/newsfirstlive-kannada/media/post_attachments/wp-content/uploads/2024/12/PLAN.jpg)
ಇಂದು ಬೆಳಗ್ಗೆ ದಕ್ಷಿಣ ಕೊರಿಯಾದಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಒಟ್ಟು 179 ಮಂದಿ ಜೀವ ಕಳೆದುಕೊಂಡಿದ್ದಾರೆ. ಪ್ರಯಾಣ ಮಾಡುತ್ತಿದ್ದ 181 ಮಂದಿಯಲ್ಲಿ ಬದುಕಿರೋದು ಕೇವಲ ಇಬ್ಬರು ಮಾತ್ರ. ಈ ಘೋರ ದುರಂತಕ್ಕೆ ಇಡೀ ವಿಶ್ವವೇ ಮರಗುತ್ತಿದೆ. ಮುವಾನ್ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿತ್ತು. ಪಕ್ಷಿಯೊಂದು ವಿಮಾನಕ್ಕೆ ಡಿಕ್ಕಿ ಹೊಡೆದಿದೆ. ಮುಂದೆ ನಡೆದಿರೋದು ಮಾತ್ರ ಘೋರ ದುರಂತ.
ಹಕ್ಕಿ ಡಿಕ್ಕಿ ಹೊಡೆದ ನಂತರ ಏನಾಯ್ತು..?
- ವಿಮಾನದ ರೆಕ್ಕೆಗೆ ಹಕ್ಕಿ ಡಿಕ್ಕಿ ಹೊಡೆದಿದೆ
- ಬೆನ್ನಲ್ಲೇ ವಿಮಾನದ ರೆಕ್ಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ
- ಇದರಿಂದ ವಿಮಾನದ ಗೇರ್ ಮೇಲೆ ಪರಿಣಾಮ ಬೀರಿದೆ
- ಹಾಗಾಗಿ ಪೈಲೆಟ್ ತುರ್ತು ಭೂಸ್ಪರ್ಶ ಮಾಡಲು ಮುಂದಾಗಿದ್ದಾರೆ
- ಗೇರ್ ವಿಫಲವಾದ ಹಿನ್ನೆಲೆಯಲ್ಲಿ ವೇಗ ಕಂಟ್ರೋಲ್ ಮಾಡಲು ಆಗಲಿಲ್ಲ
- ಭೂಸ್ಪರ್ಶದ ನಂತರವೂ ಗಂಟೆಗೆ 260 ಕಿ.ಮೀ ವೇಗದಲ್ಲಿದ್ದ ವಿಮಾನ
- ಇದರಿಂದ ಕ್ಷಣ ಮಾತ್ರದಲ್ಲಿ ರನ್ ವೇ ಅಂತ್ಯ ತಲುಪಿತ್ತು
- ಕೊನೆಗೂ ಕಂಟ್ರೋಲ್ ಮಾಡಲು ಆಗದೇ ಗೋಡೆಗೆ ಡಿಕ್ಕಿಯಾಗಿದೆ
- ಡಿಕ್ಕಿ ಹೊಡೆಯುತ್ತಿದ್ದಂತೆಯೇ ಬೆಂಕಿ ಹೊತ್ತುಕೊಂಡು ಅನಾಹುತ
ದುರ್ಘಟನೆಯ ಪರಿಣಾಮ ವಿಮಾನ ಅಪಘಾತದಲ್ಲಿ 179 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುರಂತದಲ್ಲಿ ಇಬ್ಬರನ್ನು ಮಾತ್ರ ಜೀವಂತವಾಗಿ ರಕ್ಷಣೆ ಮಾಡಲಾಗಿದೆ. ವರದಿಗಳ ಪ್ರಕಾರ.. ಜೆಜು ಏರ್ ವಿಮಾನವು ಥೈಲ್ಯಾಂಡ್‌ನಿಂದ ಹಿಂತಿರುಗುತ್ತಿತ್ತು. ಲ್ಯಾಂಡಿಂಗ್ ವೇಳೆ ಅವಘಡ ಸಂಭವಿಸಿದೆ.
ಇದನ್ನೂ ಓದಿ:RCB ಕೋಟಿ ಕೋಟಿ ಹಣ ಕೊಟ್ಟರೂ ಪ್ರಯೋಜನ ಇಲ್ಲ! ಈ ಮೂವರು ಸ್ಟಾರ್ಗೆ ಬೆಂಚ್ ಪಕ್ಕಾ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ