ಅಂತೂ ಮನೆಗೆ ವಾಪಸ್ ಬರುವ ದಿನ ಬಂದೇ ಬಿಡ್ತು.. ಬಾಹ್ಯಾಕಾಶದತ್ತ ಹೊರಟ ಫಾಲ್ಕನ್-9 ರಾಕೆಟ್..!

author-image
Ganesh
Updated On
Sunita Williams ಮಾರ್ಚ್​ 19 ರಂದು ಬಾಹ್ಯಾಕಾಶದಿಂದ ನಿರ್ಗಮನ; ಭೂಮಿಗೆ ಬರೋದು ಯಾವಾಗ?
Advertisment
  • ಗಗನಯಾತ್ರಿ ಸುನಿತಾ ವಿಲಿಯಮ್ಸ್ ವಿಚಾರದಲ್ಲಿ ಗುಡ್​ ನ್ಯೂಸ್
  • ಕಳೆದ 9 ತಿಂಗಳಿನಿಂದ ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳು
  • ಮಾರ್ಚ್ 19 ರಂದು ಬಾಹ್ಯಾಕಾಶದಿಂದ ವಾಪಸ್ ಆಗುವ ನಿರೀಕ್ಷೆ

ಅಂತೂ ಗಗನಯಾತ್ರಿ ಸುನಿತಾ ವಿಲಿಯಮ್ಸ್ (Sunita Williams) ಮತ್ತು ಬುಚ್ ವಿಲ್ಮೋರ್ (Butch Willmore) ಭೂಮಿಗೆ ವಾಪಸ್ ಬರುವ ಕಾಲ ಸನಿಹ ಆಗಿದೆ. ಸುರಕ್ಷಿತವಾಗಿ ಮರಳಿ ಕರೆತರಲು ನಾಸಾ (NASA) ಮತ್ತು ಸ್ಪೇಸ್‌ಎಕ್ಸ್ (SpaceX) ಬಾಹ್ಯಾಕಾಶ ನೌಕೆಯನ್ನು ಕಳುಹಿಸಿವೆ.

ಸುನಿತಾ ಮತ್ತು ಬುಚ್ 9 ತಿಂಗಳಿನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS: International Space Station) ಸಿಲುಕಿಕೊಂಡಿದ್ದಾರೆ. ಭಾರತೀಯ ಕಾಲಮಾನ ಇಂದು ಬೆಳಗ್ಗೆ 4.33 ಸುಮಾರಿಗೆ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಫಾಲ್ಕನ್-9 ರಾಕೆಟ್ ಯಶಸ್ವಿಯಾಗಿ ಉಡಾವಣೆ ಆಗಿದೆ. 4 ಸದಸ್ಯರನ್ನು ಹೊತ್ತೊಯ್ಯುವ ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್ (Crew-10 mission) ಅನ್ನು ರಾಕೆಟ್‌ನ ಮೇಲ್ಭಾಗದಲ್ಲಿ ಅಳವಡಿಸಲಾಗಿದೆ.

ಇದನ್ನೂ ಓದಿ: ಮತ್ತೆ ವಿಘ್ನ.. ಕೊನೆ ಸೆಕೆಂಡ್​ನಲ್ಲಿ ಕೈಕೊಟ್ಟ ಮಷಿನ್; ಸುನಿತಾ ವಿಲಿಯಮ್ಸ್​​ ಭೂಮಿಗೆ ಬರೋದು ಮತ್ತೆ ವಿಳಂಬ!

publive-image

ಮಾರ್ಚ್ 19ರೊಳಗೆ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಾಹ್ಯಾಕಾಶ ನಿಲ್ದಾಣದಿಂದ ಹೊರಡುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. Crew-10 ಕಾರ್ಯಾಚರಣೆಯ ಅಡಿಯಲ್ಲಿ 4 ಗಗನಯಾತ್ರಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಹೊರಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಮಾರ್ಚ್​ 19 ರಂದು ಬಾಹ್ಯಾಕಾಶ ವಿಮಾನ ನಿಲ್ದಾಣದಿಂದ ಭೂಮಿಯತ್ತ ತೆರಳಲಿದ್ದಾರೆ.

ಪಾಲ್ಕನ್ ರಾಕೆಟ್​ನಲ್ಲಿ ಯಾರೆಲ್ಲ ಇದ್ದಾರೆ..?

ನಾಸಾದ ಆನ್ನೆ ಮೆಕ್‌ಕ್ಲೇನ್ ( Anne McClain ), ನಿಕೋಲ್ ಅಯರ್ಸ್ (Nichole Ayers), ಜಪಾನ್‌ನ ಬಾಹ್ಯಾಕಾಶ ಸಂಸ್ಥೆ JAXA ಗಗನಯಾತ್ರಿ ಟಕುಯಾ ಒನಿಶಿ (Takuya Onishi) ಮತ್ತು ರಷ್ಯಾದ ಕಿರಿಲ್ ಪೆಸ್ಕೋವ್ (Kirill Peskov) ಬಾಹ್ಯಾಕಾಶದತ್ತ ಹೊರಟಿದ್ದಾರೆ. ಈ ನಾಲ್ವರು ಸುನಿತಾ ವಿಲಿಯಮ್ಸ್, ವಿಲ್ಮೋರ್​ ಅವರನ್ನು ಭೂಮಿಗೆ ವಾಪಸ್ ಕರೆತರುವಲ್ಲಿ ಪ್ರಮುಖ ಕಾರ್ಯಚರಣೆ ನಡೆಸಲಿದ್ದಾರೆ.

ಇದನ್ನೂ ಓದಿ: ನಾಸಾ ಗುಡ್‌ನ್ಯೂಸ್‌.. ಗಗನಯಾತ್ರಿ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ವಾಪಸ್ ಬರುವ ಡೇಟ್ ಫಿಕ್ಸ್‌!

publive-image

ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಕಳೆದ ಒಂಬತ್ತು ತಿಂಗಳಿನಿಂದ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದಾರೆ. ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಮೂಲಕ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಹೋಗಿದ್ದರು. 8 ದಿನಗಳ ಅಧ್ಯಯನ ಸಂಬಂಧ ಹೋಗಿದ್ದ ಈ ಯಾತ್ರಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಸ್ಟಾರ್‌ಲೈನರ್ ನೌಕೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಭೂಮಿಗೆ ವಾಪಸ್ ಆಗಲು ಸಾಧ್ಯವಾಗಲಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment