/newsfirstlive-kannada/media/post_attachments/wp-content/uploads/2025/02/KIM-SAEROn.jpg)
ದಕ್ಷಿಣ ಕೊರಿಯಾದ ನಟಿ ಕಿಮ್ ಸೇ-ರಾನ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಕಿಮ್ ಸೇ-ರಾನ್ ಬ್ಲಡ್ಹೌಂಡ್ಸ್ (Bloodhounds) ಟಿವಿ ಸೀರಿಸ್ ಮತ್ತು ದಿ ಮ್ಯಾನ್ ಫ್ರಮ್ ನೋವೇರ್‌ನಲ್ಲಿ (The Man from Nowhere) ಖ್ಯಾತಿ ಗಳಿಸಿದ್ದರು. ಕೇವಲ 24 ವರ್ಷದ ಬ್ಯೂಟಿ ನಿಗೂಢವಾಗಿ ಪ್ರಾಣ ಬಿಟ್ಟಿದ್ದಾರೆ.
ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿರುವ ಮನೆಯಲ್ಲೇ ನಟಿ ಕಿಮ್ ಸೇ-ರಾನ್ ಶವ ಪತ್ತೆಯಾಗಿದೆ. ಕಿಮ್ ಸೇ-ರಾನ್ ಸಾವು ಅನುಮಾನಾಸ್ಪದವಾಗಿದ್ದು, ಸ್ಥಳೀಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
ಪೊಲೀಸರ ವರದಿಗಳ ಪ್ರಕಾರ ಕಿಮ್ ಸೇ-ರಾನ್ ಅವರ ಸ್ನೇಹಿತ ಆಕೆಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದು, ಆಕೆಯ ಸಂಪರ್ಕ ಸಾಧ್ಯವಾಗಿಲ್ಲ. ಅನುಮಾನಗೊಂಡ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಈ ಭೀಕರ ದೃಶ್ಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಮದುವೆ ಮುರಿಯಲು ಕಾರಣವಾಯ್ತು ಥಾರ್ ಕಾರು; ವರನ ಕಡೆಯವರೆಲ್ಲಾ ಕಂಬಿ ಹಿಂದೆ ಹೋಗಿದ್ಯಾಕೆ?
ನಟಿ ಕಿಮ್ ಸೇ-ರಾನ್ ಸಾವನ್ನಪ್ಪಿರುವ ಮನೆಯಲ್ಲಿ ಯಾವುದೇ ಗುರುತುಗಳು ಪತ್ತೆಯಾಗಿಲ್ಲ. ಕೊಲೆಗಾರನ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ತನಿಖೆಯು ದೊಡ್ಡ ಸವಾಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಕಿಮ್ ಸೇ-ರಾನ್ ಅವರು ಬಾಲ್ಯನಟಿಯಾಗಿಯೇ ಬಣ್ಣದ ಲೋಕಕ್ಕೆ ಪ್ರವೇಶ ಮಾಡಿದ್ದರು. 2009ರಲ್ಲಿ ಎ ಬ್ರ್ಯಾಂಡ್ ನ್ಯೂ ಲೈಫ್ ಸೇ-ರಾನ್ ಅಭಿನಯದ ಮೊದಲ ಚಿತ್ರ. 2010ರಲ್ಲಿ ದಿ ಮ್ಯಾನ್ ಫ್ರಮ್ ನೋವೇರ್ ಇವರಿಗೆ ಅತಿ ದೊಡ್ಡ ಯಶಸ್ಸು ತಂದು ಕೊಟ್ಟಿದೆ. ಕಡಿಮೆ ವಯಸ್ಸಿನಲ್ಲಿ ಬಹಳ ಬೇಗ ಖ್ಯಾತಿ ಗಳಿಸಿದ್ದ ಕಿಮ್ ಸೇ-ರಾನ್ ಇತ್ತೀಚೆಗೆ ಫೇಮಸ್ ಟಿವಿ ಸೀರಿಸ್ ಬ್ಲಡ್ಹೌಂಡ್ಸ್‌ನಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ