/newsfirstlive-kannada/media/post_attachments/wp-content/uploads/2025/07/sanjay_gaikwad.jpg)
ನವದೆಹಲಿ: ಕ್ಯಾಂಟೀನ್ ಗುತ್ತಿಗೆದಾರರ ಮೇಲೆ ಜುಲೈ 9 ರಂದು ಹಲ್ಲೆ ನಡೆಸಿದ್ದ ಮಹಾರಾಷ್ಟ್ರದ ಏಕನಾಥ್ ಶಿಂಧೆ ಬಣದ ಶಿವಸೇನೆಯ ಶಾಸಕ ಸಂಜಯ ಗಾಯಕವಾಡ್, ಇಂದು ದಕ್ಷಿಣ ಭಾರತೀಯರ ಬಗ್ಗೆ ಆಕ್ಷೇಪಾರ್ಹ ಪದ ಬಳಸಿ ಟೀಕೆ ಮಾಡಿದ್ದಾರೆ.
ದಕ್ಷಿಣ ಭಾರತದ ಜನರು ಡ್ಯಾನ್ಸ್ ಬಾರ್ ಮತ್ತು ಲೇಡೀಸ್ ಬಾರ್​ಗಳನ್ನು ನಡೆಸುತ್ತಾರೆ. ಅಂಥವರಿಗೆ ಮಹಾರಾಷ್ಟ್ರದಲ್ಲಿ ಫುಡ್ ಪೂರೈಕೆಯ ಗುತ್ತಿಗೆ ನೀಡಬಾರದಾಗಿತ್ತು. ಶೆಟ್ಟಿ ಹೆಸರಿನವರಿಗೆ ಕಂಟ್ರಾಕ್ಟರ್​ಗೆ ಗುತ್ತಿಗೆ ನೀಡಿದ್ದು ಏಕೆ?. ಕ್ಯಾಂಟೀನ್ ಗುತ್ತಿಗೆಯನ್ನು ಮರಾಠಿ ವ್ಯಕ್ತಿಗೆ ನೀಡಿ. ಮರಾಠಿ ಜನರಿಗೆ ನಾವು ಏನು ತಿನ್ನುತ್ತೇವೆ ಅನ್ನೋದು ಗೊತ್ತು. ನಮಗೆ ಮರಾಠಿ ಜನರು ಉತ್ತಮ ಗುಣಮಟ್ಟದ ಆಹಾರ ನೀಡುತ್ತಾರೆ. ದಕ್ಷಿಣ ಭಾರತೀಯರು ಡ್ಯಾನ್ಸ್ ಬಾರ್ ಮತ್ತು ಲೇಡೀಸ್ ಬಾರ್​ಗಳನ್ನು ನಡೆಸುತ್ತಾ, ಮಹಾರಾಷ್ಟ್ರದ ಸಂಸ್ಕೃತಿಯನ್ನ ಹಾಳು ಮಾಡುತ್ತಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ಗುರು ಪೂರ್ಣಿಮಾ ದಿನವೇ ದತ್ತಾತ್ರೇಯ ಸನ್ನಿಧಿಯಲ್ಲಿ ಜೀವ ಚೆಲ್ಲಿದ ಮಹಿಳಾ ಭಕ್ತೆ
/newsfirstlive-kannada/media/post_attachments/wp-content/uploads/2025/07/sanjay_gaikwad_1.jpg)
ದಕ್ಷಿಣ ಭಾರತೀಯರು ನಮ್ಮ ಮಕ್ಕಳನ್ನು ಭ್ರಷ್ಟರನ್ನಾಗಿ ಮಾಡುತ್ತಿದ್ದಾರೆ. ಇಂಥವರು ಹೇಗೆ ನಮಗೆ ಒಳ್ಳೆಯ ಪುಡ್ ನೀಡುತ್ತಾರೆ ಎಂದು ಶಿಂಧೆ ಶಿವಸೇನೆಯ ಶಾಸಕ ಸಂಜಯ ಗಾಯಕವಾಡ್ ಹೇಳಿದ್ದಾರೆ. ಸಂಜಯ್ ಗಾಯಕವಾಡ್ ಹೇಳಿಕೆಯು ದಕ್ಷಿಣ ಭಾರತೀಯರ ಆಕ್ಷೇಪಕ್ಕೆ ಕಾರಣವಾಗಿದೆ. ದಕ್ಷಿಣ ಭಾರತದ ಜನರನ್ನು ನಿಂದಿಸುವ ಹೇಳಿಕೆಯನ್ನು ಶಾಸಕ ಸಂಜಯ ಗಾಯಕವಾಡ್ ನೀಡಿದ್ದಾರೆ ಎಂದು ಜನರು ಖಂಡಿಸಿದ್ದಾರೆ. ಈ ಸಂಜಯ ಗಾಯಕವಾಡ್ ಈ ಹಿಂದೆಯೂ ಬೇರೆ ಬೇರೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us