/newsfirstlive-kannada/media/post_attachments/wp-content/uploads/2024/04/SIRAJ.jpg)
ಕ್ರಿಕೆಟ್ ಪ್ರೇಮಿಗಳು ಅತಿ ಹೆಚ್ಚು ಇಷ್ಟಪಟ್ಟ IPL ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಒಂದು. 2008 ರಿಂದ ಆಡುತ್ತಿರುವ ಬೆಂಗಳೂರು ತಂಡ, ಇಲ್ಲಿಯವರೆಗೂ ಒಂದೇ ಒಂದು ಟ್ರೋಫಿ ಗೆದ್ದಿಲ್ಲವಾದರೂ ಫ್ರಾಂಚೈಸಿಗೆ ಅಭಿಮಾನಿಗಳ ಸಾಗರವೇ ಇದೆ. ಅಂತೆಯೇ ಇಂದು ನಮ್ಮ ಆರ್​​ಸಿಬಿ 250ನೇ ಪಂದ್ಯವನ್ನಾಡಲು ಮೈದಾನಕ್ಕಿಳಿಯಲಿದೆ.
ಈ ಪಂದ್ಯದ ಮೂಲಕ ಆರ್​ಸಿಬಿ 2024ರಲ್ಲಿ ಎರಡನೇ ಗೆಲುವನ್ನು ನೋಡುತ್ತಿದೆ. ಆರ್‌ಸಿಬಿ ಸೋಶಿಯಲ್ ಮೀಡಿಯಾದಲ್ಲಿ 250ನೇ ಪಂದ್ಯ ಆಡುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಇನ್ನು ಎಸ್​ಆರ್​​ಹೆಚ್​​ ವಿರುದ್ಧ 41ನೇ ಪಂದ್ಯವಾಗಿದೆ.
ಕಳೆದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಸೋಲು
ಈ ಋತುವಿನಲ್ಲಿ ಹೈದರಾಬಾದ್ ವಿರುದ್ಧ ಆಡಿದ ಕೊನೆಯ ಪಂದ್ಯದಲ್ಲಿ ಬೆಂಗಳೂರು ಸೋಲನ್ನು ಅನುಭವಿಸಿದೆ. ಏಪ್ರಿಲ್ 15 ರಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಹೈದರಾಬಾದ್ 20 ಓವರ್‌ಗಳಲ್ಲಿ 287/3 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ್ದ ಬೆಂಗಳೂರು 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿ 25 ರನ್​ಗಳಿಂದ ಸೋಲನ್ನು ಕಂಡಿತ್ತು.
ಕೆಟ್ಟ ಸ್ಥಿತಿಯಲ್ಲಿ ತಂಡ..!
ಈ ಋತುವಿನಲ್ಲಿ ಬೆಂಗಳೂರು ಇಲ್ಲಿಯವರೆಗೆ 8 ಪಂದ್ಯಗಳನ್ನು ಆಡಿದೆ. ಒಂದು ಪಂದ್ಯದಲ್ಲಿ ಗೆದ್ದು 7ರಲ್ಲಿ ಸೋತಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಸಾಧಿಸಿದ ಗೆಲುವೇ ಏಕೈಕ ಗೆಲುವು ಆಗಿದೆ. ಕಳೆದ 6 ಪಂದ್ಯಗಳಲ್ಲಿ ಸತತ ಸೋಲುಗಳನ್ನು ಕಂಡಿದೆ.
Good morning, 12th Man Army! ☀
A milestone day today - our 2️⃣5️⃣0️⃣th IPL match! We're counting on all your wishes and support to make it a memorable one. Let's do this! ❤🔥🙌#PlayBold#ನಮ್ಮRCB#IPL2024#SRHvRCBpic.twitter.com/AxCwWpY7IO— Royal Challengers Bengaluru (@RCBTweets) April 25, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us