newsfirstkannada.com

ಇಂದಿನಿಂದ 2 ದಿನ ನ್ಯೂಸ್​ಫಸ್ಟ್​​ನಿಂದ ಸೈಬರ್​ ಕ್ರೈಮ್ಸ್​ ಕಾನ್​ಕ್ಲೇವ್​​; ಏನಿದರ ವಿಶೇಷತೆ..?

Share :

Published February 28, 2024 at 6:01am

    ಸೈಬರ್​ ಕ್ರೈಂ ಕುರಿತು ಅರಿವು ನ್ಯೂಸ್​ಫಸ್ಟ್​ನಿಂದ ವಿಶೇಷ ಪ್ರಯತ್ನ

    ಸಚಿವ ಪ್ರಿಯಾಂಕ್​ ಖರ್ಗೆಯಿಂದ ಕಾರ್ಯಕ್ರಮ ಉದ್ಘಾಟನೆ

    ಐಐಎಸ್​​ಸಿ ಆವರಣದ ಆಡಿಟೋರಿಯಂನಲ್ಲಿ ಕಾರ್ಯಕ್ರಮ

ಬೆಂಗಳೂರು: ಇಂದಿನಿಂದ ಎರಡು ದಿನಗಳ ಸೈಬರ್​ ಕ್ರೈಮ್ಸ್​ ಕಾನ್​ಕ್ಲೇವ್​ ಇಂಡಿಯನ್​ ಇನ್ಸ್​ಟಿಟ್ಯೂಟ್​ನ ಜೆ.ಎನ್​.ಟಾಟಾ ಆಡಿಟೊರಿಯಂನಲ್ಲಿ ನಡೆಯಲಿದೆ. ನ್ಯೂಸ್​ಫಸ್ಟ್​ ಆಯೋಜಿಸಿರುವ ಈ ಅಂತರಾಷ್ಟ್ರಿಯ ಸಮಾವೇಶದಲ್ಲಿ ದೇಶ ವಿದೇಶಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸೈಬರ್​ ಕ್ರೈಂ ತಡೆಗಟ್ಟುವ ನಿಟ್ಟಿನಲ್ಲಿ ಇದು ಅತಿ ದೊಡ್ಡ ಚರ್ಚೆಯಾಗಿರಲಿದೆ.

ಸೈಬರ್​ ಕ್ರೈಂ ಇಡೀ ವಿಶ್ವದ ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತಿರುವ ಮಹಾಮಾರಿ. ದೇಶ ದೇಶಗಳ ಆರ್ಥಿಕ ಪರಿಸ್ಥಿತಿಯನ್ನೇ ಬುಡಮೇಲು ಮಾಡುವಷ್ಟು ದೊಡ್ಡದಾಗಿ ಈ ಪಿಡುಗು ವ್ಯಾಪಿಸುತ್ತಿದೆ. ಸೈಬರ್​ ವಂಚಕರನ್ನು ತಡೆಯುವಂತಹ ಪಯತ್ನಗಳನ್ನೂ ಸಹ ವಿಶ್ವದ ಹಲವು ರಾಷ್ಟ್ರಗಳು ಹಾಗೂ ನೂರಾರು ಸಂಸ್ಥೆಗಳು ಮಾಡುತ್ತಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನೆಗಳೂ ನಡೆಯುತ್ತಿವೆ. ಜಾಗೃತಿ ಮೂಡಿಸುವ ಕೆಲಸಗಳೂ ನಡೆಯುತ್ತಿವೆ.

ಕಾರ್ಯಕ್ರಮದಡಿಯಲ್ಲಿ ನೂರಕ್ಕೂ ಹೆಚ್ಚು ವಿಶೇಷ ವರದಿಗಳನ್ನು ಮಾಡಿದೆ. ಇದಕ್ಕಾಗಿ ಎಕ್ಸ್​ಚೇಂಚ್​ ಫಾರ್​ ಮೀಡಿಯಾ ನೀಡುವ ಗೋಲ್ಡನ್​ ಅವಾರ್ಡ್​ ಕೂಡ ಪಡೆದುಕೊಂಡಿದೆ. ಇದೀಗ ಎರಡು ದಿನಗಳ ಅಂತರಾಷ್ಟ್ರೀಯ ಸೈಬರ್​ ಕ್ರೈಮ್ಸ್​ ಕಾನ್​​ಕ್ಲೇವ್ ಆಯೋಜಿಸಿದೆ. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಬೆಂಗಳೂರಿನ ಇಂಡಿಯನ್​ ಇನ್ಸ್​ಟಿಟ್ಯೂಟ್​ ಆಫ್​ ಸೈನ್ಸ್​ ಆವರಣದಲ್ಲಿರುವ ಜೆ.ಎನ್​​.ಟಾಟಾ ಆಡಿಯೋರಿಯಂನಲ್ಲಿ ಈ ಸಮಾವೇಶ ನಡೆಯಲಿದೆ. ಕರ್ನಾಟಕ ಸರ್ಕಾರದ ಸಹಕಾರದೊಂದಿಗೆ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ಐಟಿ ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್​ ಖರ್ಗೆ ಉದ್ಘಾಟಿಸಲಿದ್ದಾರೆ. ಇದಾದ ಬಳಿಕ ವಿವಿಧ ವಿಷಯಗಳ ಬಗ್ಗೆ ದೇಶ ವಿದೇಶದ ತಜ್ಞರು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ ಹಾಗೂ ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ.

ಚರ್ಚೆಗೊಳಪಡಲಿರುವ ವಿಷಯಗಳು ಇಲ್ಲಿವೆ..

ಆರ್ಟಿಫಿಶಿಯಲ್​ ಇಂಟಲಿಜೆನ್ಸ್​
ಡೀಪ್​ ಫೇಕ್​
ಱನ್​ಸಮ್​ವೇರ್
ಬ್ಲಾಕ್​ ಚೈನ್​

ನ್ಯಾಷನಲ್​ ಸೆಕ್ಯೂರಿಟಿ ಸೇರಿದಂತೆ ಸೈಬರ್​ ಲೋಕದ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಈ ಚರ್ಚೆಯಲ್ಲಿ ಹಲವಾರು ಪ್ರತಿಷ್ಠಿತಿ ಕಂಪನಿಗಳು ಸಿಇಒಗಳು, ಚೀಫ್​ ಇನ್​ಪಾರ್​ಮೇಷನ್​ ಸೆಕ್ಯೂರಿಟಿ ಆಫಿಸರ್ಸ್​ ಹಾಗೂ ಸೈಬರ್​ ತಜ್ಞರು ಭಾಗವಹಿಸಲಿದ್ದಾರೆ. ಈ ಸಮಾವೇಶದ ಭಾಗವಾಗಿ ನ್ಯೂಸ್​ಫಸ್ಟ್​ ಈಗಾಗಲೇ ಹ್ಯಾಕಥಾನ್​ ಕೂಡ ನಡೆಸಿದ್ದು, ದೆಹಲಿ, ಮುಂಬೈ, ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧ ಇಂಜಿನಿಯರಿಂಗ್​ ಕಾಲೇಜುಗಳ ಸುಮಾರು 100 ತಂಡಗಳು ಅವರಿಗೆ ನೀಡಲಾಗಿದ್ದ ಪ್ರಾಬ್ಲಮ್​ ಸ್ಟೇಟ್​ಮೆಂಟ್​​ಗಳಿಗೆ ತಮ್ಮ ಪರಿಹಾರ ಸೂತ್ರವನ್ನು ತಿಳಿಸಿವೆ. ಇಂದಿ ಈ ಸಮಾವೇಶದ ಭಾಗವಾಗಿಯೇ ಹ್ಯಾಕಥಾನ್​​ನ ಗ್ರಾಂಡ್​ ಫಿನಾಲೆ ಕೂಡ ನಡೆಯಲಿದೆ. ಇದರಲ್ಲಿ ವಿಜೇತವಾಗುವ ತಂಡಗಳಿಗೆ 2 ಲಕ್ಷ ರೂಪಾಯಿಗಳ ಬಹುಮಾನ ಕೂಡ ನೀಡಲಾಗುವುದು.

ಅಲ್ಲದೇ ಇದೇ ಸಮಾವೇಶದ ಭಾಗವಾಗಿ ಸ್ಟಾರ್ಟಪ್​ ಪೆವಿಲಿಯನ್​ ಕೂಡ ಇರಲಿದ್ದು, ಹಲವಾರು ಸ್ಟಾರ್ಟಪ್​​ಗಳು ತಮ್ಮ ಪ್ರಾಡಕ್ಟ್​​ಗಳ ಪ್ರದರ್ಶಿಸಲಿದ್ದಾರೆ. ಸರ್ಕಾರದ ಪ್ರತಿನಿಧಿಗಳು ಕೂಡ ಇಂತಹ ಸ್ಟಾರ್ಟಪ್​​ಗಳಿಗೆ ನೀಡುವ ಸಹಾಯವನ್ನು ತಿಳಿಸಿಕೊಡಲಿದ್ದಾರೆ. ಈ ಎರಡು ದಿನಗಳ ಸಮಾವೇಶಕ್ಕೆ ಇಂಡಿಯನ್​ ಇನ್ಸ್​ಟಿಟ್ಯೂಟ್​ನ ಭಾಗವಾದ ಸೈಸೆಕ್​ ಅಂದ್ರೆ, ಸೈಬರ್​ ಸೆಕ್ಯೂರಿಟಿ ಕೌನ್ಸಿಲ್​ ಸಹಕಾರ ನೀಡಿದ್ದು, ಐಟಿ ಸೇರಿದಂತೆ ದೊಡ್ಡ ದೊಡ್ಡ ಕಂಪನಿಗಳಿಗೆ ರಿಯಲ್ ಟೈಮ್ ಉದ್ಯಮಕ್ಕೆ ಅನುಕೂಲವಾಗುವಂತೆ ಜಿನಿಮೈಂಡ್ಸ್​ ಸಂಸ್ಥೆ ಡೇಟಾ ಮ್ಯಾನೇಜ್‌ಮೆಂಟ್ ಪರಿಹಾರಗಳನ್ನು ಒದಗಿಸುತ್ತದೆ. ಒಟ್ಟಾರೆ, ನ್ಯೂಸ್​ಫಸ್ಟ್​ ವಾಹಿನಿ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಈ ಅಂತರಾಷ್ಟ್ರೀಯ ಕಾನ್​ಕ್ಲೇವ್​ನಿಂದ ಸೈಬರ್​ ಕಂಪನಿಗಳು, ತಜ್ಞರು, ಪೊಲೀಸರು ಮತ್ತು ವಿದ್ಯಾರ್ಥಿಗಳಿಗೆ ಹೊಸ ಉತ್ಸಾಹ ತುಂಬಿದೆ. ಅಗೋಚರ ಶತ್ರುವಿನ ವಿರುದ್ಧ ತಮ್ಮದೇ ಶೈಲಿಯಲ್ಲಿ ಹೋರಾಟಕ್ಕೆ ಈ ಕಾರ್ಯಕ್ರಮ ಸ್ಪೂರ್ತಿಯಾಗಿದೆ. ಈ ಕಾನ್​ಕ್ಲೇವ್​ನಿಂದ ಸೈಬರ್ ಅಪರಾಧ ಲೋಕದ ಹಾಗೂಹೋಗುಗಳ ಬಗ್ಗೆ ಜೊತೆಗೆ ಅಪರಾಧ ಪ್ರಕರಣಗಳ ಕುರಿತು ಅರಿವು ಮೂಡಿಸೋದ್ರಲ್ಲಿ ಯಾವುದೇ ಸಂಶಯವಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದಿನಿಂದ 2 ದಿನ ನ್ಯೂಸ್​ಫಸ್ಟ್​​ನಿಂದ ಸೈಬರ್​ ಕ್ರೈಮ್ಸ್​ ಕಾನ್​ಕ್ಲೇವ್​​; ಏನಿದರ ವಿಶೇಷತೆ..?

https://newsfirstlive.com/wp-content/uploads/2024/02/cyber-crime.jpg

Load More