ಶತ್ರು ಸಂಹಾರಕ್ಕೆ ಪ್ರಸಿದ್ಧಿ ಪಡೆದಿರುವ ದೇಗುಲದಲ್ಲಿ ಡಿಕೆಶಿ; ಕುತೂಹಲ ಮೂಡಿಸಿದ ನಡೆ..!

author-image
Gopal Kulkarni
Updated On
ಶತ್ರು ಸಂಹಾರಕ್ಕೆ ಪ್ರಸಿದ್ಧಿ ಪಡೆದಿರುವ ದೇಗುಲದಲ್ಲಿ ಡಿಕೆಶಿ; ಕುತೂಹಲ ಮೂಡಿಸಿದ ನಡೆ..!
Advertisment
  • ತಮಿಳುನಾಡಿನ ಪ್ರತ್ಯಂಗೀರಾ ದೇವಾಲಯಕ್ಕೆ ಡಿ.ಕೆ.ಶಿವಕುಮಾರ್ ಭೇಟಿ
  • ಶತ್ರು ಸಂಹಾರ ಯಾಗಕ್ಕೆ ಪ್ರಸಿದ್ಧಿ ಪಡೆದಿರುವ ಪ್ರತ್ಯಂಗೀರಾ ದೇವಸ್ಥಾನ
  • ಈ ದೇವಸ್ಥಾನಕ್ಕೆ ಭೇಟಿ ನೀಡಿದರೂ ಹೋಮ, ಯಾಗ ಮಾಡದ ಡಿಕೆಶಿ

ತಮಿಳುನಾಡಿನ ಪ್ರತ್ಯಂಗೀರಾ ದೇವಾಲಯಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ದೇವಲಾಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪ್ರತ್ಯಂಗೀರಾ ದೇವಾಲಯದಲ್ಲಿ ಸಾಮಾನ್ಯವಾಗಿ ಶತ್ರುಗಳ ಸಂಹಾರಕ್ಕಾಗಿ ಪೂಜೆ ಮಾಡಲಾಗುತ್ತದೆ. ಜೊತೆಗೆ ತಮ್ಮಲ್ಲಿನ ನಕಾರಾತ್ಮಕ ಶಕ್ತಿ ಹೋಗಲೆಂದು ಪೂಜೆ ಮಾಡಲಾಗುತ್ತದೆ. ತಮಿಳುನಾಡಿನ ಕುಂಭಕೋಣಂನಲ್ಲಿರುವ ಪ್ರತ್ಯಂಗೀರಾ ದೇವಾಲಯ ಹಲವು ವಿಶಿಷ್ಟ ಶಕ್ತಿಗಳಿಗೆ ಹೆಸರುವಾಸಿಯಾಗಿದೆ.

ಇದನ್ನೂ ಓದು:6 ನಕ್ಸಲರ ಶರಣಾಗತಿ.. ಕರ್ನಾಟಕದಲ್ಲಿ ಇಂದು ಐತಿಹಾಸಿಕ ಬೆಳವಣಿಗೆ; ಹೇಗಿದೆ ಅಂತಿಮ ತಯಾರಿ?

ಈ ದೇವಾಲಯಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ಪತ್ನಿ ಜೊತೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆದರೇ, ಯಾವುದೇ ಹೋಮ ಹವನ ಮಡಿಲ್ಲ. ಹೀಗಾಗಿ ಡಿ.ಕೆ.ಶಿವಕುಮಾರ್ ಪೂಜೆಯ ಉದ್ದೇಶದ ಬಗ್ಗೆ ಹಲವು ಕುತೂಹಲಗಳು ಹೆಚ್ಚಿವೆ. ಈ ಹಿಂದೆ ರಾಜ್ಯ ಕೆಲ ರಾಜಕಾಣಿಗಳು ಬೆಂಗಳೂರಿನಲ್ಲಿ ಶತ್ರು ಸಂಹಾರ ಯಾಗ ಮಾಡಿಸಿದ್ದರು. ಆ ಯಾಗ ಫಲ ನೀಡಿ, ಚುನವಣೆಯಲ್ಲಿ ಗೆಲುವು ಸಾಧಿಸಿದ್ದರು.

ಇದನ್ನೂ ಓದಿ: ಹೆಂಡತಿ, ಮಕ್ಕಳಿಗೆ ಮಚ್ಚು ಬೀಸಿ ಪೊಲೀಸ್ ಠಾಣೆಗೆ ಬಂದ ಹೋಂ ಗಾರ್ಡ್‌; ಕಾರಣವೇನು?

ಎದುರಳಾಳಿಗಳ ಶಕ್ತಿ ದುರ್ಬಲವಾಗಿ ಕೆಲವರು ಚುನಾವಣೆಗೆ ಸ್ಪರ್ಧೆ ಮಾಡಲಾಗಲಿಲ್ಲ. ಈಗ ಡಿ.ಕೆ.ಶಿವಕುಮಾರ್ ಕೂಡ ಪ್ರತ್ಯಂಗೀರಾ ದೇವಾಲಯಕ್ಕೆ ಭೇಟಿ ನೀಡಿದ್ದು ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯದ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಡಿ.ಕೆ.ಶಿವಕುಮಾರ್. ಪ್ರತ್ಯಂಗೀರಾ ದೇವಾಲಯದಲ್ಲಿ ಪೂಜೆಯಿಂದ ಕಷ್ಟಗಳು ದೂರವಾಗುತ್ತವೆ. ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ. ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗಲಿದೆ ಎಂದು ಹೇಳಲಾಗುತ್ತದೆ. ಆದ್ರೆ, ಡಿ.ಕೆ.ಶಿವಕುಮಾರ್ ದೇವಾಲಯದಲ್ಲಿ ಯಾವುದೇ ಹೋಮ, ಯಾಗ ಮಾಡಿಸುತ್ತಿಲ್ಲ. ಕೇವಲ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment