newsfirstkannada.com

ಸೀತಾರಾಮನ್ ಬಾಯಿ ಸಿಹಿ ಮಾಡಿದ ಮುರ್ಮು; ಬಜೆಟ್​ಗೂ ಮೊದಲು ರಾಷ್ಟ್ರಪತಿ ಭವನದಲ್ಲಿ ಏನೆಲ್ಲ ಆಯ್ತು..? Photos

Share :

Published February 1, 2024 at 11:53am

    ಕೇಂದ್ರದಿಂದ 202-25ನೇ ಸಾಲಿನ ಬಜೆಟ್ ಮಂಡನೆ

    ಮಧ್ಯಂತರ ಬಜೆಟ್ ಮಂಡಿಸುತ್ತಿರುವ ಮೋದಿ ಸರ್ಕಾರ

    ಮೂರು ತಿಂಗಳ ಬಳಿಕ ಪೂರ್ಣಾವಧಿ ಬಜೆಟ್ ಮಂಡನೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್​ನಲ್ಲಿ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಬಜೆಟ್ ಮಂಡನೆಗೂ ಮೊದಲು ಸಚಿವರು ರಾಷ್ಟ್ರಪತಿ ಭವನಕ್ಕೆ ತೆರಳಿ ಬಜೆಟ್​ಗೆ ಅನುಮೋದನೆ ಪಡೆದುಕೊಂಡರು.

ರಾಷ್ಟ್ರಪತಿಗಳನ್ನು ಭೇಟಿಯಾದ ನಿರ್ಮಲಾ ಸೀತಾರಾಮನ್ ಅಂಡ್ ಟೀಂ, ರಾಷ್ಟ್ರಪತಿ ಭವನದಲ್ಲಿಯೇ ಬೆಳಗಿನ ಉಪಹಾರ ಸೇವಿಸಿದರು. ಇನ್ನು ರಾಷ್ಟ್ರಪತಿ ಭವನಕ್ಕೆ ಆಗಮಿಸುತ್ತಿದ್ದಂತೆಯೇ ಮರ್ಮು ಅವರು, ಕೇಂದ್ರ ಸಚಿವರಿಗೆ ಸಿಹಿ ತಿನ್ನಿಸಿದರು.

ಬಳಿಕ ಕೇಂದ್ರ ಸಚಿವರ ತಂಡದೊಂದಿಗೆ ರಾಷ್ಟ್ರಪತಿ ಭವನದಲ್ಲಿ ಫೋಟೋ ಸೆಷನ್ ನಡೆಯಿತು. ನಂತರ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ಶುಭಾಶಯ ಕೋರಿದ್ದಾರೆ.

2024ರಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ಮಂಡನೆ ಮಾಡುತ್ತಿದೆ. ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್ ಗುರಿಯೊಂದಿಗೆ ಭಾರತ ಮುನ್ನುಗ್ಗುತ್ತಿದೆ. ದೆಶದ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಬದಲಾವಣೆ ಆಗಿದೆ. ಮತ್ಸ್ಯ ಯೋಜನೆಯಿಂದ 55 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿ ಆಗಲಿದೆ. ಮತ್ಸ್ಯ ಸಂಪದ ಯೋಜನೆಯಿಂದ ಮೀನುಗಾರಿಕೆ ಲಾಭ ಆಗಲಿದೆ. ಎಣ್ಣೆ ಕಾಳು ಉತ್ಪಾದನೆಯಲ್ಲಿ ಆತ್ಮನಿರ್ಭರ ಯೋಜನೆ ಗುರಿ ಹೊಂದಿದೆ ಎಂದು ಕೇಂದ್ರ ಸಚಿವರು ಬಜೆಟ್ ಭಾಷಣ ವೇಳೆ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೀತಾರಾಮನ್ ಬಾಯಿ ಸಿಹಿ ಮಾಡಿದ ಮುರ್ಮು; ಬಜೆಟ್​ಗೂ ಮೊದಲು ರಾಷ್ಟ್ರಪತಿ ಭವನದಲ್ಲಿ ಏನೆಲ್ಲ ಆಯ್ತು..? Photos

https://newsfirstlive.com/wp-content/uploads/2024/02/NIRMALA.jpg

Load More