BBK11: ಹೋಗಿ ಬಾ ಮಗಳೇ.. ಐಶ್ವರ್ಯಗೆ ಬಿಗ್ ಬಾಸ್ ಮನೆಯಿಂದ ವಿಶೇಷ ಗೌರವ!

author-image
Veena Gangani
Updated On
BBK11: ಹೋಗಿ ಬಾ ಮಗಳೇ.. ಐಶ್ವರ್ಯಗೆ ಬಿಗ್ ಬಾಸ್ ಮನೆಯಿಂದ ವಿಶೇಷ ಗೌರವ!
Advertisment
  • ಮನೆಯಿಂದ ಆಚೆ ಬರುತ್ತಿದ್ದಂತೆ ಐಶ್ವರ್ಯಾಗೆ ಬಿಗ್​ಬಾಸ್​ ಬೇಸರದ ವಿದಾಯ
  • ಬಿಗ್​ಬಾಸ್​ ಮನೆಯಿಂದ ಅಚ್ಚರಿಯ ರೀತಿಯಲ್ಲಿ ಆಚೆ ಬಂದ ಸ್ಪರ್ಧಿ ಐಶ್ವರ್ಯಾ
  • ಕೊನೆಯ ಬಾರಿ ಐಶ್ವರ್ಯಾ ಸಿಂಧೋಗಿಗೆ ಬಿಗ್​ಬಾಸ್​ ಹೇಳಿದ್ದೇನು ಗೊತ್ತಾ?

ಕನ್ನಡದ ಬಿಗ್​ಬಾಸ್ ಗ್ರ್ಯಾಂಡ್​ ಫಿನಾಲೆಗೆ ಹತ್ತಿರ ಬರುತ್ತಿದೆ. ಹೀಗಾಗಿ ಟಾಪ್‌ ಐದು ಸ್ಪರ್ಧಿಗಳು ಯಾರು ಎಂದು ಊಹಿಸುವುದು ಕಷ್ಟವಾಗಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ಮನೆಯಿಂದ ಅಚ್ಚರಿಯ ರೀತಿಯಲ್ಲಿ ಐಶ್ವರ್ಯಾ ಸಿಂಧೋಗಿ ಆಚೆ ಬಂದಿದ್ದಾರೆ.

ಇದನ್ನೂ ಓದಿ:BBK11: ನಮ್ರತಾ ಗೌಡ ಬಿಗ್​ಬಾಸ್​ ಮನೆಗೆ ಬರುತ್ತಿದ್ದಂತೆ ಕಣ್ಣೀರಿಟ್ಟ ಐಶ್ವರ್ಯಾ ಸಿಂಧೋಗಿ; ಕಾರಣವೇನು?

publive-image

ಇನ್ನೂ ಬಿಗ್​ಬಾಸ್​ ಮನೆಯಿಂದ ಅಳುತ್ತಲೇ ಆಚೆ ಬಂದ ಐಶ್ವರ್ಯಾ ಸಿಂಧೋಗಿಗೆ ಬಿಗ್​ಬಾಸ್​ ವಿಶೇಷ ಬೀಳ್ಕೊಡುಗೆ ಕೊಟ್ಟಿದ್ದಾರೆ. ಹೌದು, ಬಿಗ್​ಬಾಸ್​ ಪತ್ರದ ಮೂಲವೇ ಈ ವಾರ ಯಾರು ಆಚೆ ಹೋಗಲಿದ್ದಾರೆ ಎಂದು ಹೇಳಿದ್ದಾರೆ. ಪ್ರೀತಿಯ ಐಶ್ವರ್ಯಾ 13 ವಾರಗಳ ಕಾಲ ಬಿಗ್​ಬಾಸ್​ ಮನೆಯ ಸ್ಪರ್ಧಿಯಾಗಿ ಈ ಮನೆಯಲ್ಲಿ ಜೀವಿಸಿರುವುದು ಸಂತೋಷದ ವಿಷಯ. ತುಸು ಬೇಸರವಿದ್ದರೂ, ನಗು, ದುಃಖ, ಕೋಪ, ತುಂಟಾಟ ಹೀಗೆ ನಿಮ್ಮ ಎಲ್ಲ ಭಾವನೆಗಳಿಗೆ ಸಾಕ್ಷಿಯಾದ ಮನೆಯಿಂದ ಕಳಿಸಿಕೊಡುವುದು ಬೇಕಾಗಿದೆ ಅಂತ ಪ್ರತದಲ್ಲಿ ಬರೆಯಲಾಗಿತ್ತು.

publive-image

ಬಿಗ್​ಬಾಸ್​ ಮನೆಯಿಂದ ಆಚೆ ಹೋಗುತ್ತಿದ್ದ ಐಶ್ವರ್ಯಾಗೆ ಬಿಗ್​ಬಾಸ್​ ಕೊನೆಯದಾಗಿ ಈ ಮಾತನ್ನು ಹೇಳಿ ಕಳುಹಿಸಿ ಕೊಟ್ಟಿದ್ದಾರೆ. ಜೀವನದ ಪಯಣದಲ್ಲಿ ಒಂದು ದ್ವಾರ ಮುಚ್ಚಿಕೊಂಡರೇ ಮತ್ತೊಂದು ತೆರೆದುಕೊಳ್ಳುತ್ತದೆ. ಕೆಲವನ್ನು ದಾಟಿ ಬದುಕು ಕಟ್ಟಿಕೊಳ್ಳುತ್ತೇವೆ. ಮತ್ತೆ ಕೆಲವನ್ನು ದಾಟಿ ಅನುಭವ ಕಟ್ಟಿಕೊಳ್ಳುತ್ತದೆ. ಐಶ್ವರ್ಯಾ ಈ ಮನೆಯಲ್ಲಿನ ಆಟ ಇಂದಿಗೆ ಮುಗಿದಿರಬಹುದು. ಆದ್ರೆ, ಈ ದ್ವಾರ ತೆರೆದುಕೊಳ್ಳುವುದು ಆಟದಿಂದ ಹೊರ ಕಳುಹಿಸಲ್ಪಟ್ಟ ಐಶ್ವರ್ಯಾಗೆ ಅಲ್ಲ. ತನ್ನ ತವರಿಂದ ಹೊರಟು ಹೊಸ ಜೀವನದತ್ತ ಹೆಜ್ಜೆ ಇಡುತ್ತಿರುವ ಈ ಮನೆಯ ಮಗಳು ಐಶ್ವರ್ಯಾಗೆ. ಐಶ್ವರ್ಯಾ ಹೋಗಿ ಬಾ ಮಗಳೇ ಅಂತ ಹೇಳಿದ್ದಾರೆ. ಬಿಗ್​ಬಾಸ್​ ಮಾತು ಕೇಳುತ್ತಿದ್ದಂತೆ ಐಶ್ವರ್ಯಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಜೊತೆಗೆ ಬಿಗ್​ಬಾಸ್​ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment