9 ತಿಂಗಳಿಂದ ಕಾಯುತ್ತಿದ್ದ ಸುನೀತಾ ವಿಲಿಯಮ್ಸ್‌ ಫುಲ್ ಖುಷ್‌; ಬಾಹ್ಯಾಕಾಶ ತಲುಪಿದ ಸ್ಪೇಸ್X Crew-10!

author-image
admin
Updated On
ಸಾವಿಗೆ ಸವಾಲು ಹಾಕಿದ್ದ ಗಟ್ಟಿಗಿತ್ತಿ.. ಕೊನೆಯ 1 ಗಂಟೆಯೇ ಸುನಿತಾ ವಿಲಿಯಮ್ಸ್​ಗೆ​ ಅತಿ ದೊಡ್ಡ ಚಾಲೆಂಜ್​!
Advertisment
  • ಸತತ 9 ತಿಂಗಳಿಂದ ಕಾಯುತ್ತಿದ್ದ ಸುನಿತಾ ವಿಲಿಯಮ್ಸ್‌ ತಂಡ
  • NASA-SpaceX Crew-10 ಮಿಷನ್‌ನಲ್ಲಿ ಒಟ್ಟು 4 ಗಗನಯಾತ್ರಿಗಳು
  • 11 ಸದಸ್ಯರು ಸದ್ಯ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದಾರೆ

ಇದು ಒಂದು, ಎರಡು ದಿನಗಳ ಕಾಯುವಿಕೆ ಅಲ್ಲ. ಸತತ 9 ತಿಂಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸುನೀತಾ ವಿಲಿಯಮ್ಸ್ ಕಾದು ಕುಳಿತಿದ್ದರು. ಕೊನೆಗೂ ಆ ಕಾತರ, ಕುತೂಹಲ, ಕಾಯುವಿಕೆಯ ಸಮಯ ಬಂದೇ ಬಿಟ್ಟಿದೆ. ಇಂದು ಬೆಳಗ್ಗೆ NASA-SpaceX Crew-10 ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ಯಶಸ್ವಿಯಾಗಿ ತಲುಪಿದೆ.

ಹೌದು.. ಭಾರತೀಯ ಕಾಲಮಾನ ಇಂದು ಬೆಳಗ್ಗೆ 9.40ಕ್ಕೆ NASA-SpaceXನಲ್ಲಿ ಪ್ರಯಾಣಿಸಿದ ಕ್ರ್ಯೂ 10 ಸದಸ್ಯರು ಅಂತಾರಾಷ್ಟ್ರ ಬಾಹ್ಯಾಕಾಶವನ್ನು ತಲುಪಿದ್ದಾರೆ. ಸ್ಪೇಸ್ ಎಕ್ಸ್‌ನ ಡ್ರ್ಯಾಗನ್ ಸ್ಪೇಸ್ ಕ್ರ್ಯಾಫ್ಟ್ ISSಗೆ ತಲುಪಿದ್ದು, ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ ಮೋರ್ ಸಂಭ್ರಮದಿಂದ ಸ್ವಾಗತ ಮಾಡಿದ್ದಾರೆ.

publive-image

NASA-SpaceX Crew-10 ಮಿಷನ್‌ನಲ್ಲಿ ಒಟ್ಟು 4 ಗಗನಯಾತ್ರಿಗಳು ಭಾಗಿಯಾಗಿದ್ದಾರೆ. ನಾಸಾದಿಂದ ಆ್ಯನೆ ಮೆಕ್ಲೇನ್, ನಿಕೋಲ್ ಆಯರ್ಸ್, ಜಪಾನ್‌ನ ತಕುಯಾ ಓನಿಷಿ ಮತ್ತು ರಷ್ಯಾದ ಕಿರಿಲ್ ಟೆಸ್ಕಾವ್ ISS ನಿಲ್ದಾಣವನ್ನು ತಲುಪಿದ್ದಾರೆ.

ಇದನ್ನೂ ಓದಿ: ಸುನಿತಾ ವಿಲಿಯಮ್ಸ್​ಗೆ ಕಾಡಿದ ಅನಾರೋಗ್ಯ ಸಮಸ್ಯೆ; ಸವಾಲುಗಳು ಏನೇನು..? 

NASA-SpaceX Crew-10 ಸದಸ್ಯರು ISS ತಲುಪುತ್ತಿದ್ದಂತೆ ಸೆಲೆಬ್ರೇಷನ್ ಮಾಡಲಾಗಿದೆ. ಸುನಿತಾ ವಿಲಿಯಮ್ಸ್ ಸೇರಿ ಎಲ್ಲಾ ಗಗನಯಾತ್ರಿಗಳು ಗ್ರೂಪ್ ಫೋಟೋಗೆ ಪೋಸ್ ಕೊಟ್ಟಿದ್ದು, ಸಂತಸದ ಈ ಕ್ಷಣಗಳ ವಿಡಿಯೋವನ್ನು ನಾಸಾ ಹಂಚಿಕೊಂಡಿದೆ.

publive-image

ಈ ನಾಲ್ವರ ಸೇರ್ಪಡೆಯಿಂದ ಒಟ್ಟು 11 ಸದಸ್ಯರು ಸದ್ಯ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿದುಕೊಂಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಬಾಹಾಕ್ಯಾಶ ನಿಲ್ದಾಣದಿಂದ ಕ್ರ್ಯೂ 9ನ ನಾಲ್ವರು ಸದಸ್ಯರು ವಾಪಸ್ ಬರಲಿದ್ದಾರೆ. ಅದರಲ್ಲಿ ನಾಸಾದ ನಿಕ್ ಹೇಗ್, ಸುನಿತಾ ವಿಲಿಯಮ್ಸ್, ಬುಚ್‌ ವಿಲ್ ಮೋರ್ ಮತ್ತು ಗಾರ್ಬನೋ ವಾಪಸ್ ಬರಲಿದ್ದಾರೆ.


">March 16, 2025

ಇದರಲ್ಲಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ ಮೋರ್ ಕೇವಲ 8 ದಿನಕ್ಕೆಂದು ಹೋಗಿ 9 ತಿಂಗಳ ನಂತರ ಭೂಮಿಗೆ ವಾಪಸ್ ಆಗುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment