Advertisment

ಗೆಲುವಿಗಾಗಿ ದೇವರ ಮೊರೆ ಹೋದ DK ಬ್ರದರ್ಸ್; ಮನೆಯಲ್ಲಿ ವಿಶೇಷ ಪೂಜೆ

author-image
Veena Gangani
Updated On
ಗೆಲುವಿಗಾಗಿ ದೇವರ ಮೊರೆ ಹೋದ DK ಬ್ರದರ್ಸ್; ಮನೆಯಲ್ಲಿ ವಿಶೇಷ ಪೂಜೆ
Advertisment
  • 11 ವರ್ಷಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೀನಿ- ಡಿ.ಕೆ.ಸುರೇಶ್
  • ಬೆಂಗಳೂರು ಗ್ರಾಮಂತರ ಕ್ಷೇತ್ರದಲ್ಲಿ ರಂಗೇರಿದ ಚುನಾವಣಾ ಪ್ರಚಾರ
  • ಗೌಡರ ಕುಟುಂಬ ಹಾಗೂ ಡಿಕೆ ಕುಟುಂಬದ ನಡುವೆ ತಾರಕಕ್ಕೇರಿದ ಕದನ

ಲೋಕಸಭಾ ಸಮರದಲ್ಲಿ ಪ್ರತಿಷ್ಠೆಯ ಕದನವಾಗಿ ಮಾರ್ಪಟ್ಟಿರೋ ಬೆಂಗಳೂರು ಗ್ರಾಮಂತರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ರಂಗೇರಿದೆ. ಮಾರ್ಚ್‌ 28ಕ್ಕೆ ನಾಮಪತ್ರ ಸಲ್ಲಿಕೆ ಆರಂಭವಾಗ್ತಿದ್ದು ಆವತ್ತೇ ನಾಮಪತ್ರ ಸಲ್ಲಿಸಲು ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ. ಸುರೇಶ್‌ ಸಜ್ಜಾಗಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿರೋ ಡಿ.ಕೆ.ಬ್ರದರ್ಸ್‌ ಗೆಲುವಿಗಾಗಿ ಹೋಮ-ಹವನದ ಮೊರೆ ಹೋಗಿದ್ದಾರೆ.

Advertisment

publive-image

ಗೆಲುವಿಗಾಗಿ ದೇವರ ಮೊರೆ ಹೋದ ಡಿ.ಕೆ ಬ್ರದರ್ಸ್​​

ಬೆಂಗಳೂರು ಗ್ರಾಮಾಂತರ ಪ್ರತಿಷ್ಠೆಯ ಅಖಾಡ ಗೌಡರ ಕುಟುಂಬ ಹಾಗೂ ಡಿಕೆ ಕುಟುಂಬದ ನಡುವೆ ಕದನ ತಾರಕಕ್ಕೇರಿದೆ. ಹೈವೋಲ್ಟೇಜ್​ ಕ್ಷೇತ್ರವೆಂದೇ ಗುರುತಿಸಿಕೊಂಡಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕದನಕಲಿಗಳ ಕಾದಾಟ ಜೋರಾದಂತೆ ಕಾಣಿಸ್ತಿದೆ. ಇನ್ನು, ಪ್ರಚಾರದ ಅಖಾಡದಲ್ಲಿ ಅಬ್ಬರಿಸ್ತಿರೋ ಡಿ.ಕೆ ಸುರೇಶ್, ಇನ್ನೊಂದೆಡೆ ದೇವರ ಮೊರೆ ಹೋಗಿದ್ದಾರೆ. ತಮ್ಮ ಬೆಂಗಳೂರಿನ ನಿವಾಸದಲ್ಲಿ ಹೋಮ ಹವನ ಮಾಡಿಸಿ ದೇವರ ಜಪ ಮಾಡಿದ್ದಾರೆ.

ಇದನ್ನೂ ಓದಿ:ಕಂಗನಾ ಅರೆ ಬೆತ್ತಲೆ ಫೋಟೋ ಶೇರ್ ಮಾಡಿದ ಕಾಂಗ್ರೆಸ್ ನಾಯಕಿ; ಬಿಜೆಪಿ ಕೆಂಡಾಮಂಡಲ; ಆಗಿದ್ದೇನು?

publive-image

ಒಕ್ಕಲಿಗರ ಭದ್ರಕೋಟೆಯಲ್ಲಿ ನಡೀತಿರೋ ಗ್ರಾಮಾಂತರ ಕ್ಷೇತ್ರದಲ್ಲಿ ಚುನಾವಣಾ ಕಾವು ಒಂದು ಪಟ್ಟು ಜೋರಾಗಿದೆ. ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿರುವ ಡಿ.ಕೆ.ಸುರೇಶ್​​ನ ಹೇಗಾದ್ರೂ ಮಾಡಿ ಮಣಿಸಲೇ ಬೇಕು ಎಂದು ಶಪಥಗೈದಿರೋ ಬಿಜೆಪಿ- ಜೆಡಿಎಸ್​ ಮೈತ್ರಿಪಡೆ ಹೃದಯ ತಜ್ಞ ಡಾ.ಮಂಜುನಾಥ್​ರನ್ನ ಅಖಾಡಕ್ಕಿಳಿಸಿದೆ. ಹೀಗಾಗಿ, ಈ ಬಾರಿ ಗೆಲುವು ಅಂದುಕೊಂಡಷ್ಟು ಸುಲಭ ಇಲ್ಲ. ಸವಾಲಿನ ಸಾಗರವನ್ನೇ ಈಜಬೇಕಿದೆ. ಹೀಗೆ ಡಿ.ಕೆ.ಸುರೇಶ್​ ತಮ್ಮ ಸ್ಥಾನವನ್ನ ಉಳಿಸಿಕೊಳ್ಳಲು ಸರ್ವ ರೀತಿಯಲ್ಲೂ ಪ್ರಯತ್ನಿಸ್ತಿದ್ದಾರೆ.

Advertisment

ಡಿ.ಕೆ.ಸುರೇಶ್ ಉಮೇದುವಾರಿಕೆ ಸಲ್ಲಿಕೆಗೆ ಡೇಟ್​ ಫಿಕ್ಸ್​!

ಇನ್ನು, ಮಾರ್ಚ್​ 28ರಿಂದ ಮೊದಲ ಹಂತದ ಉಮೇದುವಾರಿಕೆ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಮೊದಲ ದಿನವೇ ಬೆಳಗ್ಗೆ 11 ಗಂಟೆಗೆ ರಾಮನಗರದ ಡಿಸಿ ಕಚೇರಿಯಲ್ಲಿ ಡಿ.ಕೆ.ಸುರೇಶ್​ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಸಂಸದ ಡಿ.ಕೆ.ಸುರೇಶ್​ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗ್ತಿದೆ.

publive-image

ಇನ್ನು, ಈ ಬಗ್ಗೆ ಡಿ.ಕೆ.ಸುರೇಶ್​ ಟ್ವೀಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 11 ವರ್ಷಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೀನಿ. ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಬದ್ದನಾಗಿದ್ದೇನೆ ಎಂದು ಡಿ.ಕೆ.ಸುರೇಶ್​ ಟ್ವೀಟ್ ಮಾಡಿದ್ದಾರೆ. ಈ ವೇಳೆ ಸಚಿವ ರಾಮಲಿಂಗಾ ರೆಡ್ಡಿ, ಹೆಚ್.ಸಿ.ಬಾಲಕೃಷ್ಣ, ಇಕ್ಬಾಲ್​ ಹುಸೇನ್​ ಸೇರಿದಂತೆ ಹಲವರು ಹಾಜರಿರಲಿದ್ದಾರೆ. ಈ ಕ್ಷೇತ್ರದಲ್ಲಿ ಗೆಲ್ಲೋದ್ಯಾರು ಸೋಲೋದ್ಯಾರು ಹೇಳೋದು ಕಷ್ಟಸಾಧ್ಯ. ಆದ್ರೆ, ಇಬ್ಬರು ಅಭ್ಯರ್ಥಿಗಳೂ ತಮ್ಮ ಶಕ್ತಿ ಮೀರಿ ಪ್ರಯತ್ನಿಸ್ತಿರೋದಂತೂ ಸತ್ಯ. ಈ ಪ್ರತಿಷ್ಠೆಯ ಕದನಕಣದಲ್ಲಿ ಹೋಮದ ಫಲ ಸುರೇಶ್‌ರನ್ನ ಗೆಲುವಿನ ಕುದುರೆ ಏರಿಸುತ್ತಾ ಅನ್ನೋದನ್ನ ಫಲಿತಾಂಶ ದಿನ ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment