/newsfirstlive-kannada/media/post_attachments/wp-content/uploads/2025/06/Subhanshu-Shukla.jpg)
ಬಾಹ್ಯಾಕಾಶ ಇತಿಹಾಸದಲ್ಲಿ ಭಾರತದ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾನಿಗಳನ್ನ ಌಕ್ಸಿಯೋಂ-4 ನೌಕೆ ಮೂಲಕ ಫಾಲ್ಕನ್ ರಾಕೆಟ್ ಯಶಸ್ವಿಯಾಗಿ ಅಂತರಿಕ್ಷಕ್ಕೆ ಹೊತ್ತೊಯ್ದಿತ್ತು. 40 ನಿಮಿಷದ ಮುಂಚೆಯೇ ಌಕ್ಸಿಯೋಂ-4 ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿತ್ತು.
ಇದನ್ನೂ ಓದಿ:ಬಾಹ್ಯಾಕಾಶದಲ್ಲಿ ಭಾರತ.. 40 ನಿಮಿಷದ ಮುಂಚೆಯೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಶುಭಾಂಶು ಶುಕ್ಲಾ..
ಇದೀಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿರುವ ಮೊದಲ ಭಾರತೀಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಮಾತುಕತೆ ನಡೆಸಿದ್ದಾರೆ. ಬಾಹ್ಯಾಕಾಶ ನಿಲ್ದಾಣ ತಲುಪಿದ ಶುಭಾಂಶು ಶುಕ್ಲಾ ಅವರು ‘ಜೈ ಹಿಂದ್’ ಎಂದಿದ್ದಾರೆ. ಈ ಬಾಹ್ಯಾಕಾಶ ಯಾತ್ರೆ ನನ್ನದಲ್ಲ, ನನ್ನ ದೇಶದ್ದು. ಬಾಹ್ಯಾಕಾಶದಿಂದ ಭಾರತ ಅದ್ಭುತವಾಗಿ ಕಾಣುತ್ತಿದೆ. ಗುರುತ್ವಾಕರ್ಷಣೆ ಇಲ್ಲದೇ ಕಾಲುಗಳನ್ನ ಕಟ್ಟಿಕೊಂಡಿದ್ದೇನೆ. ಕಾಲುಗಳನ್ನ ಕಟ್ಟಿಕೊಂಡೇ ಮಾತಾಡುತ್ತಿದ್ದೇನೆ. ಭಾರತವು ತುಂಬಾ ಭವ್ಯವಾಗಿ, ತುಂಬಾ ದೊಡ್ಡದಾಗಿ, ನಾವು ನಕ್ಷೆಯಲ್ಲಿ ನೋಡುವುದಕ್ಕಿಂತ ದೊಡ್ಡದಾಗಿ ಕಾಣುತ್ತಿದೆ. ನಾವು ಭೂಮಿಯನ್ನು ಹೊರಗಿನಿಂದ ನೋಡಿದಾಗ, ಯಾವುದೇ ಗಡಿ ಇಲ್ಲ, ಯಾವುದೇ ರಾಜ್ಯ ಅಸ್ತಿತ್ವದಲ್ಲಿಲ್ಲ ಮತ್ತು ಯಾವುದೇ ದೇಶಗಳು ಅಸ್ತಿತ್ವದಲ್ಲಿಲ್ಲ ಎಂದು ತೋರುತ್ತದೆ. ನಾವೆಲ್ಲರೂ ಮಾನವೀಯತೆಯ ಭಾಗ, ಮತ್ತು ಭೂಮಿಯು ನಮ್ಮ ಒಂದೇ ಮನೆ, ಮತ್ತು ನಾವೆಲ್ಲರೂ ಅದರಲ್ಲಿದ್ದೇವೆ. ಭಾರತೀಯ ಜನರ ಪ್ರೀತಿ ಮತ್ತು ಆಶೀರ್ವಾದವೇ ತಮ್ಮನ್ನು ಸುರಕ್ಷಿತವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆತಂದಿದೆ ಎಂದು ಹೇಳಿದ್ದಾರೆ.
ಹೀಗೆ ಮಾತನ್ನು ಮುಂದುವರೆಸಿದ ಅವರು, ಇಲ್ಲಿ ಎಲ್ಲವೂ ವಿಭಿನ್ನವಾಗಿದೆ. ನಾವು ಒಂದು ವರ್ಷ ತರಬೇತಿ ಪಡೆದೆವು ಮತ್ತು ನಾನು ವಿಭಿನ್ನ ವ್ಯವಸ್ಥೆಗಳ ಬಗ್ಗೆ ಕಲಿತಿದ್ದೇನೆ. ಆದರೆ ಇಲ್ಲಿಗೆ ಬಂದ ನಂತರ ಎಲ್ಲವೂ ಬದಲಾಯಿತು. ಇಲ್ಲಿ, ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇಲ್ಲದ ಕಾರಣ ಸಣ್ಣ ವಿಷಯಗಳು ಸಹ ವಿಭಿನ್ನವಾಗಿವೆ. ಇಲ್ಲಿ ಮಲಗುವುದು ಒಂದು ದೊಡ್ಡ ಸವಾಲು. ಈ ಪರಿಸರಕ್ಕೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಭಾರತವು ತ್ವರಿತಗತಿಯಲ್ಲಿ ಪ್ರಗತಿ ಸಾಧಿಸುತ್ತಿದೆ. ಭಾರತವು ಶಾಂತಿಯುತವಾಗಿ ತನ್ನ ಕೇಂದ್ರಗಳನ್ನು ಹೊಂದಿರುತ್ತದೆ. ತರಬೇತಿ ಮತ್ತು ಉಡಾವಣೆಯ ಸಮಯದಲ್ಲಿ ಅನೇಕ ಒತ್ತಡದ ಸಂದರ್ಭಗಳು ಇರುವುದರಿಂದ, ಮೈಂಡ್‌ಫುಲ್‌ನೆಸ್ ಶಾಂತತೆಯನ್ನು ಕಾಪಾಡಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಮೈಂಡ್‌ಫುಲ್‌ನೆಸ್ ಮತ್ತು ಧ್ಯಾನವು ಬಹಳಷ್ಟು ಸಹಾಯ ಮಾಡುತ್ತದೆ. ಇಲ್ಲಿ ಎಲ್ಲವೂ ವಿಭಿನ್ನವಾಗಿದೆ. ನಾವು ಒಂದು ವರ್ಷ ತರಬೇತಿ ಪಡೆದಿದ್ದೇವೆ ಮತ್ತು ನಾನು ವಿಭಿನ್ನ ವ್ಯವಸ್ಥೆಗಳ ಬಗ್ಗೆ ಕಲಿತಿದ್ದೇನೆ. ಆದರೆ ಇಲ್ಲಿಗೆ ಬಂದ ನಂತರ ಎಲ್ಲವೂ ಬದಲಾಗಿದೆ.ಇಲ್ಲಿ, ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇಲ್ಲದ ಕಾರಣ ಸಣ್ಣ ವಿಷಯಗಳು ಸಹ ವಿಭಿನ್ನವಾಗಿವೆ. ಇಲ್ಲಿ ಮಲಗುವುದು ಒಂದು ದೊಡ್ಡ ಸವಾಲು. ಈ ಪರಿಸರಕ್ಕೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಸ್ವಲ್ಪ ಸಮಯದ ಹಿಂದೆ, ನಾನು ಕಿಟಕಿಯಿಂದ ಹೊರಗೆ ನೋಡುತ್ತಿದ್ದಾಗ, ನಾವು ಹವಾಯಿಯ ಮೇಲೆ ಹಾರುತ್ತಿದ್ದೆವು. ನಾವು ಕಕ್ಷೆಯಿಂದ ದಿನಕ್ಕೆ 16 ಬಾರಿ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡುತ್ತೇವೆ. ನಮ್ಮ ರಾಷ್ಟ್ರವು ಬಹಳ ವೇಗದಲ್ಲಿ ಮುಂದುವರಿಯುತ್ತಿದೆ ಎಂದಿದ್ದಾರೆ.
ಇದಾದ ಬಳಿಕ ಮೋದಿ ಅವರು, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ನಿಮ್ಮೊಂದಿಗೆ ತೆಗೆದುಕೊಂಡು ಹೋದ 'ಗಜರ್ ಕಾ ಹಲ್ವಾ' ಅನ್ನು ನೀವು ತಿಂದಿದ್ದೀರಾ ಎಂದು ಕೇಳುತ್ತಾರೆ. ಆಗ ಹೌದು, ನಾನು ಗಜರ್ ಕಾ ಹಲ್ವಾ, ಮೂಂಗ್ ದಾಲ್ ಕಾ ಹಲ್ವಾ ಮತ್ತು ಆಮ್ ರಸಗಳನ್ನು ತಂದಿದ್ದೇನೆ. ಇತರ ದೇಶಗಳಿಂದ ನನ್ನೊಂದಿಗೆ ಸೇರಿಕೊಂಡ ಪ್ರತಿಯೊಬ್ಬರೂ ಶ್ರೀಮಂತ ಭಾರತೀಯ ಪಾಕ ಪದ್ಧತಿಯನ್ನು ಆನಂದಿಸಬೇಕೆಂದು ನಾನು ಬಯಸುತ್ತೇನೆ. ನಾವೆಲ್ಲರೂ ಅದನ್ನು ಒಟ್ಟಿಗೆ ಸೇವಿಸಿದ್ದೇವೆ ಮತ್ತು ಎಲ್ಲರೂ ಅದನ್ನು ಇಷ್ಟಪಟ್ಟಿದ್ದಾರೆ ಎಂದರು.
जय हिन्द 🇮🇳pic.twitter.com/ND13vCorQc
— Mr.K (@KAMAL__09)
जय हिन्द 🇮🇳pic.twitter.com/ND13vCorQc
— Mr.K (@KAMAL__09) June 28, 2025
">June 28, 2025
ಹೌದು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ (ಐಎಸ್ಎಸ್) ಗಗನಯಾತ್ರಿ ಶುಭಾಂಶು ಶುಕ್ಲಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕವೇ ಸಂವಾದ ನಡೆಸಿದ್ದಾರೆ. ಜೂನ್ 25ರಂದು ಆಕ್ಸಿಯಮ್ -4 ಕಾರ್ಯಾಚರಣೆಯ ಭಾಗವಾಗಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಇತರ ಮೂವರು ಗಗನಯಾತ್ರಿಗಳ ಜೊತೆ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸುಲ್‌ನಲ್ಲಿ ಐಎಸ್‌ಎಸ್‌ಗೆ ಹಾರಿದ್ದರು. ಈ ಮೂಲಕ 40 ವರ್ಷಗಳ ನಂತರ ಬಾಹ್ಯಾಕಾಶಕ್ಕೆ ಹಾರಿದ ಮೊದಲ ಭಾರತೀಯ ಗಗನಯಾತ್ರಿಯೆನಿಸಿಕೊಂಡ ಶುಭಾಂಶು ಶುಕ್ಲಾ ಇತಿಹಾಸ ಸೃಷ್ಟಿಸಿದ್ದರು.
ಆಕ್ಸಿಯಮ್ -4ರ ಯಶಸ್ವಿ ಉಡಾವಣೆಯ ನಂತರ, ಪ್ರಧಾನಿ ಮೋದಿ ಅವರು ಈ ಮಿಷನ್ ಪೈಲಟ್ ಶುಭಾಂಶು ಶುಕ್ಲಾ ಮತ್ತು ಇತರ ಸಿಬ್ಬಂದಿ ಸದಸ್ಯರಾದ ಮಿಷನ್ ಕಮಾಂಡರ್ ಪೆಗ್ಗಿ ವಿಟ್ಸನ್ ಮತ್ತು ಮಿಷನ್ ತಜ್ಞರಾದ ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಪು ಅವರನ್ನು ಅಭಿನಂದಿಸಿದ್ದರು. ಐಎಸ್‌ಎಸ್‌ಗೆ ಹಾರಿದ ಮೊದಲ ಭಾರತೀಯ ಗಗನಯಾತ್ರಿಯಾಗಲು ಹೊರಟಿದ್ದ ಶುಭಾಂಶು ಶುಕ್ಲಾ ಅವರು 1.4 ಬಿಲಿಯನ್ ಭಾರತೀಯರ ಆಶಯಗಳು, ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ತಮ್ಮೊಂದಿಗೆ ಕೊಂಡೊಯ್ದಿದ್ದಾರೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇನ್ನೂ, ಈ ಹಿಂದೆ 1984ರಲ್ಲಿ ರಾಕೇಶ್ ಶರ್ಮಾ "ರಷ್ಯಾ ಸೂಯೆಜ್ ನೌಕೆ" ಮೂಲಕ ಬಾಹ್ಯಾಕಾಶಕ್ಕೆ ಹೋಗಿದ್ದರು. ಆಗ ರಾಕೇಶ್ ಶರ್ಮಾ ಅವರ ಜೊತೆಗೆ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಇದೇ ರೀತಿ ಮಾತುಕತೆ ನಡೆಸಿದ್ದರು. ಆಗ ಇಂದಿರಾ ಗಾಂಧಿ ಅವರು ರಾಕೇಶ್ ಶರ್ಮಾ ಅವರಿಗೆ ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತಿದೆ ಅಂತ ಕೇಳಿದ್ದರು. ಅದಕ್ಕೆ ‘‘ಸಾರೆ ಜಹಾಸೆ ಅಚ್ಚಾ ಹಿಂದೂಸ್ತಾ ಹಮಾರಾ ಹಮ ಬುಲಬುಲೆ ಹೈ ಇಸಕೆ ಏ ಗುಲಸಿತಾ ಹಮಾರಾ ಹಮಾರಾ ಸಾರೆ ಜಹಾಸೆ ಅಚ್ಚಾ ಹಿಂದೂಸ್ತಾ ಹಮಾರಾ’’ ಅಂತ ಪ್ರತಿಕ್ರಿಯೆ ಕೊಟ್ಟಿದ್ದರು. ಈಗ ಮೋದಿ ಅವರು ಇಂದಿರಾ ಗಾಂಧಿ ಅವರ ದಾಖಲೆಯನ್ನು ಸರಿಗಟ್ಟಿದಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ