Advertisment

ರಸ್ತೆಯಲ್ಲಿ ಮಲಗಿ ರಾತ್ರಿ ಕಳೆದ ಸ್ಪೀಕರ್ ಯು.ಟಿ ಖಾದರ್; ಹಜ್ ಪ್ರವಾಸದಲ್ಲಿ ವಿಶೇಷ ಪ್ರಾರ್ಥನೆ

author-image
admin
Updated On
ರಸ್ತೆಯಲ್ಲಿ ಮಲಗಿ ರಾತ್ರಿ ಕಳೆದ ಸ್ಪೀಕರ್ ಯು.ಟಿ ಖಾದರ್; ಹಜ್ ಪ್ರವಾಸದಲ್ಲಿ ವಿಶೇಷ ಪ್ರಾರ್ಥನೆ
Advertisment
  • ಸೌದಿ ಅರೇಬಿಯಾದ ಪವಿತ್ರ ನಗರವಾದ ಮೆಕ್ಕಾಕ್ಕೆ ತೀರ್ಥಯಾತ್ರೆ
  • ಸಾಮಾನ್ಯರಂತೆ ರಸ್ತೆಯಲ್ಲಿ ಮಲಗಿ ರಾತ್ರಿ ಕಳೆದ ಯು.ಟಿ ಖಾದರ್
  • ಪವಿತ್ರ ಹಜ್ ಪ್ರವಾಸದಲ್ಲಿ ಎಲ್ಲರೂ ಈ ನಿಯಮ ಪಾಲಿಸಬೇಕು

ಹಜ್‌ ಯಾತ್ರೆಯ ಹಿನ್ನೆಲೆಯಲ್ಲಿ ಪ್ರಪಂಚದಾದ್ಯಂತ ಲಕ್ಷಾಂತರ ಮುಸ್ಲಿಂ ಬಾಂಧವರು ಸೌದಿ ಅರೇಬಿಯಾದ ಪವಿತ್ರ ನಗರವಾದ ಮೆಕ್ಕಾಕ್ಕೆ ತೀರ್ಥಯಾತ್ರೆ ಕೈಗೊಂಡಿದ್ದಾರೆ. ಸ್ಪೀಕರ್ ಯು.ಟಿ ಖಾದರ್ ಅವರು ಈ ಬಾರಿ ಆಪ್ತರ ಜೊತೆಯಲ್ಲಿ ಪವಿತ್ರ ತೀರ್ಥಯಾತ್ರೆ ಹಜ್ ಪ್ರವಾಸದಲ್ಲಿದ್ದಾರೆ.

Advertisment

ಮದೀನಾದಿಂದ ಮೆಕ್ಕಾಗೆ ಬರುವ ಮಾರ್ಗ ಮಧ್ಯೆ ಮದ್ದಾಲೀಫಾದಲ್ಲಿ ಯು.ಟಿ ಖಾದರ್ ಅವರು ರಸ್ತೆಯಲ್ಲಿ ಮಲಗಿ ರಾತ್ರಿ ಕಳೆದಿದ್ದಾರೆ.

ಇದನ್ನೂ ಓದಿ: ಕಾಲ್ತುಳಿತ ಕೇಸ್​​ನಲ್ಲಿ ಮತ್ತೊಂದು ತಲೆದಂಡ.. CM ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್​ಗೆ ಗೇಟ್​ಪಾಸ್..! 

publive-image

ಹಜ್ ಪ್ರವಾಸದಲ್ಲಿ ಎಲ್ಲರೂ ಈ ನಿಯಮ ಪಾಲಿಸಬೇಕು. ಸತ್ತ ಬಳಿಕ ಮಣ್ಣಿಗೆ ಹೋಗುವ ಮನುಷ್ಯ ತನ್ನ ಅಹಂಕಾರ ತ್ಯಜಿಸಬೇಕು ಎಂದೇ ಮಣ್ಣಿನಲ್ಲಿ ಮಲಗುವ ಕ್ರಮವನ್ನು ಇಲ್ಲಿ ವಿಧಿಸಲಾಗಿದೆ. ರಾತ್ರಿ ಇಡೀ ಸಾಮಾನ್ಯರಂತೆ ಸ್ಪೀಕರ್ ಯು.ಟಿ ಖಾದರ್ ಅವರು ಇಲ್ಲಿ ಕಾಲ ಕಳೆದಿದ್ದಾರೆ. ವಿಶ್ವಾಸ ಭರಿತ ಸಮಾಜ, ಅಭಿವೃದ್ಧಿ ಕರ್ನಾಟಕ ಹಾಗೂ ಬಲಿಷ್ಠ ಭಾರತಕ್ಕಾಗಿ ಪ್ರಾರ್ಥಿಸಿದ್ದಾರೆ.

Advertisment


">June 6, 2025

ಸಾವಿರಾರು ಕೋಟಿಯ ಒಡೆಯನಿಗೂ ಹಜ್ ಯಾತ್ರೆ ಮಾಡುವ ಯೋಗ ಇರುವುದಿಲ್ಲ. ಅಲ್ಲಾಹನನ್ನು ಸ್ವಚ್ಛ ಮನಸ್ಸಿನಿಂದ ಪ್ರೀತಿಸಿ ಇಹ ಲೋಕದಲ್ಲಿ ಮಾಡಿದ ಕರ್ಮದ ಪ್ರತಿಫಲ ದೇವರು ತನ್ನ ಮನೆಗೆ ಕರೆದುಕೊಳುತ್ತಾನೆ ಎನ್ನುವುದು ಇಸ್ಲಾಂನ ನಂಬಿಕೆ. ಹೀಗಾಗಿ ಲಕ್ಷಾಂತರ ಇಸ್ಲಾಂ ಬಾಂಧವರು ಅಲ್ಲಾನ ಪ್ರಾರ್ಥನೆ ಮಗ್ನರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment