/newsfirstlive-kannada/media/post_attachments/wp-content/uploads/2024/10/JOB_RAILWYA_1.jpg)
ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಆಗ್ನೇಯ ರೈಲ್ವೆ ಇಲಾಖೆ ಅರ್ಜಿಗಳನ್ನು ಆಹ್ವಾನ ಮಾಡಿದೆ. ಇದಕ್ಕೆ ಯುವಕ, ಯುವತಿಯರಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಆಸಕ್ತಿ ಉಳ್ಳವರು ಈ ಕೆಲಸಗಳಿಗೆ ಪ್ರಯತ್ನ ಮಾಡಬಹುದು. ಅಪ್ರೆಂಟಿಸ್ ಹುದ್ದೆಗಳು ಆಗಿದ್ದರಿಂದ ಮುಂದೆ ನೀವು ರೈಲ್ವೆ ಇಲಾಖೆಯ ಇತರೆ ಡಿಪಾರ್ಟ್ಮೆಂಟ್ಗಳಲ್ಲಿ ಕೆಲಸ ಮಾಡಲು ಅಪ್ರೆಂಟಿಸ್ ಪ್ರಮಾಣ ಪತ್ರ ಬಹುಮುಖ್ಯ ಪಾತ್ರವಹಿಸುತ್ತದೆ.
ಹೀಗಾಗಿ ಯಾರು ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಬಯಸುವರೋ ಅವರಿಗೆ ಇದೊಂದು ಸುವರ್ಣ ಅವಕಾಶ ಆಗಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅಪ್ಲೇ ಮಾಡಬೇಕು. ವೆಬ್‌ಸೈಟ್ rrcser.co.in ಆಗಿದೆ. ಈ ಉದ್ಯೋಗಗಳಿಗೆ ನವೆಂಬರ್ 27ರಂದು ಅಧಿಸೂಚನೆ ರಿಲೀಸ್ ಮಾಡಲಾಗಿತ್ತು. ಅರ್ಜಿ ನವೆಂಬರ್ 28ರಂದೇ ಪ್ರಾರಂಭವಾಗಿದ್ದು ಡಿಸೆಂಬರ್ 27 ರಂದು ಕೊನೆಗೊಳ್ಳಲಿವೆ. ಹೀಗಾಗಿ ತಕ್ಷಣದಿಂದಲೇ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಮುಂದಾಗಬೇಕು.
ಇದನ್ನೂ ಓದಿ: ಸರ್ಕಾರಿ ಉದ್ಯೋಗ ಅರ್ಜಿಗೂ 18% GST; ಮೋದಿ ಸರ್ಕಾರದ ಮೇಲೆ ಪ್ರಿಯಾಂಕಾ ಕಿಡಿ!
ಒಟ್ಟು ಅಪ್ರೆಂಟಿಸ್ ಪೋಸ್ಟ್ಗಳು 1785 ಇದ್ದು 10 ನೇ ತರಗತಿ ಮತ್ತು ITI, ಪಿಯುಸಿ ಉತ್ತೀರ್ಣರಾದ ಅಭ್ಯರ್ಥಿಗಳು RRC SER ಅಪ್ರೆಂಟಿಸ್ ನೇಮಕಾತಿ 2024ಗೆ ಅರ್ಹರು ಆಗಿರುತ್ತಾರೆ. ಇದರ ಜೊತೆಗೆ 15 ರಿಂದ 24 ವರ್ಷಗಳ ಒಳಗಿನವರಿಗೆ ಇಲ್ಲಿ ಅವಕಾಶ ನೀಡಲಾಗುತ್ತದೆ. ಜನರಲ್ ಅಭ್ಯರ್ಥಿಗಳಿಗೆ 100 ರೂಪಾಯಿ ಅರ್ಜಿ ಶುಲ್ಕವಿದ್ದು ಉಳಿದ ಅಭ್ಯರ್ಥಿಗಳು ಶುಲ್ಕ ಇಲ್ಲ.
ಈ ಉದ್ಯೋಗಗಳು ಅಪ್ರೆಂಟಿಸ್ ಆದರೂ ಆಗ್ನೇಯ ರೈಲ್ವೆ ಇಲಾಖೆ ಮಾಸಿಕ ವೇತನವನ್ನು ನೀಡುತ್ತದೆ. ಹೀಗಾಗಿ ಅಭ್ಯರ್ಥಿಗಳು ಸಂಬಳವನ್ನು ಕೂಡ ಪಡೆಯಬಹುದು. ಅರ್ಹ ಅಭ್ಯರ್ಥಿಗಳು ಆಗ್ನೇಯ ರೈಲ್ವೆಯ ಅಧಿಕೃತ ವೆಬ್‌ಸೈಟ್ www.rrcser.co.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅಪ್ಲಿಕೇಶನ್ ಪೋರ್ಟಲ್ link-https://iroams.com/RRCSER24/. ಆಗಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ