಣವಾಗಿ ತನಿಖೆಯಾಗಬೇಕು. ಶಿಕ್ಷಣ ವಿರುದ್ಧ ಕ್ರಮವಾಗಬೇಕು ಎಂದು ಆಗ್ರಹಿಸಿದೆ. ಶಾಲಾ ಮಂಡಳಿ ಈಗಾಗಲೇ ಈ ಬಗ್ಗೆ ತನಿಖೆಯನ್ನು ಕೈಗೊಂಡಿದೆ ಆದರೆ ಈ ದಾರವನ್ನು ಕತ್ತರಿಸಿಕೊಂಡ ವಿದ್ಯಾರ್ಥಿ ಹೇಳಿಕೆ ಕೊಡಲು ಮುಂದೆ ಬರುತ್ತಿಲ್ಲ. ಮುಂದೆ ತನಗೆ ಯಾವುದಾದರೂ ರೀತಿ ಶೈಕ್ಷಣಿಕವಾಗಿ ಸಮಸ್ಯೆಯಾಗಬಹುದು ಎಂಬ ಉದ್ದೇಶದಿಂದ ಯಾವುದೇ ಹೇಳಿಕೆ ನೀಡುತ್ತಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಪ್ರೇಮಿಗಳೇ ಹುಷಾರ್.. ನಿಮ್ಮ ಲವರ್ಗೆ ಪ್ರಪೋಸ್ ಮಾಡುವಾಗ ಈ ತಪ್ಪು ಮಾತ್ರ ಮಾಡಬೇಡಿ!
ಇನ್ನು ದಕ್ಷಿಣ ಆಫ್ರಿಕಾದ ಹಿಂದೂ ಮಹಾಸಭಾದ ಅಧ್ಯಕ್ಷ ಅಶ್ವಿನ್ ತ್ರಿಕಮ್ಜೀ ಈ ಬಗ್ಗೆ ಶಾಲೆಯ ಪ್ರಾಂಶುಪಾಲರು ಹಾಗೂ ಚೇರ್ಮೆನ್ರೊಂದಿಗೆ ಮಾತನಾಡಿದ್ದು. ನಾವೆಲ್ಲರೂ ಹಿಂದೂಗಳು, ನಿಮ್ಮ ಶಾಲೆಯಲ್ಲಿ ರಿಂಗು, ಸ್ಟ್ರಿಂಗು ಹಾಕಿಕೊಂಡು ಬರಲು ಉಳಿದ ವಿದ್ಯಾರ್ಥಿಗಳಿಗೆ ಅವಕಾಶವಿದೆ. ನಮ್ಮ ಹಿಂದೂ ವಿದ್ಯಾರ್ಥಿಗೆ ಪವಿತ್ರ ದಾರ ಕಟ್ಟಿಕೊಂಡು ಬರಲು ಯಾಕೆ ಅವಕಾಶವಿಲ್ಲ. ಅವನ ವಿರುದ್ಧ ಈ ರೀತಿ ನಡೆದುಕೊಂಡಿರುವುದು ನಿಜಕ್ಕೂ ಅನ್ಯಾಯ ಎಂದು ಹೇಳಿರುವುದಾಗಿ ಇಂಡಿಯನ್ ರೇಡಿಯೋ ಸ್ಟೇಷನ್ ಲೋಟಸ್ ಎಫ್ಎಂಗೆ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ