newsfirstkannada.com

ಜನಾರ್ದನ ರೆಡ್ಡಿ ದಂಪತಿಗೆ ಬಿಗ್ ಶಾಕ್.. 75ಕ್ಕೂ ಅಧಿಕ ಆಸ್ತಿಗಳ ಜಪ್ತಿಗೆ ಕೋರ್ಟ್​ ಆದೇಶ..!

Share :

13-06-2023

  ಜನಾರ್ದನ ರೆಡ್ಡಿಗೆ ಎದುರಾಯ್ತಾ ಸಂಕಷ್ಟ?

  ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಆದೇಶ

  ಆಸ್ತಿಗಳ ಅಟ್ಯಾಚ್​ಗೆ ಕೋರ್ಟ್​ ಸೂಚನೆ

ಬೆಂಗಳೂರು: ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜನಾರ್ದನ ರೆಡ್ಡಿ ಮತ್ತು ಪತ್ನಿ ಅರುಣಾ ಲಕ್ಷ್ಮೀಗೆ ಕೋರ್ಟ್ ಬಿಗ್ ಶಾಕ್ ನೀಡಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರೆಡ್ಡಿ ದಂಪತಿ ಒಡೆತನದ ಆಸ್ತಿಗಳನ್ನು ಜಪ್ತಿ ಮಾಡುವಂತೆ ಆದೇಶ ಹೊರಡಿಸಿದೆ.

ಜನಪ್ರತಿನಿಧಿಗಳ ನ್ಯಾಯಲಯದ ನ್ಯಾ. ಜಯಂತ್​ ಕುಮಾರ್ ಆದೇಶ ಹೊರಡಿಸಿದ್ದಾರೆ. ಜನಾರ್ದನ ರೆಡ್ಡಿ 2009 ಜನವರಿ ನಂತರ ಖರೀದಿ ಮಾಡಿದ ಆಸ್ತಿಗಳ ಜಪ್ತಿಗೆ  ಸೂಚನೆ ನೀಡಲಾಗಿದೆ. ಬೆಂಗಳೂರು, ಬಳ್ಳಾರಿ ಹಾಗೂ ಆಂಧ್ರದಲ್ಲಿರುವ ಮತ್ತು ಅರುಣಾ ಲಕ್ಷ್ಮಿ ಹೆಸರಲ್ಲಿ ಇರುವ 77 ಆಸ್ತಿಗಳ ಜಪ್ತಿ ಮಾಡುವಂತೆ ಕೋರ್ಟ್​ ಸೂಚಿಸಿದೆ.

124 ಆಸ್ತಿಗಳ ಜಪ್ತಿಗೆ ಕೋರಿಕೆ

ಕೋರ್ಟ್​ 135/2013 ಕೇಸ್ ಅಂತಿಮ ಆದೇಶದವರೆಗೂ ಮುಟ್ಟುಗೋಲು ಹಾಕುವಂತೆ ಆದೇಶ ಹೊರಡಿಸಿದೆ. ಸೈಟ್, ಕಟ್ಟಡ, ಖಾಲಿ ಜಮೀನು ಸೇರಿದಂತೆ ನೂರಕ್ಕೂ ಅಧಿಕ ಆಸ್ತಿಗಳು ಬಗ್ಗೆ ಸರಿಯಾದ ದಾಖಲೆ ನೀಡಲು ಕೋರ್ಟ್​ ಕೋರಿದೆ. ರೆಡ್ಡಿ ದಂಪತಿಗೆ ಸೇರಿರುವ ಒಟ್ಟು 124 ಆಸ್ತಿಗಳ ಜಪ್ತಿಗೆ ಕೋರಿ ಕೋರ್ಟ್​ಗೆ ಅರ್ಜಿ ಸಲ್ಲಿಕೆ ಆಗಿತ್ತು. ಅದರಂತೆ ಕೋರ್ಟ್, ಭ್ರಷ್ಟಾಚಾರ ತಡೆ ಕಾಯ್ದೆ, ಕ್ರಿಮಿನಲ್ ಲಾ ತಿದ್ದುಪಡಿ ಕಾಯ್ದೆಯಡಿಯಲ್ಲಿ ಒಟ್ಟು 77 ಆಸ್ತಿಗಳನ್ನು ಜಪ್ತಿ ಮಾಡುವಂತೆ ಆದೇಶ ಹೊರಡಿಸಿದೆ.

ಇನ್ನು ಸಿಬಿಐ ಅಧಿಕಾರಿಗಳು ಪ್ರಕರಣದ ತನಿಖೆ ವೇಳೆ ಆಸ್ತಿಗಳನ್ನ ಗುರುತಿಸಿಕೊಂಡಿದ್ದರು. ಹೀಗಾಗಿ ಕೋರ್ಟ್​ನಲ್ಲಿ ಸಿಬಿಐ ಪರವಾಗಿ ವಿಶೇಷ ಅಭಿಯೋಜಕ ಗೋವಿಂದನ್ ವಾದಿಸಿದರು. 2023ರ ಜನವರಿ 12 ರಂದು ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಕರ್ನಾಟಕ ಗೃಹ ಇಲಾಖೆ ಅನುಮತಿ ನೀಡಿ ಆದೇಶ ಹೊರಡಿಸಿತ್ತು. ಹೈಕೋರ್ಟ್​​ ಚಾಟಿ ಬೀಸಿದ ಬಳಿಕ ಎಚ್ಚೆತ್ತುಕೊಂಡಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಪ್ರತಿಕ್ರಿಯೆಗೆ ಅನುಮತಿ ನೀಡಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜನಾರ್ದನ ರೆಡ್ಡಿ ದಂಪತಿಗೆ ಬಿಗ್ ಶಾಕ್.. 75ಕ್ಕೂ ಅಧಿಕ ಆಸ್ತಿಗಳ ಜಪ್ತಿಗೆ ಕೋರ್ಟ್​ ಆದೇಶ..!

https://newsfirstlive.com/wp-content/uploads/2023/06/JANARDHAN13062023.jpg

Load More