Advertisment

ಜೈಲಿಂದ ಬಂದ ಬೆನ್ನಲ್ಲೇ ಅನ್ಯಾಯ ಎಸಗಿದವ್ರ ವಿರುದ್ಧ ಆಕ್ರೋಶ.. ವಿರೋಧಿಗಳಿಗೆ HD ರೇವಣ್ಣ ಖಡಕ್​ ಸಂದೇಶ

author-image
Bheemappa
Updated On
ಜೈಲಿಂದ ಬಂದ ಬೆನ್ನಲ್ಲೇ ಅನ್ಯಾಯ ಎಸಗಿದವ್ರ ವಿರುದ್ಧ ಆಕ್ರೋಶ.. ವಿರೋಧಿಗಳಿಗೆ HD ರೇವಣ್ಣ ಖಡಕ್​ ಸಂದೇಶ
Advertisment
  • ಕಾಂಗ್ರೆಸ್ ಸರ್ಕಾರ ಹಾಗೂ ದಳಪಡೆ ಆರೋಪ-ಪ್ರತ್ಯಾರೋಪದಲ್ಲಿ ಬ್ಯುಸಿ
  • ಮೈತ್ರಿ ಅಭ್ಯರ್ಥಿ ವಿವೇಕಾನಂದ ಪರ ಪ್ರಚಾರದಲ್ಲಿ ರೇವಣ್ಣ ಭಾಗಿಯಾಗಿದ್ರು
  • ದೂರ ಕುಳಿತ್ತಿದ್ದ ಹೆಚ್​.ಡಿ ರೇವಣ್ಣರನ್ನ ಹತ್ತಿರ ಕರೆದ HD ಕುಮಾರಸ್ವಾಮಿ

ಕಿಡ್ನಾಪ್ ಕೇಸ್​ನಲ್ಲಿ ಜೈಲು ಸೇರಿದ್ದ ರೇವಣ್ಣ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಅತ್ತ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲೂ ಬಂಧನದಿಂದ ರಿಲೀಫ್ ಸಿಕ್ಕಿದೆ. ಈ ಬೆನ್ನಲ್ಲೇ ರೇವಣ್ಣ ಪ್ರಚಾರದ ಆಖಾಡಕ್ಕೆ ಧುಮುಕಿದ್ದಾರೆ. ವಿರೋಧಿಗಳಿಗೆ ಸಂದೇಶವನ್ನೂ ರವಾನಿಸಿದ್ದಾರೆ.

Advertisment

ಪೆನ್‌ಡ್ರೈವ್‌ ವಿಚಾರದಲ್ಲಿ ರಾಜಕಾರಣದ ಕಿಡಿ ಹೊತ್ತಿ ಉರೀತಿದೆ. ಕಾಂಗ್ರೆಸ್ ಸರ್ಕಾರ ಹಾಗೂ ದಳಪಡೆ ಆರೋಪ-ಪ್ರತ್ಯಾರೋಪದಲ್ಲಿ ಬ್ಯುಸಿಯಾಗಿದೆ. ಈ ನಡುವೆ ಕಿಡ್ನಾಪ್ ​ ಮತ್ತು ಲೈಂಗಿಕ ದೌರ್ಜನ್ಯ ಎರಡೂ ಪ್ರಕರಣಗಳಲ್ಲೂ ರೇವಣ್ಣಗೆ ಕೋರ್ಟ್​ ರಿಲೀಫ್​ ಸಿಕ್ಕಿದೆ. ಈ ಬೆನ್ನಲ್ಲೇ ರೇವಣ್ಣ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ.

publive-image

ಜೈಲಿನಿಂದ ಹೊರ ಬಂದ ಬಳಿಕ ಪ್ರಚಾರ ಕಣದಲ್ಲಿ ರೇವಣ್ಣ ರೋಷ

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯ ಭಾಗವಾಗಿ ಮೈಸೂರಿನಲ್ಲಿ ಮೈತ್ರಿ ನಾಯಕರಿಂದ ಒಗ್ಗಟ್ಟು ಪ್ರದರ್ಶನ ನಡೆಸಲಾಯ್ತು. ಮೈತ್ರಿ ಅಭ್ಯರ್ಥಿ ವಿವೇಕಾನಂದ ಪರ ಪ್ರಚಾರದಲ್ಲಿ ರೇವಣ್ಣ ಭಾಗಿಯಾಗಿದ್ರು.

ವೇದಿಕೆಯಲ್ಲೇ ರೇವಣ್ಣ-ಕುಮಾರಸ್ವಾಮಿ ಸುದೀರ್ಘ ಚರ್ಚೆ

ಒಂದೇ ವೇದಿಕೆಯಲ್ಲಿದ್ರೂ, ರೇವಣ್ಣ ಹಾಗೂ ಕುಮಾರಸ್ವಾಮಿ ದೂರ ದೂರ ಕುಳಿತಿದ್ರು. ಆಗ ರೇವಣ್ಣರನ್ನ ಕರೆದ ಕುಮಾರಸ್ವಾಮಿ ಪಕ್ಕಕ್ಕೇ ಕೂರಿಸಿಕೊಂಡ್ರು. ಈ ವೇಳೆ ಇಬ್ಬರು ಸುದೀರ್ಘ ಚರ್ಚೆ ನಡೆಸಿದ್ರು. ಸಭೆಯನ್ನ ಮರೆತು ಚರ್ಚಿಸಿದ್ರೂ ಕುತೂಹಲಕ್ಕೆ ಕಾರಣವಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್​.ಡಿ ರೇವಣ್ಣ ನಮ್ಮ ಬಳಿಯೇ ಕೆಲವರು ತಿಂದು ತೇಗಿ ಅನ್ಯಾಯ ಬಗೆದಿದ್ದಾರೆ ಅಂತಾ ಕಿಡಿ ಕಾರಿದ್ರು. ನಾನು ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಸಂದೇಶವನ್ನೂ ರವಾನಿಸಿದ್ರು.

Advertisment

‘ತಿಂದು ತೇಗಿ ಅನ್ಯಾಯ ಬಗೆದಿದ್ದಾರೆ’

ಇವತ್ತು ನಮ್ಮಲ್ಲೇ, ಕುಮಾರಣ್ಣ ಬಳಿ ತಿಂದು ತೇಗಿ ಇಂತಹದ್ದನ್ನ ಮಾಡಿದ್ದಾರೆ. ಏನು ಮಾಡೋಣ. ಸಭೆಯಲ್ಲಿ ಯಾರಿಗೂ ವೈಯಕ್ತಿಕವಾಗಿ ಟೀಕೆ ಮಾಡೋಕೆ ಆಗಲ್ಲ. ಆದರೆ ಒಂದು ಪಕ್ಷ ನಿಷ್ಠೆಯನ್ನ ಕಾಪಾಡಬೇಕು.

ಹೆಚ್​.ಡಿ ರೇವಣ್ಣ, ಮಾಜಿ ಸಚಿವ

publive-image

‘ನಾನು ಯಾರ ಬಗ್ಗೆನೂ ಮಾತಾಡಲ್ಲ’

ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಸಾರಾ ಮಹೇಶ್, ಈ ಚುನಾವಣೆ ನಮಗೆ ಪ್ರತಿಷ್ಠೆಯಾಗಿದೆ. ಕಾಂಗ್ರೆಸ್ ನಾಯಕರು ಪೊಲೀಸರನ್ನ ಇಟ್ಟುಕೊಂಡು ನಮ್ಮನ್ನ ಮುಗಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಚುನಾವಣೆಯಲ್ಲಿ ಉತ್ತರ ಕೊಡಬೇಕು ಅಂತ ಮನವಿ ಮಾಡಿದ್ರು.

ಜೈಲಿನಿಂದ ಹೊರ ಬಂದ ಬಳಿಕ ಇದೇ ಮೊದಲಬಾರಿಗೆ ರೇವಣ್ಣ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂದೇಶ ರವಾನಿಸಿದ್ದಾರೆ. ರಾಜಕೀಯ ಜಿದ್ದಾಜಿದ್ದಿ ಮುಂದುವರಿಯೋ ಮುನ್ಸೂಚನೆ ಸಿಕ್ಕಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment