ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಟ್ರೋಫಿಗೆ ಮುತ್ತಿಕ್ಕಿದ ದಕ್ಷಿಣ ಆಫ್ರಿಕಾ.. ಆಸೀಸ್​ಗೆ ಭಾರೀ ಮುಖಭಂಗ

author-image
Bheemappa
Updated On
WTC ಟ್ರೋಫಿ ಗೆಲ್ಲಿಸಿಕೊಟ್ಟ ಆಫ್ರಿಕಾ ಕ್ಯಾಪ್ಟನ್​ಗೆ ಬಿಗ್ ಶಾಕ್​.. ಟೆಸ್ಟ್​ ಸರಣಿಯಿಂದ ಹೊರಕ್ಕೆ
Advertisment
  • 2 ಇನ್ನಿಂಗ್ಸ್​ನಲ್ಲೂ ಮಾರಕ ಬೌಲಿಂಗ್ ಮಾಡಿರುವ ಕಗಿಸೋ ರಬಾಡ
  • ಟ್ರೋಫಿಯೊಂದಿಗೆ ಸೆಲೆಬ್ರೆಷನ್ ಮಾಡಿದ ದಕ್ಷಿಣ ಆಫ್ರಿಕಾ ಪ್ಲೇಯರ್ಸ್​
  • ಓಪನರ್​ ಶತಕ, ಕ್ಯಾಪ್ಟನ್​ ಅರ್ಧಶತಕ ಆಫ್ರಿಕಾಕ್ಕೆ ದೊಡ್ಡ ಕೊಡುಗೆ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025ರ ಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ಅಮೋಘ ಗೆಲುವು ಪಡೆಯುವ ಮೂಲಕ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿ ಐತಿಹಾಸಿಕ ದಾಖಲೆ ಮಾಡಿದೆ. ಕ್ರಿಕೆಟ್ ತವರು ಲಾರ್ಡ್ಸ್ ಮೈದಾನದಲ್ಲಿ ಆಸ್ಟ್ರೇಲಿಯಾ ತಂಡವನ್ನು ದಕ್ಷಿಣ ಆಫ್ರಿಕಾ ಸೋಲಿಸಿ 27 ವರ್ಷಗಳ ಬಳಿಕ ಐಸಿಸಿ ಟ್ರೋಫಿಯನ್ನು ಗೆದ್ದುಕೊಂಡಿದೆ.

ಇಂಗ್ಲೆಂಡ್​ನ ಲಾರ್ಡ್ಸ್‌ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025ರ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಎದುರಾಳಿಯನ್ನ ಬ್ಯಾಟಿಂಗ್​ಗೆ ಆಹ್ವಾನ ಮಾಡಿದ್ದರು. ಅದರಂತೆ ಬ್ಯಾಟಿಂಗ್​ಗೆ ಬಂದಿದ್ದ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 212 ರನ್​ಗಳಿಗೆ ಆಲೌಟ್​ ಆಗಿತ್ತು.

ಬಳಿಕ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ ಕೇವಲ 138 ರನ್​ಗೆ ಆಲೌಟ್ ಆಗಿ ಕೆಟ್ಟ ಪ್ರದರ್ಶನ ನೀಡಿತ್ತು. ಆದರೆ ಬೌಲಿಂಗ್​ನಲ್ಲಿ ರಬಾಡ ಅವರ ಮಾರಕ ದಾಳಿಗೆ ಆಸ್ಟ್ರೇಲಿಯಾ ಆಟಗಾರರು ಪತರುಗುಟ್ಟಿದರು. ಮೊದಲ ಇನ್ನಿಂಗ್ಸ್​ ಹಾಗೂ 2ನೇ ಇನ್ನಿಂಗ್ಸ್​ ಎರಡರಲ್ಲೂ ರಬಾಡ ಬೌಲಿಂಗ್​ ಆಸೀಸ್​ ಬ್ಯಾಟರ್​​ಗಳಿಗೆ ಕಬ್ಬಿಣದ ಕಡಲೆ ಆಯಿತು. ಹೀಗಾಗಿ ಪೇಸ್​ ಬೌಲರ್​ ಮಿಚೆಲ್ ಸ್ಟಾರ್ಕ್​​ ಹಾಫ್​ಸೆಂಚುರಿ ಬಿಟ್ಟರೇ ಉಳಿದವರು ಒಳ್ಳೆಯ ಉತ್ತಮ ಬ್ಯಾಟಿಂಗ್ ಮಾಡಲಿಲ್ಲ. ಹೀಗಾಗಿ 2ನೇ ಇನ್ನಿಂಗ್ಸ್​ನಲ್ಲಿ ಆಸೀಸ್​ 207 ರನ್​ಗೆ ತನ್ನೆಲ್ಲಾ ವಿಕೆಟ್​ ಕಳೆದುಕೊಂಡಿತ್ತು.

ಇದನ್ನೂ ಓದಿ:ಮಾರ್ಕ್ರಾಮ್ ಭರ್ಜರಿ ಶತಕ.. ವಿಶ್ವ ಟೆಸ್ಟ್ ಚಾಂಪಿಯನ್‌ ಆಗಲು ತುದಿಗಾಲಲ್ಲಿ ನಿಂತ ದಕ್ಷಿಣ ಆಫ್ರಿಕಾ

publive-image

ನಿನ್ನೆ ಕೇವಲ ಎರಡು ವಿಕೆಟ್​ ಕಳೆದುಕೊಂಡು 213 ರನ್​ ಗಳಿಸಿದ್ದ ಆಫ್ರಿಕಾ ಇಂದಿಗೆ ಬ್ಯಾಟಿಂಗ್​ ಕಾಯ್ದುಕೊಂಡಿತ್ತು. ಅದರಂತೆ 213 ರನ್​ಗಳಿಂದ ಬ್ಯಾಟಿಂಗ್ ಮುಂದುವರೆಸಿದ್ದ ಆಫ್ರಿಕಾ 66 ರನ್​ಗೆ ನಾಯಕ ಟೆಂಬಾ ಬವುಮಾ ಔಟ್ ಆದರು. ಐಡೆನ್ ಮಾರ್ಕ್ರಾಮ್​ ಈ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲಿ ಒಟ್ಟು 207 ಎಸೆತಗಳನ್ನು ಎದುರಿಸಿದ್ದು 14 ಬೌಂಡರಿಗಳಿಂದ 136 ರನ್​ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಗೆಲುವಿಗೆ ಇನ್ನು 5 ರನ್​ ಇಡುವಾಗ ಟ್ರಾವಿಸ್​ ಹೆಡ್​ಗೆ ಕ್ಯಾಚ್​ ಕೊಟ್ಟು ಹೊರ ನಡೆದರು. ಆದರೆ ನಂತರ ಬಂದ ಬ್ಯಾಟರ್​ಗಳು ಗೆಲುವಿನ ದಡ ಸೇರಿಸಿದರು.

ಒಟ್ಟು 282 ರನ್​ಗಳ ಟಾರ್ಗೆಟ್ ಪಡೆದುಕೊಂಡಿದ್ದ ಆಫ್ರಿಕಾ ಟೆಸ್ಟ್​ನ 4ನೇ ದಿನದಲ್ಲಿ ಅಮೋಘವಾದ ಗೆಲುವು ದಾಖಲು ಮಾಡಿದೆ. 27 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆದ್ದು ಸಂಭ್ರಮದಲ್ಲಿ ತೇಲಿದೆ. ಆಫ್ರಿಕಾ ತಂಡ ಇದರೊಂದಿಗೆ ಪ್ರಥಮ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆಗಿ ಹೊರ ಹೊಮ್ಮಿದೆ. ಐಡೆನ್ ಮಾರ್ಕ್ರಾಮ್​ ಅವರ ಭರ್ಜರಿ ಶತಕ ಗೆಲುವಿಗೆ ದೊಡ್ಡ ಕೊಡುಗೆಯೇ ಎಂದು ಹೇಳಬಹುದು. ಇದರ ಜೊತೆಗೆ ನಾಯಕ ಟೆಂಬಾ ಬವುಮಾ ಅವರ ಅರ್ಧಶತಕ ಕೂಡ ನೆರವಾಯಿತು. ಎರಡೂ ಇನ್ನಿಂಗ್ಸ್​​ನಲ್ಲೂ ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾಗೆ ಸಿಂಹಸ್ವಪ್ನವಾಗಿ ಕಾಡಿದ ಕಗಿಸೋ ರಬಾಡ ಒಟ್ಟು 9 ವಿಕೆಟ್​ ಉರುಳಿಸಿ ಬಹುದೊಡ್ಡ ಕೊಡುಗೆ ನೀಡಿದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment