VIDEO: ಹಕ್ಕಿ ಡಿಕ್ಕಿ ಹೊಡೆದು ವಿಮಾನ ಪತನ; ಲ್ಯಾಂಡಿಂಗ್ ವೇಳೆ ಸಂಭವಿಸಿದ ಭಯಾನಕ ದೃಶ್ಯ ಇಲ್ಲಿದೆ

author-image
Ganesh
Updated On
VIDEO: ಹಕ್ಕಿ ಡಿಕ್ಕಿ ಹೊಡೆದು ವಿಮಾನ ಪತನ; ಲ್ಯಾಂಡಿಂಗ್ ವೇಳೆ ಸಂಭವಿಸಿದ ಭಯಾನಕ ದೃಶ್ಯ ಇಲ್ಲಿದೆ
Advertisment
  • ದಕ್ಷಿಣ ಕೊರಿಯಾದ ಮುವಾನ್ ನಿಲ್ದಾಣದಲ್ಲಿ ಘಟನೆ
  • ನಿಯಂತ್ರಣ ತಪ್ಪಿ ನಿಲ್ದಾಣದ ಗೋಡೆಗೆ ವಿಮಾನ ಡಿಕ್ಕಿ
  • ಡಿಕ್ಕಿ ಹೊಡೆಯುತ್ತಿದ್ದಂತೆಯೇ ಆವರಿಸಿದ ಬೆಂಕಿಯ ಜ್ವಾಲೆ

ಲ್ಯಾಂಡಿಂಗ್ ವೇಳೆ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದು ಅನಾಹುತ ಸಂಭವಿಸಿದ ಘಟನೆ ದಕ್ಷಿಣ ಕೊರಿಯಾದ (South Korea) ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ( Muan International Airport)ದಲ್ಲಿ ನಡೆದಿದೆ.

175 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನವು ರನ್‌ವೇಯಿಂದ ಸ್ಕಿಡ್ ಆಗಿ ನಿಲ್ದಾಣದ ಗೋಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸುಮಾರು 28 ಪ್ರಯಾಣಿಕರು ಜೀವ ಕಳೆದುಕೊಂಡಿದ್ದಾರೆ. ಜೆಜು ಏರ್ (Jeju Air Flight 2216 ) ವಿಮಾನವು ಥೈಲ್ಯಾಂಡ್‌ನಿಂದ ವಾಪಸ್ ಆಗುತ್ತಿದ್ದಾಗ ದುರ್ಘಟನೆ ನಡೆದಿದೆ.

ಇದನ್ನೂ ಓದಿ:Breaking: ಲ್ಯಾಂಡಿಂಗ್ ವೇಳೆ ಭಯಾನಕ ದುರಂತ.. 181 ಪ್ರಯಾಣಿಕರಿದ್ದ ವಿಮಾನ ಸುಟ್ಟು ಭಸ್ಮ..

ದಕ್ಷಿಣ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಕಿಯನ್ನು ನಂದಿಸಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಮುವಾನ್ ವಿಮಾನ ನಿಲ್ದಾಣದ ಅಧಿಕಾರಿ ತಿಳಿಸಿದ್ದಾರೆ. ಅಲ್ಲಿಯ ಕಾಲಮಾನದ ಪ್ರಕಾರ ಬೆಳಗ್ಗೆ 9.7ರ ಸುಮಾರಿಗೆ ಅಪಘಾತ ಸಂಭವಿಸಿದೆ. ಲ್ಯಾಂಡಿಂಗ್ ವೇಳೆ ವಿಮಾನವು ಗಂಟೆಗೆ 280 ಕಿಲೋ ಮೀಟರ್ ವೇಗದಲ್ಲಿತ್ತು. ಇನ್ನು ವಿಮಾನದ ಅಪಘಾತದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಭಯಾನಕವಾಗಿದೆ.

ಇದನ್ನೂ ಓದಿ:BBK11: ಎಲ್ಲರ ಮುಂದೆ ಭವ್ಯಾ ಗೌಡ ಅಸಲಿ ಮುಖವಾಡ ಕಳಚಿದ ಕಿಚ್ಚ ಸುದೀಪ್​; ಕ್ಯಾಪ್ಟನ್ಸಿಗೆ ಕುತ್ತು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment