newsfirstkannada.com

ಈಡಿಗ ಸಂಪ್ರದಾಯದಂತೆ ನೆರವೇರಿದ ಸ್ಪಂದನಾ ಅಂತ್ಯಕ್ರಿಯೆ; ಶೋಕ ಸಾಗರದಲ್ಲಿ ದೊಡ್ಮನೆ ಕುಟುಂಬ!

Share :

Published August 9, 2023 at 4:33pm

Update August 9, 2023 at 4:35pm

  ಶೋಕ ಸಾಗರದಲ್ಲಿ ದೊಡ್ಮನೆ, ಬಿ.ಕೆ ಶಿವರಾಂ ಕುಟುಂಬ

  ಈಡಿಗ ಸಂಪ್ರದಾಯದ ಪ್ರಕಾರ ಸ್ಪಂದನಾ ಅಂತ್ಯಕ್ರಿಯೆ

  ಸ್ಪಂದನಾ ಸಾವಿಗೆ ಕಂಬನಿ ಮಿಡಿದ ಸ್ಯಾಂಡಲ್​ವುಡ್​..!​

ಬೆಂಗಳೂರು: ಇಂದು ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಮಲ್ಲೇಶ್ವರಂ ಸಮೀಪವಿರೋ ಹರಿಶ್ಚಂದ್ರ ಘಾಟ್‌ ಚಿತಾಗಾರದಲ್ಲಿ ಈಡಿಗ ಸಂಪ್ರದಾಯದ ವಿಧಿ ವಿಧಾನಗಳ ಪ್ರಕಾರ ಸ್ಪಂದನಾ ಅಂತ್ಯಸಂಸ್ಕಾರ ನಡೆಸಲಾಗಿದೆ.

ಇನ್ನು, ಸ್ಪಂದನಾ ಅಂತ್ಯಕ್ರಿಯೆಯಲ್ಲಿ ಡಾ. ರಾಜಕುಮಾರ್​​​​ ಮತ್ತು ಬಿಕೆ ಶಿವರಾಂ ಕುಟುಂಬಸ್ಥರು ಭಾಗಿಯಾಗಿದ್ದರು. ಕನ್ನಡ ಚಿತ್ರರಂಗದ ನಟ- ನಟಿಯರು, ನಿರ್ದೇಶಕರು, ನಿರ್ಮಾಪಕರು, ಸಹ ಕಲಾವಿದರು, ತಂತ್ರಜ್ಞರು ಸೇರಿದಂತೆ ಇಡೀ ಸ್ಯಾಂಡಲ್‌ವುಡ್‌ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಕಂಬನಿ ಮಿಡಿದಿದೆ.

ಬ್ಯಾಂಕಾಕ್​​ನಿಂದ ಬೆಂಗಳೂರಿಗೆ ತಂದ ಮೃತದೇಹ

ಇತ್ತೀಚೆಗೆ ವಿದೇಶದಲ್ಲಿ ಜೀವ ಕಳೆದುಕೊಂಡಿದ್ದ ಸ್ಪಂದನಾ ಮೃತದೇಹವನ್ನು ನಿನ್ನೆ ರಾತ್ರಿಯಷ್ಟೇ ಬ್ಯಾಂಕಾಕ್​​ನಿಂದ ಬೆಂಗಳೂರಿಗೆ ತರಲಾಗಿತ್ತು. ಮೃತದೇಹವನ್ನು ಬೆಂಗಳೂರು ವಿಮಾನ ನಿಲ್ದಾಣದಿಂದ ಮಲ್ಲೇಶ್ವರಂನ ಸ್ಪಂದನಾ ತವರು ಮನೆಗೆ ತೆಗೆದಕೊಂಡು ಹೋಗಲಾಗಿತ್ತು. ಇಂದು ಮಧ್ಯಾಹ್ನದವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಪತ್ನಿಯನ್ನು ಕಳೆದುಕೊಂಡು ನಟ ವಿಜಯ ರಾಘವೇಂದ್ರ ಆಘಾತಕ್ಕೆ ಒಳಗಾಗಿದ್ದಾರೆ. ಅತ್ತಿಗೆ ಅಕಾಲಿಕ ನಿಧನಕ್ಕೆ ನಟ ಶ್ರೀಮುರಳಿ ಸೇರಿದಂತೆ ಇಡೀ ಕುಟುಂಬ ಕಣ್ಣೀರಿಟ್ಟಿದೆ. ಮನೆ ಮಗಳನ್ನು ಕಳೆದುಕೊಂಡ ದುಃಖದಲ್ಲಿ ದೊಡ್ಮನೆ, ಬಿಕೆ ಶಿವರಾಂ, ಬಿಕೆ ಹರಿಪ್ರಸಾದ್ ಕುಟುಂಬ ಮುಳುಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈಡಿಗ ಸಂಪ್ರದಾಯದಂತೆ ನೆರವೇರಿದ ಸ್ಪಂದನಾ ಅಂತ್ಯಕ್ರಿಯೆ; ಶೋಕ ಸಾಗರದಲ್ಲಿ ದೊಡ್ಮನೆ ಕುಟುಂಬ!

https://newsfirstlive.com/wp-content/uploads/2023/08/Vijay-Raghavendra.jpg

Load More