Advertisment

BREAKING: ಪುರಿ ಜಗನ್ನಾಥನ ರತ್ನ ಭಂಡಾರದ ಬಾಗಿಲು ತೆಗೆಯುತ್ತಿದ್ದಂತೆ ಮೂರ್ಛೆ ಹೋದ ಎಸ್‌ಪಿ

author-image
admin
Updated On
BREAKING: ಪುರಿ ಜಗನ್ನಾಥನ ರತ್ನ ಭಂಡಾರದ ಬಾಗಿಲು ತೆಗೆಯುತ್ತಿದ್ದಂತೆ ಮೂರ್ಛೆ ಹೋದ ಎಸ್‌ಪಿ
Advertisment
  • 46 ವರ್ಷಗಳ ಬಳಿಕ ಪುರಿಯ ರತ್ನ ಭಂಡಾರದ ಬಾಗಿಲು ಓಪನ್
  • ಮೂರ್ಛೆ ಬೀಳುತ್ತಿದ್ದಂತೆ ಎಸ್‌ಪಿಗೆ ಚಿಕಿತ್ಸೆ ನೀಡಿ ಬೇರೆಡೆ ಶಿಫ್ಟ್
  • 1978ರಲ್ಲಿ ಕೊನೆ ಬಾರಿಗೆ ತೆರೆದಿತ್ತು ರತ್ನಭಂಡಾರದ ಬಾಗಿಲು

ಒಡಿಶಾದಲ್ಲಿ ಬರೋಬ್ಬರಿ 46 ವರ್ಷಗಳ ಬಳಿಕ ಪುರಿ ಜಗನ್ನಾಥ ಮಂದಿರದಲ್ಲಿರುವ ರತ್ನ ಭಂಡಾರದ ಬಾಗಿಲು ಓಪನ್​ ಮಾಡಲಾಗಿದೆ. ಮಧ್ಯಾಹ್ನ 1.28ರ ಶುಭ ಮುಹೂರ್ತದಲ್ಲಿ ರತ್ನ ಭಂಡಾರದ ಒಟ್ಟು 4 ಬಾಗಿಲುಗಳನ್ನು ಓಪನ್​ ಮಾಡಿರೋದನ್ನ ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ ಮಾಹಿತಿ ನೀಡಿದ್ದಾರೆ.

Advertisment

ಇದನ್ನೂ ಓದಿ: 222 ಕೆಜಿ ಚಿನ್ನ.. 12,838ಕ್ಕೂ ಹೆಚ್ಚು ರತ್ನಖಚಿತ ಆಭರಣ; ಆ ಕೊಠಡಿಯಲ್ಲಿ ಇನ್ನೂ ಏನೇನು ಉಂಟು..? 

ಇಂದು ಪುರಿ ಜಗನ್ನಾಥ್ ಮಂದಿರದಲ್ಲಿರೋ ರತ್ನ ಭಂಡಾರದ ಕೊಠಡಿ ಓಪನ್ ಮಾಡುವುದನ್ನ ಕೋಟ್ಯಾಂತರ ಭಕ್ತರು ಕಾತರದಿಂದ ಕಾಯುತ್ತಿದ್ದರು. ರತ್ನ ಭಂಡಾರದ ಕೀಲಿಯಿಂದ ತೆಗೆಯಲು ಬಾರದ ಹಿನ್ನೆಲೆಯಲ್ಲಿ ಕಟ್ಟರ್‌ನಿಂದ ಬಾಗಿಲಿನ ಲಾಕ್ ಕಟ್ ಮಾಡಲಾಗಿದೆ. ನಂತರ ಬಾಗಿಲು ಒಡೆದು ರತ್ನ ಭಂಡಾರದ ಬಾಗಿಲು ಓಪನ್ ಮಾಡಲಾಗಿದೆ.

ಮೂರ್ಛೆ ಬಿದ್ದ ಎಸ್‌ಪಿ!
ರತ್ನ ಭಂಡಾರ ಬಾಗಿಲು ತೆಗೆಯುತ್ತಿದ್ದಂತೆ ಸ್ಥಳದಲ್ಲಿದ್ದ ಎಸ್‌ಪಿ ಪಿನಾಕ್ ಮಿರ್ಶಾ ಅವರು ಮೂರ್ಛೆ ಬಿದ್ದಿದ್ದಾರೆ. ಮೂರ್ಛೆ ಬೀಳುತ್ತಿದ್ದಂತೆ ಸ್ಥಳದಲ್ಲೇ ಎಸ್‌ಪಿಗೆ ಚಿಕಿತ್ಸೆ ನೀಡಲಾಗಿದೆ. ನಂತರ ಎಸ್‌ಪಿಯನ್ನು ರಕ್ಷಣಾ ಸಿಬ್ಬಂದಿಗಳು ಹೊರಗಡೆ ಕರೆತಂದಿದ್ದಾರೆ. ರತ್ನ ಭಂಡಾರದ ಬಾಗಿಲಿನ ಬಳಿ ಎಸ್‌ಪಿ ಮೂರ್ಛೆ ಹೋಗಿರೋದು ಅಚ್ಚರಿಗೆ ಕಾರಣವಾಗಿದೆ.

Advertisment

publive-image

11 ಜನರ ಸಮಿತಿಯಿಂದ ರತ್ನಾ ಭಂಡಾರದ ಕೋಣೆ ಓಪನ್​ ಮಾಡಲಾಗಿದೆ. ರಹಸ್ಯ ಕೋಣೆಯಲ್ಲಿರುವ ಚಿನ್ನ, ಬೆಳ್ಳಿ ಆಭರಣಗಳನ್ನ ಲೆಕ್ಕ ಹಾಕಲು ದೊಡ್ಡ, ದೊಡ್ಡ ಬಾಕ್ಸ್‌ಗಳನ್ನು ಒಳಗೆ ತೆಗೆದುಕೊಂಡು ಹೋಗಲಾಗಿದೆ. ಸದ್ಯ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಬಾಗಿಲು ಓಪನ್​ ಆಗಿರೋದನ್ನ ಒಡಿಶಾ ಸಿಎಂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಖಚಿತ ಪಡಿಸಿದ್ದಾರೆ.

ಇದನ್ನೂ ಓದಿ: ರಹಸ್ಯಗಳ ಹೊತ್ತು ನಿಂತ ಪೂರಿ ಜಗನ್ನಾಥ..! ಲೆಕ್ಕವೇ ಮಾಡಲಾಗದಷ್ಟು ರತ್ನ ಭಂಡಾರ ನೀಡಿದ್ದು ಯಾರು ಗೊತ್ತೇ..? 

ಪುರಿ ಜಗನ್ನಾಥ.. ಬಂಗಾಳ ಕೊಲ್ಲಿಯ ಕಡಲತಡಿಯಲ್ಲಿ ನೆಲೆನಿಂತ ಜಗದೋದ್ಧಾರಕ.. ಪವಿತ್ರ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಮಹೋದಧಿಯ ನೆಲ. ಈ ಜಗದೊಡೆಯ ಜಗನ್ನಾಥ ಸಿರಿ ಸಂಪತ್ತಿನಿಂದ ಇಡೀ ಜಗತ್ತನ್ನೇ ಬೆರಗು ಮಾಡ್ತಿದ್ದಾನೆ.. ಸದ್ಯ ಜಗನ್ನಾಥ ದೇವಾಲಯದ ರತ್ನ ಭಂಡಾರದ ರಹಸ್ಯ ಬಯಲಾಗುವ ಸಮಯ ಬಂದಿದೆ.. ಕೋಟ್ಯಂತರ ಭಕ್ತರನ್ನು ಹೊಂದಿರುವ ದೇವಾಲಯ ಇವತ್ತು ಮಹಾ ಪವಾಡಕ್ಕೆ ಸಾಕ್ಷಿಯಾಗುತ್ತಿದೆ.

Advertisment

ಜಗನ್ನಾಥನ ರತ್ನಭಂಡಾರ!

  • 1978ರಲ್ಲಿ ಕೊನೆ ಬಾರಿಗೆ ತೆರೆದಿತ್ತು ರತ್ನಭಂಡಾರದ ಬಾಗಿಲು
  • ರತ್ನ ಭಂಡಾರದಲ್ಲಿ 12,838ಕ್ಕೂ ಹೆಚ್ಚು ರತ್ನಖಚಿತ ಆಭರಣ
  • ಒಟ್ಟು 128.38 ಕೆ.ಜಿ ತೂಕ ಹೊಂದಿರುವ ರತ್ನಾಭರಣಗಳು
  • 454 ಚಿನ್ನದ ವಸ್ತುಗಳಿದ್ದು, ಒಟ್ಟು 221.53 ಕೆ.ಜಿ ಭಾರ ಇದೆ
  • 293 ಕೆ.ಜಿಯಷ್ಟು 22 ಸಾವಿರಕ್ಕೂ ಹೆಚ್ಚು ಬೆಳ್ಳಿ ವಸ್ತುಗಳಿವೆ
  • ವಿಶಿಷ್ಟ ಅಮೂಲ್ಯ ಹರಳುಗಳನ್ನ ಹೊಂದಿರುವ ಆಭರಣಗಳು
  • ಕೊಠಡಿಯಲ್ಲಿ ರಾಜರ ಕಿರೀಟಗಳು ಮತ್ತು ಸಿಂಹಾಸನಗಳು
  • 1978ರಲ್ಲಿ ಆಭರಣಗಳ ಆವಿಷ್ಕಾರಕ್ಕೇನೆ 72 ದಿನಗಳ ಕಾಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment