/newsfirstlive-kannada/media/post_attachments/wp-content/uploads/2025/02/Bhanupriya-New.jpg)
ಒಂದು ಕಾಲದ ಕನ್ನಡದ ಸ್ಟಾರ್ ಹೀರೋಯಿನ್. ರವಿಚಂದ್ರನ್ ಅಭಿನಯದ ರಸಿಕ ಸಿನಿಮಾದ ಮೂಲಕವೇ ಸೈ ಎನಿಸಿಕೊಂಡ ನಾಯಕಿ ಭಾನುಪ್ರಿಯಾ. ಇವರನ್ನು ಯಾರು ಮರೆಯಲು ಸಾಧ್ಯವೇ ಇಲ್ಲ.
ದೇವರ ಮಗ, ಸಿಂಹಾದ್ರಿಯ ಸಿಂಹ, ಕದಂಬ, ಮೇಷ್ಟ್ರು ಹೀಗೆ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ನಟಿಸಿದವರು ಇವರು. ಇಷ್ಟೇ ಅಲ್ಲ ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲೂ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಈಗ 57 ವರ್ಷದ ಈ ನಟಿ ಬಗ್ಗೆ ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ.
ಪತಿ ಸಾವು ತಂದಿಟ್ಟ ನೋವು
ನಟಿ ಭಾನುಪ್ರಿಯಾ 26 ವರ್ಷಗಳ ಹಿಂದೆ ಆದರ್ಶ್ ಕೌಶಲ್ ಎಂಬುವವರನ್ನು ಮದುವೆ ಆಗಿದ್ದರು. ಈ ಜೋಡಿಗೆ ಅಭಿನಯ ಎಂಬ ಮಗಳು ಇದ್ದಾಳೆ. ಇವರು ತನ್ನ ಗಂಡನಿಂದ ಡಿವೋರ್ಸ್ ಪಡೆದಿದ್ದಾರೆ ಎನ್ನಲಾಗಿತ್ತು. ಆದರೀಗ, ತನ್ನ ಗಂಡ ಹಾರ್ಟ್ ಅಟ್ಯಾಕ್ನಿಂದ ಸಾವನ್ನಪ್ಪಿದ್ದಾರೆ ಎಂಬ ವಿಚಾರ ತಿಳಿಸಿದ್ದಾರೆ. ಆದರ್ಶ್ 2018ರಲ್ಲೇ ತಮ್ಮನ್ನು ಅಗಲಿದರು ಎಂದು ಹೇಳಿದ್ದಾರೆ.
ಈ ಬಗ್ಗೆ ಏನಂದ್ರು ಭಾನುಪ್ರಿಯಾ?
ಗಂಡನ ಸಾವಿನ ಬಳಿಕ ತನ್ನಲ್ಲಿ ಸ್ಮರಣಶಕ್ತಿಯೇ ಇಲ್ಲದಂತಾಗಿದೆ ಎನ್ನುವ ವಿಚಾರ ಬಹಿರಂಗ ಪಡಿಸಿದ್ದಾರೆ. ಇಷ್ಟೇ ಅಲ್ಲ ಪತಿಯ ಅಗಲಿಕೆ ನಂತರ ನಾನು ಸಿನಿಮಾಗಳಲ್ಲಿ ನಟಿಸುವುದೇ ಬಿಟ್ಟೆ. ಏಕೋ ಮನಸ್ಸಿಗೆ ನೆಮ್ಮದಿ ಇಲ್ಲ. ಇವರ ಸಾವಿನ ಶಾಕ್ನಿಂದ ಹೊರಬರುವುದು ಕಷ್ಟ. ಆರೋಗ್ಯ ಸಮಸ್ಯೆಯಿಂದ ನನ್ನ ನೆನಪಿನ ಶಕ್ತಿಯೇ ಕುಂದಿದೆ ಎಂದಿದ್ದಾರೆ.
ಕಳೆದ 2 ವರ್ಷಗಳಿಂದ ಈ ಸಮಸ್ಯೆ ಇದೆ. ಇದೇ ಕಾರಣಕ್ಕೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ನಾನು ಕೂಚುಪುಡಿ ನೃತ್ಯ ಕಲಿತಿದ್ದೇನೆ. ಮೆಮೋರಿ ಲಾಸ್‌ನಿಂದ ಅದು ಸಾಧ್ಯವಾಗುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.
ಇದನ್ನೂ ಓದಿ:ಕೊನೆಯ ಪಂದ್ಯದಲ್ಲೂ ಇಂಗ್ಲೆಂಡ್ಗೆ ಹೀನಾಯ ಸೋಲು; ಟೀಮ್ ಇಂಡಿಯಾಗೆ 142 ರನ್ಗಳ ಭರ್ಜರಿ ಜಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ