/newsfirstlive-kannada/media/post_attachments/wp-content/uploads/2024/12/MAJOR-PLANE-CRASH.jpg)
181 ಪ್ರಯಾಣಿಕರನ್ನು ಹೊತ್ತುಕೊಂಡು ಹೋಗುತ್ತಿದ್ದ ವಿಮಾನವೊಂದು ದಕ್ಷಿಣ ಕೊರಿಯಾದಲ್ಲಿ ಪತನಗೊಂಡಿದ್ದು ಈಡಿ ಜಗತ್ತನ್ನೆ ಬೆಚ್ಚಿಬೀಳಿಸಿದೆ. 181 ಪ್ರಯಾಣಿಕರಲ್ಲಿ ಬದುಕು ಉಳಿದಿದ್ದು ಕೇವಲ ಇಬ್ಬರು ಮಾತ್ರ ಅಂದ್ರೆ ಆ ದುರಂತದ ಭೀಕರತೆ ಎಷ್ಟು ಇರಬೇಕು ಎಂಬ ಅಂದಾಜು ನಮಗೆ ಸಿಗುತ್ತದೆ. ಆದ್ರೆ ಜಗತ್ತು ಇದಕ್ಕಿಂತ ರಣಭೀಕರ ದುರಂತವನ್ನು ಕಂಡಿದೆ. ಅನೇಕ ರಾಷ್ಟ್ರಗಳು ಅಂತಹ ದುರಂತಗಳಿಗೆ ಮೂಕ ಸಾಕ್ಷಿಯಾಗಿ ನಿಂತಿವೆ ಅದರಲ್ಲಿ ಇಡೀ ಜಗತ್ತನ್ನೆ ತಲ್ಲಣಗೊಳಿಸಿದ ವಿಮಾನ ದುರಂತವೆಂದರೆ ಅಮೆರಿಕದ ವಿಶ್ವ ವಾಣಿಜ್ಯ ಕಟ್ಟಡಗಳ ಮೇಲೆ ನಡೆದ ವಿಮಾನ ದಾಳಿ.
1. ಸೆಪ್ಟಂಬರ್ 11ರ ದಾಳಿ
ಸೆಪ್ಟಂಬರ್ 11ರ ದಾಳಿ ಇದನ್ನು 9/11 ದಾಳಿ ಅಂತಲೂ ಕರೆಯುತ್ತಾರೆ. ನಾಲ್ಕು ಜನ ಭಯೋತ್ಪಾಕರು ನಡೆಸಿದ ಆತ್ಮಾಹುತಿ ದಾಳಿಯಿಂದ ಇಡೀ ಅಮೆರಿಕದಂತಹ ದೈತ್ಯ ರಾಷ್ಟ್ರವೇ ಒಮ್ಮೆ ನಡುಗಿ ಹೋಗಿತ್ತು. ಅಲ್ಖೈದಾ ಉಗ್ರರು ಪೆಂಟಾಗಾನ್ನಲ್ಲಿರುವ ವಿಶ್ವ ವಾಣಿಜ್ಯ ಕಟ್ಟಡಗಳ ಮೇಲೆ ವಿಮಾನ ನುಗ್ಗಿಸಿ ಘೋರ ದುರಂತಕ್ಕೆ ಸಾಕ್ಷಿಯಾಗಿದ್ದರು. ಈ ಘಟನೆಯ್ಲಿ ಸುಮಾರು 2,996 ಜನರು ಬಲಿಯಾಗಿದ್ದರು. ಸೆಪ್ಟಂಬರ್ 11, 2001ರಲ್ಲಿ ಈ ಘೋರ ದಾಳಿ ನಡೆದಿತ್ತು.
ಇದನ್ನೂ ಓದಿ:5 ಸ್ಟಾರ್ 7 ಸ್ಟಾರ್ ಕೇಳಿರುತ್ತೀರಾ.. 10 ಸ್ಟಾರ್ ಹೋಟೆಲ್ ಬಗ್ಗೆ ಗೊತ್ತಾ? ಇಡೀ ವಿಶ್ವದಲ್ಲಿ ಇದು ಒಂದೇ ಇರೋದು!
2 ಟೆನೆರಿಫ್ ಏರ್ಪೋರ್ಟ್ನಲ್ಲಿ ದುರಂತ
ಮಾರ್ಚ್ 27 ,1977ರಲ್ಲಿ ಸ್ಪೇನ್ನ ಟೆನೆರಿಫ್ನ ಲೊಸ್ ರೋಡೀಯಸ್ ಏರ್ಪೋರ್ಟ್ನಲ್ಲಿ ಒಂದು ಘನಘೋರ ದುರಂತ ನಡೆದು ಹೋಗಿತ್ತು ಎರಡು ಬೋಯಿಂಗ್ 747 ವಿಮಾನಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ಸುಮಾರು 583 ಜನರು ಜೀವ ಕಳೆದುಕೊಂಡಿದ್ದರು. ಎರಡು ವಿಮಾನದಲ್ಲಿ 14 ವಿಮಾನ ಸಿಬ್ಬಂದಿ ಸೇರಿದಂತೆ 234 ಹಾಗೂ 335 ಜನರು ಇದ್ದರು. ಇದನ್ನು ವಿಮಾನಯಾನದ ಇತಿಹಾದಲ್ಲಿಯೇ ನಡೆದ ಅತಿದೊಡ್ಡ ಅಪಘಾತ ಅಂತಲೇ ಕರೆಯುತ್ತಾರೆ. ಬೋಯಿಂಗ್ ವಿಮಾನ ಪೈಲೆಟ್ ಟೇಕಾಫ್ಗೆ ದಾರಿ ಕ್ಲಿಯರ್ ಇದೆ ಎಂಬ ಮೆಸೇಜ್ನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ಈ ಒಂದು ಘಟನೆ ನಡೆದಿತ್ತು.
3. ಜಪಾನ್ ಏರ್ಲೈನ್ಸ್ ವಿಮಾನ ದುರಂತ
ಬೋಯಿಂಗ್ 747 ವಿಮಾನವು ಸ್ಥಳೀಯ ಪ್ರಯಾಣಿಕರನ್ನು ಹೊತ್ತುಕೊಂಡು ಟೋಕಿಯೊದಿಂದ ಒಸಾಕಾಗೆ ಹೋರಡುವಾಗ ಒಂದು ದುರಂತ ನಡೆದಿತ್ತು. ಆಗಸ್ಟ್ 12, 1985ರಲ್ಲಿ ಡಿಕಂಪ್ರೆಷನ್ ಆದ ಪರಿಣಾಮ ದೊಡ್ಡದಾಗಿ ಸ್ಪೋಟಗೊಂಡು ವಿಮಾನ ಪತನಗೊಂಡಿತ್ತು. ಈ ದುರಂತದಲ್ಲಿ ಸುಮಾರು 520 ಜನರು ಪ್ರಯಾಣ ಮಾಡುತ್ತಿದ್ದರು. ಅದರಲ್ಲಿ ಉಳಿದುಕೊಂಡಿದ್ದು ಕೇವಲ ನಾಲ್ಕು ಜನ ಮಾತ್ರ ಬದುಕುಳಿದ್ದರು. ಉಳಿದ 516 ಜನರು ಪ್ರಾಣಬಿಟ್ಟಿದ್ದರು.
ಇದನ್ನೂ ಓದಿ:ವಿಮಾನ ದುರಂತದಲ್ಲಿ ಉಸಿರು ನಿಲ್ಲಿಸಿದ 179 ಪ್ರಯಾಣಿಕರು.. ಬದುಕಿದ್ದು ಇಬ್ಬರು ಮಾತ್ರ..
4. ಚರ್ಕಿ ದಾದ್ರಿ ದುರಂತ
1996ರಲ್ಲಿ ಆಗಸದಲ್ಲಿಯೇ ಎರಡು ವಿಮಾನಗಳು ಡಿಕ್ಕಿ ಹೊಡೆದ ಪರಿಣಾಮವಾಗಿ ಚರ್ಖಿ ದಾದ್ರಿ ಬಳಿ ದೊಡ್ಡದೊಂದು ದುರಂತ ಸಂಭವಿಸಿತ್ತು. ಬೋಯಿಂಗ್ 747 ದೆಹಲಿಯಿಂದ ದೆಹ್ರಾಡೂನ್ಗೆ ಹೊರಟ ವೇಳೆ ಸೌದಿ ಅರೇಬಿಯದ ವಿಮಾನಕ್ಕೆ ಮಧ್ಯ ಆಗಸದಲ್ಲಿ ಘರ್ಷಣೆಯಾದ ಕಾರಣ ವಿಮಾನ ಅಪಘಾತ ಉಂಟಾಗಿತ್ತು. 12 ನವೆಂಬರ್ 1996ರಲ್ಲಿ ನಡೆದ ಈ ಘಟನೆಯಲ್ಲಿ ಸುಮಾರು ಎರಡು ವಿಮಾನದಲ್ಲಿ ಒಟ್ಟು 349 ಜನರು ಜೀವ ಕಳೆದುಕೊಂಡಿದ್ದರು. ಕಜಕ್ ಪೈಲೆಟ್ ನಿಯಮಿತಗಿಂತ ಅತಿ ಕಡಿಮೆ ಮಟ್ಟದ ಎತ್ತರದಲ್ಲಿ ವಿಮಾನವನ್ನು ಹಾರಾಡಿಸಿದ್ದರಿಂದ ಈ ಘಟನೆ ಸಂಭವಿಸಿತ್ತು.
5. ಟರ್ಕಿಶ್ ಏರ್ಲೈನ್ ವಿಮಾನ
ಮಾರ್ಚ್-3 1974ರಂದು ಟರ್ಕಿಯ ವಿಮಾವೊಂದು ಪ್ಯಾರಿಸ್ನ ರಾಜಧಾನಿ ಫ್ರಾನ್ಸ್ನ ಬಳಿ ಕಾಡೊಂದರಲ್ಲಿ ಪತನಗೊಂಡಿತ್ತು. ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯಿಂದಾಗಿ ಈ ದುರ್ಘಟನೆ ನಡೆದಿತ್ತು. ವಿಮಾನದ ಕಾರ್ಗೊ ಡೋರ್ ಸ್ಥಳಾಂತರಗೊಂಡ ಪರಿಣಾಮ ವಿಮಾನದ ನಿಯಂತ್ರಣ ತಪ್ಪಿಕೊಂಡು ಕಾಡಿನಲ್ಲಿ ಪತನಗೊಂಡಿತ್ತು ಈ ಘಟನೆಯಲ್ಲಿ ವಿಮಾನದಲ್ಲಿದ್ದ ಎಲ್ಲಾ 346 ಪ್ರಯಾಣಿಕರು ಅಸುನೀಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ