/newsfirstlive-kannada/media/post_attachments/wp-content/uploads/2025/01/neha-gowda2.jpg)
ಮನೆಯಲ್ಲಿ ಮಗು ಇದ್ದರೆ ಆನಂದಕ್ಕೆ ಪಾರವೇ ಇರೋದಿಲ್ಲ. ಅದರಲ್ಲೂ ಮೊದಲ ಮಗು ಅಂದಗಾ ಖುಷಿ, ಸಂಭ್ರಮ ತುಸು ಹೆಚ್ಚೇ.. ಹಾಗೇ ಕಿರುತೆರೆ ಸ್ಟಾರ್ ನಟಿ ನೇಹಾ ಗೌಡ ಫ್ಯಾಮಿಲಿ ಮಗು ಚಂದದ ಕ್ಷಣಗಳ ಎಂಜಾಯ್ ಮಾಡ್ತಿದ್ದಾರೆ.
ಇದನ್ನೂ ಓದಿ:BBK11; ಧನರಾಜ್ಗೆ ಬಿಗ್ ಶಾಕ್ ಕೊಟ್ಟ ಮಂಜು, ಗೌತಮಿ.. ಫಿನಾಲೆ ಟಿಕೆಟ್ನಿಂದ ಔಟ್
ಅದರಲ್ಲೂ ದೊಡ್ಡಮ್ಮ ನಟಿ ಸೋನು ಅಂತೂ ಸೂಪರ್ ಹ್ಯಾಪಿಯಾಗಿದ್ದಾರೆ. ಲಕ್ಷ್ಮೀ ಬಾರಮ್ಮ ಗೊಂಬೆಗೆ ಅವರಷ್ಟೇ ಮುದ್ದಾಗಿರೋ ಚಂದದ ಮಗಳು ಜನಸಿದ್ದಾಳೆ. ಕಳೆದ ವರ್ಷ ಅಕ್ಟೋಬರ್ 29ರಂದು ನೇಹಾ-ಚಂದನ್ ಅಪ್ಪ-ಅಮ್ಮನಾಗಿ ಬಡ್ತಿ ಪಡೆದಿದ್ದರು.
ಇದು ನೇಹಾ ಅವರ ಮನೆಯಲ್ಲಿ ಮೊದಲ ಮಗು. ನೇಹಾ ಹಾಗೂ ಸೋನು ಗೌಡ ಅಕ್ಕ ತಂಗಿ ಅನ್ನೋದನ್ನು ವಿಶೇಷವಾಗಿ ಬಿಡಿಸಿ ಹೇಳಬೇಕಿಲ್ಲ. ಪುಟ್ಟ ತಂಗಿಗೆ, ಪುಟ್ಟ ಕಂದಮ್ಮ ಬರುತ್ತೇ ಎಂಬ ಸುದ್ದಿ ತಿಳಿದಾಗಿನಿಂದಲು ಸೋನು ದೊಡ್ಡಮ್ಮನಾಗೋ ಸಡಗರದಲ್ಲಿ ಪ್ರತಿ ಕ್ಷಣ ಕಾಯ್ತಾಯಿದ್ರು. ಮಗಳು ಹುಟ್ಟಿದ್ಮೇಲಂತೂ ಪುಟಾಣಿ ಜೊತೆ ಕಾಲ ಕಳೆಯೋದೆ ಫುಲ್ ಟೈಮ್ ಜಾಬ್ ಆಗಿಬಿಟ್ಟಿದೆ.
ಗಾಳಿಪಟ ಖ್ಯಾತಿಯ ನಟಿ ಭಾವನಾ ರಾವ್ ನೇಹಾ ಹಾಗೂ ಸೋನು ಇಬ್ಬರಿಗೂ ಬೆಸ್ಟ್ ಫ್ರೆಂಡ್. ಮಗು ನೋಡೋದಕ್ಕೆ ಮನೆಗೆ ಭೇಟಿ ನೀಡಿದ್ರು. ಆಗ ಒಂದು ಬ್ಯೂಟಿಫುಲ್ ವಿಡಿಯೋ ಮಾಡಿದ್ದಾರೆ.
View this post on Instagram
ಆ ಸುಂದರ ಕ್ಷಣಗಳನ್ನ ಸೋಷಿಯಲ್ ಮೀಡಿಯಾ ಪೇಜ್ನಲ್ಲಿ ಶೇರ್ ಮಾಡಿದ್ದಾರೆ. ಇದೇ ವಿಡಿಯೋ ನೋಡಿದ ಫ್ಯಾನ್ಸ್ ಖುಷ್ ಆಗಿದ್ದು, ಈ ಸುಂದರ ಕುಟುಂಬಕ್ಕೆ ಯಾವ ದೃಷ್ಟಿನೂ ಬಿಳದಿರಲಿ ಅಂತ ಹಾರೈಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ