/newsfirstlive-kannada/media/post_attachments/wp-content/uploads/2025/01/SP_Balasubrahmanyam.jpg)
ಹೈದರಾಬಾದ್: ಭಾರತ ಚಿತ್ರರಂಗ ಕಂಡ ಮಹಾನ್ ಗಾಯಕ, ಗಾನ ಗಂಧರ್ವ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ನಮ್ಮನ್ನು ಅಗಲಿ ವರ್ಷಗಳೇ ಉರುಳಿವೆ. ಆದರೆ ಅವರ ಧ್ವನಿ ಮಾತ್ರ ಈಗಲೂ ಎಲ್ಲರನ್ನೂ ಕೇಳುತ್ತಲೇ ಇದೆ. ಆದರೆ ಇಂತಹ ಮಹಾನ್ ಗಾಯಕರ ಸುಂದರ ಮನೆಯನ್ನು ಈಗ ಯಾರು ಕೇಳುವವರಿಲ್ಲ ಎಂದು ಹೇಳಲಾಗುತ್ತಿದೆ. ಸದ್ಯ ಏನಿದು ಸಂಗತಿ ಎಂಬುದರ ವಿವರ ಇಲ್ಲಿದೆ.
ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಚಿಕ್ಕವರಿದ್ದಾಗ ಆಂಧ್ರ ಪ್ರದೇಶದ ನೆಲ್ಲೂರು ನಗರದ ತಿಪ್ಪರಾಜು ರಸ್ತೆಯಲ್ಲಿರುವ ಮನೆಯಲ್ಲಿ ತಮ್ಮ ತಂದೆ, ತಾಯಿ ಜೊತೆ ವಾಸವಿದ್ದರು. ನೆಲ್ಲೂರು ನಗರಕ್ಕೆ ಎಸ್.ಪಿ ಬಾಲಸುಬ್ರಹ್ಮಣ್ಯಂ ಎಂದರೆ ಮನೆ ಮಗ ಇದ್ದಾಗೆ. ಅಲ್ಲಿನ ಪ್ರತಿ ರಸ್ತೆಗಳಲ್ಲೂ ಎಸ್.ಪಿ ಬಾಲಸುಬ್ರಹ್ಮಣ್ಯಂ ಸಣ್ಣವರಿದ್ದಾಗ ಓಡಾಡಿದ್ದರು ಎಂದು ಹೇಳುತ್ತಾರೆ. ಆದರೆ ಅವರನ್ನು ಸಂಗೀತ ಆವರಿಸಿಕೊಂಡ ಬಳಿಕ ಚೆನ್ನೈಗೆ ಹೋಗಿ ನೆಲಸಿದರು.
ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಚೆನ್ನೈಗೆ ಹೋಗಿ ನೆಲಸಿದರು ಅವರ ತಂದೆ, ತಾಯಿ ನೆಲ್ಲೂರಿನ ನಿವಾಸ ಬಿಟ್ಟು ಕದಲಿಲ್ಲ. ಮುಪ್ಪಿನ ವಯಸ್ಸಿನಲ್ಲೂ ತಂದೆ, ತಾಯಿ ಅಲ್ಲಿಯೇ ಇದ್ದರು. ಅವರು ಕಣ್ಮುಚ್ಚಿದ ಬಳಿಕ ಆ ನಿವಾಸ ಏನು ಮಾಡುವುದು ಎಂದು ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ದೊಡ್ಡ ಪ್ರಶ್ನೆ ಆಗಿತ್ತು. ಹೀಗಾಗಿ ಎಸ್.ಪಿ ಬಾಲಸುಬ್ರಹ್ಮಣ್ಯಂ ಕೊನೆಯುಸಿರೆಳೆಯುವುದಕ್ಕೂ ಮೊದಲೇ ಅಂದರೆ 2020ರಲ್ಲಿ ನೆಲ್ಲೂರಿನ 1 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಯಾವುದಾದರೂ ಸಂಗೀತ ಪಾಠ ಶಾಲೆಗೆ ದಾನವಾಗಿ ನೀಡಲು ನಿರ್ಧಾರ ಮಾಡಿದ್ದರು.
ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ತಾವು ಅಂದುಕೊಂಡಂತೆ ಆ ನಿವಾಸವನ್ನು ಕಂಚಿ ಕಾಮಕೋಟಿ ಪೀಠಾಧಿಪತಿ ಶ್ರೀವಿಜಯೇಂದ್ರಸರಸ್ವತಿ ಸ್ವಾಮಿಗೆ ಹಸ್ತಾಂತರ ಮಾಡಿದರು. ಇದಾದ ಬಳಿಕ ಶ್ರೀವಿಜಯೇಂದ್ರಸರಸ್ವತಿ ಸ್ವಾಮಿ ಹೇಳಿದಂತೆ 2020ರಲ್ಲಿ 10 ಲಕ್ಷ ರೂಪಾಯಿ ಖರ್ಚು ಮಾಡಿ ನಿವಾಸವನ್ನು ಅಂದ-ಚೆಂದವಾಗಿ, ಸಂಗೀತ ಶಾಲೆಗೆ ಅನುಕೂಲವಾಗುವಂತೆ ನಿರ್ಮಾಣ ಮಾಡಿಕೊಟ್ಟಿದ್ದರು. ತಂದೆ, ತಾಯಿ ಇದ್ದ ಮನೆಯಲ್ಲಿ ಯಾವಾಗಲೂ ಸಂಗೀತ, ವೇದ ಶಬ್ಧ ಕೇಳುತ್ತಿರಲಿ ಎನ್ನುವುದು ಬಾಲಸುಬ್ರಹ್ಮಣ್ಯಂ ಆಕಾಂಕ್ಷೆ ಆಗಿತ್ತು. ಅಲ್ಲದೇ ತಾವು ಯಾವಗಲೂ ಅಲ್ಲಿಗೆ ಬಂದರೆ ಸಹಾಯ ಧನ ನೀಡುವುದಾಗಿ ಎಸ್ಪಿಬಿ ಹೇಳಿದ್ದರು.
ಕಾಲ ಕ್ರಮೇಣ ಕಳೆದಂತೆ ಬಾಲಸುಬ್ರಹ್ಮಣ್ಯಂ ಅವರು ಕೊರೊನಾದಿಂದ ನಿಧನ ಹೊಂದಿದರು. ಇವರ ನಿಧನದ ಬಳಿಕ ಆ ಮನೆಯನ್ನು ಉಪಯೋಗಿಸಿಕೊಳ್ಳುವುದರಲ್ಲಿ ಕಂಚಿ ಕಾಮಕೋಟಿ ಪೀಠಾಧಿಪತಿ ಶ್ರೀವಿಜಯೇಂದ್ರಸರಸ್ವತಿ ಸ್ವಾಮಿ ವಿಫಲವಾಗಿದ್ದಾರೆ. 5 ವರ್ಷದಿಂದ ಮನೆಯಲ್ಲಿ ಯಾವುದೇ ಸಂಗೀತ ಪಾಠ ನಡೆಯುತ್ತಿಲ್ಲ. ಒಂದು ಸಮಯದಲ್ಲಿ ಸಂಗೀತದಿಂದ ಝೇಂಕರಿಸುತ್ತಿದ್ದ ಆ ಸ್ಥಳದಲ್ಲಿ ಈಗ ಏನು ಇಲ್ಲ. ಹೀಗಾಗಿ ಅಲ್ಲಿ ಯಾರು ಸುಳಿಯುತ್ತಿಲ್ಲದ ಕಾರಣ ಮನೆ ಅನಾಥವಾಗಿದೆ.
ಇದನ್ನೂ ಓದಿ:BIGG BOSS; ಗೆದ್ದವರಿಗೆ ಗ್ರ್ಯಾಂಡ್ ಫಿನಾಲೆ ಟಿಕೆಟ್.. ಬಿಗ್ ಬಾಸ್ ಕೊಟ್ಟ ಟಾಸ್ಕ್ ಹೇಗಿದೆ?
ಈ ಸಬಂಧ ಪ್ರತಿಕ್ರಿಯಿಸಿರುವ ಕಂಚಿ ಕಾಮಕೋಟಿಯ ನೆಲ್ಲೂರು ಶಾಖೆಯ ನಿರ್ವಾಹಕ ನಂದಕಿಶೋರ್, ಮೊದಲು ಇಲ್ಲಿ 10 ವಿದ್ಯಾರ್ಥಿಗಳಿಗೆ ವೇದ, ಸಂಗೀತದ ಪಾಠ ಮಾಡಲಾಗುತ್ತಿತ್ತು. ಆದರೆ ವಿದ್ಯಾರ್ಥಿಗಳಿಗೆ ಇಲ್ಲಿ ಮೂಲ ಸೌಕರ್ಯದ ಸಮಸ್ಯೆ ಆಯಿತು. ಟೇರೆಸ್ ಮೇಲಿನ ತಾತ್ಕಾಲಿಕ ಶೆಡ್‌ನಲ್ಲಿ ಕೆಲ ಸವಾಲು ಎದುರಿಸಬೇಕಾಯಿತು. ಹೀಗಾಗಿ ವಿದ್ಯಾರ್ಥಿಗಳನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡಲಾಯಿತು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ