ಮಧ್ಯರಾತ್ರಿವರೆಗೆ ವಿಧಾನಸಭೆ ಕಲಾಪ ನಡೆಸಿದ ಸ್ಪೀಕರ್ ಯು.ಟಿ ಖಾದರ್.. ಏನ್ ಚರ್ಚೆ ಆಗಿದೆ?

author-image
Bheemappa
Updated On
ಮಧ್ಯರಾತ್ರಿವರೆಗೆ ವಿಧಾನಸಭೆ ಕಲಾಪ ನಡೆಸಿದ ಸ್ಪೀಕರ್ ಯು.ಟಿ ಖಾದರ್.. ಏನ್ ಚರ್ಚೆ ಆಗಿದೆ?
Advertisment
  • ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ
  • ಊಟ ಮಾಡಲು ಕೂಡ ಬಿಟ್ಟಿಲ್ಲವೆಂದು ದೂರು ಹೇಳಿದ ಶಾಸಕ
  • ಒಟ್ಟು ಎಷ್ಟು ಗಂಟೆಗಳವರೆಗೆ ವಿಧಾನಸಭೆ ಕಲಾಪ ನಡೆಯಿತು..?

ಬೆಳಗಾವಿ: ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನವನ್ನು ಸ್ಪೀಕರ್ ಯು.ಟಿ ಖಾದರ್ ಅವರು ತಡರಾತ್ರಿವರೆಗೂ ನಡೆಸಿದ್ದಾರೆ. ಮಧ್ಯರಾತ್ರಿ 1 ಗಂಟೆಗೆ ಕಲಾಪ ಮುಂದೂಡಿದ ಸ್ಪೀಕರ್ ಕಲಾಪಕ್ಕೆ ಸಹಕರಿಸಿದ್ದಕ್ಕೆ ಧನ್ಯವಾದ ಹೇಳಿದರು.

ಈ ವೇಳೆ ಕಾಂಗ್ರೆಸ್ ಸದಸ್ಯ ಅಶೋಕ್ ಕುಮಾರ್ ರೈ ಸ್ಪೀಕರ್​ಗೆ ಗುಡ್​ಮಾರ್ನಿಂಗ್ ಹೇಳಿದರು. ತುಳು ಭಾಷೆಯನ್ನ 2ನೇ ಅಧಿಕೃತ ಭಾಷೆ ಮಾಡುವ ವಿಚಾರ ಸದನದ ಗಮನಕ್ಕೆ ತಂದರು. ಇದರ ಬಗ್ಗೆ ಚರ್ಚೆಗೆ ಕರಾವಳಿ ಶಾಸಕರು ಸಿಎಂ ಭೇಟಿ ಮಾಡಿ ಚರ್ಚಿಸೋಣ ಅಂತ ಸ್ಪೀಕರ್ ಹೇಳಿದರು. ಆಗ ಎದ್ದು ನಿಂತ ಸಚಿವ ಕೃಷ್ಣ ಬೈರೇಗೌಡ ಈ ಬಗ್ಗೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ:ಪ್ರವಾಸಿಗರೇ ಇಲ್ ಕೇಳಿ..! ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ನೋ ಎಂಟ್ರಿ, ಕಾರಣ?

publive-image

ಇನ್ನು ಗುರುಮಿಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ತಮ್ಮ ಗೋಳು ತೋಡಿಕೊಂಡರು. ಮಧ್ಯಾಹ್ನ 2.30ರಿಂದ ಕೂತಿದ್ದೇವೆ, 14.30 ಗಂಟೆ ಸದನ ನಡೆದಿದೆ. ಊಟ ಮಾಡಲು ಕೂಡ ಬಿಟ್ಟಿಲ್ಲ ಎಂದರು. ಈ ಮಾತಿಗೆ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ ಖಾದರ್ ಊಟ ಹೆಚ್ಚಾಗಿ ಜೀವ ಕಳೆದುಕೊಂಡಿದ್ದಾರೆ. ಆದರೆ ಊಟ ಕಡಿಮೆಯಾಗಿ ಯಾರೂ ಸತ್ತಿಲ್ಲ. ಒಂದು ಹೊತ್ತು ಊಟ ಬಿಟ್ರೆ ಏನೂ ಆಗಲ್ಲ ಎಂದು ಹೇಳಿದರು.

ಇದಕ್ಕೂ ಮುನ್ನ ಕಾಂಗ್ರೆಸ್ ಸದಸ್ಯ ನಾರಾ ಭರತ್ ರೆಡ್ಡಿ ಬಿಮ್ಸ್​ ಕರ್ಮಕಾಂಡದ ಬಗ್ಗೆ ಗಮನ ಸೆಳೆದರು. ಬಿಮ್ಸ್ ನಿರ್ದೇಶಕರನ್ನು ಸಸ್ಪೆಂಡ್ ಮಾಡಿ ಎಂದು ಹೇಳಿದ್ದಾರೆ. ಇನ್ನು ಕಾಂಗ್ರೆಸ್ ಸದಸ್ಯ ಯಶವಂತರಾಯಗೌಡ ಪಾಟೀಲ್ ವಿಜಯಪುರದಲ್ಲಿ ತೊಗರಿ ಬೆಳೆಗಾರರ ಸಂಕಷ್ಟಗಳನ್ನು ಬಿಚ್ಚಿಟ್ಟರು. ಸರ್ಕಾರ ರೈತರ ಸಹಾಯಕ್ಕೆ ಬರಬೇಕು ಎಂದು ಮನವಿ ಮಾಡಿದರು. ಇದನ್ನು ಸಿಎಂ ಸಿದ್ದರಾಮಯ್ಯರವರ ಗಮನಕ್ಕೆ ಬಂದಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಉತ್ತರ ಕೊಟ್ಟರು.

ಹೆಚ್ಚು ಸಮಯವಾಗಿದೆ ಬೇಗ ನಮಗೂ ಮಾತನಾಡಲು ಅವಕಾಶ ಕೊಡಿ ಎಂದು ಕೆಲ ಶಾಶಕರು ಕೇಳಿದರು. ಇದಕ್ಕೆ ಉತ್ತರಿಸಿದ ಸ್ಪೀಕರ್ ಯುಟಿ ಖಾದರ್, ವಿಶ್ವಕಪ್ ಕ್ರಿಕೆಟ್ ಎಂದರೆ ನಿದ್ದೆ ಬಿಟ್ಟು ರಾತ್ರಿಯೆಲ್ಲ ಎದ್ದು ನೋಡುತ್ತಿರಲ್ವಾ?. ಅದೇ ರೀತಿ ಸದನಕ್ಕೂ ಸಹಕಾರ ಕೊಡಿ ಎಂದು ಹೇಳಿದರು. ದೇವದುರ್ಗ ಶಾಸಕಿ ಕರೆಮ್ಮ ನಾಯ್ಕ್, ಸಚಿವರ ಉತ್ತರಕ್ಕಾಗಿ ಕಾಯುತ್ತಿದ್ದರು.

ಆಗ ಮಾತನಾಡುತ್ತಿದ್ದ ಇಂಡಿ ಶಾಸಕ ಯಶವಂತರಾಯಗೌಡ ಅವರು, ಶಾಸಕಿ ಕರೆಮ್ಮ ನಾಯ್ಕ್ ಅವರು ಜಾಸ್ತಿ ಸಮಯದಿಂದ ಕಾಯುತ್ತಿದ್ದಾರೆ. ಅವರಿಗೆ ಉತ್ತರ ಕೊಟ್ಟು ಕಳುಹಿಸಿ ಎಂದು ಮನವಿ ಮಾಡಿದರು. ಇನ್ನು ಬೆಳಗ್ಗೆ 10 ಗಂಟೆಗೆ ಕಲಾಪ ಮುಂದೂಡಿದಾಗ ಸದನದಲ್ಲಿ ಸ್ಪೀಕರ್ ಹಾಗೂ ಡೆಪ್ಯುಟಿ ಸ್ಪೀಕರ್ ಸೇರಿ ಕೆಲ ಶಾಸಕರು, ಸಚಿವರು ಹಾಜರಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment