ಎಲ್ಲ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಮಾರ್ಗದರ್ಶನ
ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂಸೇವಕರು. ಭದ್ರತಾ ಸಿಬ್ಬಂದಿ ನೇಮಕ
ಭದ್ರತೆ ಕಾಪಾಡಲು ಪ್ರೊಟೆಕ್ಷನ್ ಫೋರ್ಸ್ ಹೆಚ್ಚಿಸಿದ ರೈಲ್ವೆ ಇಲಾಖೆ
ಬೆಂಗಳೂರು: ದೀಪಾವಳಿ ಹಾಗೂ ಛತ್ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯ 55 ವಿಶೇಷ ರೈಲುಗಳ ವ್ಯವಸ್ಥೆಯನ್ನ ಇಲಾಖೆ ಮಾಡಿದೆ.
ನೈಋತ್ಯ ರೈಲ್ವೆ ಹುಬ್ಬಳ್ಳಿ, ಮೈಸೂರು ಹಾಗೂ ಬೆಂಗಳೂರು ವಿಭಾಗಗಳಾದ್ಯಂತ ವಿಶೇಷ ರೈಲುಗಳು ಕಾರ್ಯಚರಣೆ ಮಾಡಲಿವೆ. ಈ ವೇಳೆ ಪ್ರಯಾಣಿಕರಿಗೆ ಆಗುವ ಸಮಸ್ಯೆಗಳನ್ನು ತಪ್ಪಿಸಿ, ಅನುಕೂಲ ಮಾಡಲು ರೈಲ್ವೆ ಇಲಾಖೆ ಕ್ರಮ ತೆಗೆದುಕೊಂಡಿದೆ. ಎಲ್ಲ ಪ್ರಮುಖ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಟಿಕೆಟ್ ನೀಡುವುದು, ನಿರ್ದೇಶನಗಳು ಹಾಗೂ ವೇಳಾಪಟ್ಟಿ ಮಾಹಿತಿಯೊಂದಿಗೆ ಸಹಾಯ ಮಾಡಲು ತಾತ್ಕಾಲಿಕ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಕಾಯುವಿಕೆಯನ್ನು ಕಡಿಮೆ ಮಾಡಲು ಮೊಬೈಲ್ ಟಿಕೆಟಿಂಗ್, ಸ್ಮಾರ್ಟ್ ಕಾರ್ಡ್, ಕ್ಯೂಆರ್ ಕೋಡ್ ಆಧಾರಿತ ಟಿಕೆಟಿಂಗ್ ಅನ್ನು ಪ್ರೋತ್ಸಾಹಿಸಲಾಗುತ್ತಿದೆ.
ಇದನ್ನೂ ಓದಿ: ಇದು ಅಂತಿಂಥಾ ವಾಮಾಚಾರ ಅಲ್ಲ, ಕುಟ್ಟಿ ಸೈತಾನ್ ಪೂಜೆ.. ಮಗುವನ್ನೇ ಬ*ಲಿ ಕೊಡಲು ಮುಂದಾಗಿದ್ದ ತಂದೆ
ಸಾಮಾನ್ಯ ರೈಲುಗಳ ದಟ್ಟಣೆ ನಿವಾರಿಸಲು, ವೇಟಿಂಗ್ ಲಿಸ್ಟ್ ಆಧಾರದ ಮೇಲೆ ಹೆಚ್ಚುವರಿ ಬೋಗಿಗಳ ಜೋಡಣೆ ಮಾಡಲಾಗಿದೆ. ನಿಲ್ದಾಣಗಳಲ್ಲಿ ಜನಸಂದಣಿ ನಿಯಂತ್ರಿಸಲು ಅಧಿಕಾರಿಗಳು, ವಾಣಿಜ್ಯ ಸಿಬ್ಬಂದಿ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂಸೇವಕರು, ಭದ್ರತಾ ಸಿಬ್ಬಂದಿ ನೇಮಕ ಮಾಡಲಾಗಿದೆ. ಸುವ್ಯವಸ್ಥೆ ಮತ್ತು ಭದ್ರತೆ ಕಾಪಾಡಲು ಪ್ರೊಟೆಕ್ಷನ್ ಫೋರ್ಸ್ ಹೆಚ್ಚಿಸಲಾಗಿದೆ. ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ಬ್ಯಾಗೇಜ್ ಸ್ಕ್ಯಾನರ್ಗಳ ಇವೆ. ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚುವರಿ ಬ್ಯಾಕಪ್ ಕರೆಂಟ್ ಸರಬರಾಜು ವ್ಯವಸ್ಥೆ ಮಾಡಲಾಗಿದೆ.
ರೈಲ್ವೆ ಇಲಾಖೆ ವತಿಯಿಂದ ಕೈಗೊಂಡ ಇತರೆ ಕ್ರಮಗಳೇನು..?
ಇದನ್ನೂ ಓದಿ: ಓದಲು ಹೋಗಿ ಪ್ರೀತಿ ಬಲೆಗೆ ಬಿದ್ದ ಯುವಕ.. ಭಾರತೀಯ ಸಂಪ್ರದಾಯದಂತೆ ಫಾರಿನ್ ಗರ್ಲ್ ಜೊತೆ ಮದುವೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ