BREAKING: ಬಿಜೆಪಿ 18 ಶಾಸಕರ ಅಮಾನತು ಆದೇಶ ವಾಪಸ್‌ ಪಡೆಯಲು ನಿರ್ಧಾರ; ಕಾರಣ ಇಲ್ಲಿದೆ!

author-image
admin
Updated On
BREAKING: ಬಿಜೆಪಿ 18 ಶಾಸಕರ ಅಮಾನತು ಆದೇಶ ವಾಪಸ್‌ ಪಡೆಯಲು ನಿರ್ಧಾರ; ಕಾರಣ ಇಲ್ಲಿದೆ!
Advertisment
  • ಕಳೆದ ಬಜೆಟ್ ಅಧಿವೇಶನದಲ್ಲಿ ಅಶಿಸ್ತು ತೋರಿದ್ದಾರೆ ಎಂದು ಆದೇಶ
  • 6 ತಿಂಗಳ ಕಾಲ ಅಮಾನತು ಮಾಡಿ ಆದೇಶಿಸಿದ್ದ ಸ್ಪೀಕರ್‌ ಯು.ಟಿ ಖಾದರ್
  • ಸ್ಪೀಕರ್, ಸಿಎಂ ಹಾಗೂ ಕಾನೂನು ಸಚಿವರಿಗೆ ಆರ್. ಅಶೋಕ್‌ ಮಾಹಿತಿ

ವಿಧಾನಸಭಾ ಅಧಿವೇಶನದಲ್ಲಿ 18 ಬಿಜೆಪಿ ಶಾಸಕರ ಅಮಾನತು ಮಾಡಿದ್ದ ಆದೇಶವನ್ನು ಹಿಂಪಡೆಯಲು ಸ್ಪೀಕರ್ ಯು.ಟಿ ಖಾದರ್ ನೇತೃತ್ವದಲ್ಲಿ ನಡೆದ ಸಭೆ ನಿರ್ಧಾರ ಮಾಡಿದೆ ಎನ್ನಲಾಗಿದೆ. ಸ್ಪೀಕರ್ ಯು.ಟಿ ಖಾದರ್ ಅವರು ಈ ಬಗ್ಗೆ ಅಧಿಕೃತ ಆದೇಶ ನೀಡುವುದು ಬಾಕಿ ಇದೆ.

publive-image

ಕಳೆದ ಬಜೆಟ್ ಅಧಿವೇಶನದಲ್ಲಿ ಅಶಿಸ್ತು ತೋರಿದ್ದಾರೆ ಎಂದು ಆರೋಪಿಸಿ ಸ್ಪೀಕರ್ ಯು.ಟಿ ಖಾದರ್ ಅವರು 18 ಬಿಜೆಪಿ ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಿ ಆದೇಶಿಸಿದ್ದರು. ಸದ್ಯ ಸ್ಪೀಕರ್‌ ಯು.ಟಿ ಖಾದರ್ ಅವರ ಮನವೊಲಿಸುವಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಯಶಸ್ವಿಯಾಗಿದ್ದಾರೆ.

publive-image

ಆರ್. ಅಶೋಕ್ ಭರವಸೆ!
ಸ್ಪೀಕರ್ ಖಾದರ್ ನೇತೃತ್ವದ ಸಭೆ ಬಳಿಕ ವಿಪಕ್ಷ ನಾಯಕ ಆರ್‌. ಅಶೋಕ್ ಅವರು ಪ್ರತಿಕ್ರಿಯೆ ನೀಡಿದರು. ಬಿಜೆಪಿ ಶಾಸಕರ ಅಮಾನತು ಮಾಡಿರುವುದನ್ನ ವಾಪಸ್ ಪಡೆದು ಸ್ಪೀಕರ್ ಅವ್ರೇ ಅಧಿಕೃತವಾಗಿ ಹೇಳಬೇಕು ಎಂದರು.

ಕಳೆದ 15 ದಿನದಿಂದ 18 ಬಿಜೆಪಿ ಶಾಸಕರ ಅಮಾನತು ಬಗ್ಗೆ ಸಭಾಧ್ಯಕ್ಷರ ಬಳಿ ಚರ್ಚೆ ಮಾಡುತ್ತಾ ಇದ್ದೆವು. ವಿಧಾನಸಭೆಗೆ ಆಡಳಿತ ಪಕ್ಷ ಮಾತ್ರವಲ್ಲ, ವಿರೋಧ ಪಕ್ಷವೂ ಮುಖ್ಯ. ಈ ರೀತಿಯ ಘಟನೆ ಅನೇಕ ಬಾರಿ ನಡೆದಿದೆ. 6 ತಿಂಗಳು ಅಮಾನತು ಮಾಡುವುದು ಸರಿಯಲ್ಲ. ಇದೇ ರೀತಿ ಆದರೆ ಮುಂದೆ ಆಡಳಿತ ಪಕ್ಷವೇ ಅಧಿವೇಶನದಲ್ಲಿ ಇರಬೇಕಾಗುತ್ತದೆ.

ಇದನ್ನೂ ಓದಿ: ಲಾಲು ಕುಟುಂಬದಲ್ಲಿ ದೊಡ್ಡ ಬಿರುಗಾಳಿ.. ಹಿರಿಯ ಮಗನಿಗೆ RJD ಪಕ್ಷ ಗೇಟ್‌ಪಾಸ್‌; ಕಾರಣವೇನು? 

ನಮ್ಮ ಶಾಸಕರು ಈಗಾಗಲೇ ವಿಷಾಧ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಸಹ ಇದು ಇಲ್ಲಿಗೆ ಮುಕ್ತಾಯ ಆಗಬೇಕು ಅಂತ ಹೇಳಿದ್ದಾರೆ. ಸ್ಪೀಕರ್ ಯು.ಟಿ ಖಾದರ್ ಅವರು ನಾಳೆಯಿಂದ ಹಜ್ ಯಾತ್ರೆಗೆ ಹೋಗ್ತಾ ಇದ್ದಾರೆ. ಇದನ್ನ ಇಲ್ಲಿಗೆ ಅಂತ್ಯ ಮಾಡಬೇಕು ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿಎಂ, ಸ್ಪೀಕರ್ ಸಹ ಸ್ಪಂದನೆ ಮಾಡಿದ್ದಾರೆ. ನಾಳೆಯೊಳಗೆ ಅಮಾನತು ಆದೇಶ ವಾಪಸ್ ಪಡೆದ ಬಗ್ಗೆ ಅಧಿಕೃತ ಆದೇಶ ಹೊರಬೀಳಬಹುದು ಎಂದು ಆರ್‌. ಅಶೋಕ್ ತಿಳಿಸಿದ್ದಾರೆ.

publive-image

ಅಮಾನತು ಪ್ರಕರಣ ಇತ್ಯರ್ಥ ಆಗಿದ್ದು ಹೇಗೆ?

1. ಕಳೆದ ಬಜೆಟ್ ಅಧಿವೇಶನದಲ್ಲಿ 18 ಮಂದಿ ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದ ಸ್ಪೀಕರ್ ಯು.ಟಿ.ಖಾದರ್
2. ಸರ್ಕಾರದ ಜೊತೆಗೆ ಚರ್ಚೆ ಮಾಡಿಯೇ ಅಮಾನತು ಮಾಡಿರುವುದಾಗಿ ಘೋಷಿಸಿದ್ದ ಖಾದರ್
3. ಬಳಿಕ ಪ್ರಕರಣ ಇತ್ಯರ್ಥ ಪಡಿಸುವಂತೆ ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಒತ್ತಾಯ
4. ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ, ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹಾಗೂ ಸ್ಪೀಕರ್ ಯು.ಟಿ. ಖಾದರ್ ಜೊತೆಗೆ ನಿರಂತರ ಸಂಪರ್ಕ ಸಾಧಿಸಿದ್ದ ಆರ್. ಅಶೋಕ್
5. ಕೊನೆಗೂ ಸ್ಪೀಕರ್ ಮನವೊಲಿಸುವಲ್ಲಿ ಯಶಸ್ವಿಯಾಗಿರುವ ಆರ್. ಅಶೋಕ್
6. ಸ್ಪೀಕರ್, ಸಿಎಂ ಹಾಗೂ ಕಾನೂನು ಸಚಿವರಿಗೆ ಆರ್. ಅಶೋಕ್‌ರಿಂದ ಸಾಲು ಸಾಲು ಮಾಹಿತಿ
7. ನಮ್ಮ ಶಾಸಕರುಗಳು ನಡೆದ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ
8. ಸ್ಪೀಕರ್ ಅವರನ್ನು ಭೇಟಿ ಮಾಡಿದ್ದು, ವಿಷಾದದ ಬಗ್ಗೆ ತಿಳಿಸಿದ್ದಾರೆ
9. ಅಮಾನತ್ತಾಗಿರುವ ಶಾಸಕರಿಗೆ 6 ತಿಂಗಳ ಟಿಎ, ಡಿಎ ಇಲ್ಲ ಎಂಬುದು ಸರಿಯಲ್ಲ. ಇದರಿಂದ ಕೆಲ ಶಾಸಕರು ಆರ್ಥಿಕ ಸಂಕಷ್ಟಕ್ಕೂ ಸಿಲುಕಿದ್ದಾರೆ ಎಂದು ಮಾಹಿತಿ ನೀಡಿರುವ ಆರ್.ಅಶೋಕ್.
10. ಆರ್.ಅಶೋಕ್ ಮಾತಿಗೆ ಇತ್ತ ಸ್ಪೀಕರ್ ಮುಂದೆ ಸರ್ಕಾರದ ಕಡೆಯಿಂದ ಸಕಾರಾತ್ಮಕವಾದ ಪ್ರತಿಕ್ರಿಯೆ ಲಭ್ಯ
11. ಸರ್ಕಾರಕ್ಕೆ ಈಗ ಎರಡು ವರ್ಷ ತುಂಬಿದೆ. ಇಂತಹ ಸಂದರ್ಭದಲ್ಲಿ ವಿಪಕ್ಷದ 18 ಶಾಸಕರ ಅಮಾನತ್ತು ಮುಜುಗರ ತರುವಂತೆ ಆಗಲಿದೆ.
12. ಹೀಗಾಗಿ, ಅಮಾನತು ಆದೇಶ ವಾಪಸ್ ಪಡೆಯುವಂತೆ ಸ್ಪೀಕರ್‌ಗೆ ಮನವಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment