newsfirstkannada.com

ಅಯ್ಯೋಧ್ಯೆಯನ್ನ ಕಾಯ್ತಿದ್ದಾನೆ ಪವನಸುತ ಆಂಜನೇಯ; ಹೇಗಿದೆ ಗೊತ್ತಾ ಹನುಮಾನ್ ಗಡಿ? ದಶರಥ ಮಹಲ್​?

Share :

Published January 14, 2024 at 9:31pm

  ಇದೇ ಕೋಟೆಯಲ್ಲಿ ಶ್ರೀರಾಮ-ಯಮನ ನಡುವೆ ಬಿಸಿ ಬಿಸಿ ಚರ್ಚೆ

  ರಾಮನಿಗೂ ಮುಂಚೆ ಇಲ್ಲಿ ಆಂಜನೇಯನಿಗೆ ನಡೆಯುತ್ತೆ ಪೂಜೆ!

  ರಾಮ ದರ್ಶನಕ್ಕೂ ಮುನ್ನ ಮಾರುತಿ ದರ್ಶನ ಮಾಡುವುದು ಏಕೆ?

ಎಲ್ಲಿ ರಾಮನೋ ಅಲ್ಲಿ ಹನುಮನು.. ಎಲ್ಲಿ ಹನುಮನೋ ಅಲ್ಲೇ ರಾಮನು.. ರಾಮನ ಉಸಿರೇ ಹನುಮ.. ಹನುಮನ ಪ್ರಾಣವೇ ರಾಮ.. ಅಬ್ಬಾ, ಈ ಸಾಲುಗಳು ಬರೀ ಕೇಳೋದಕಷ್ಟೇ ಚೆಂದ ಅಲ್ಲ. ರಾಮ-ಹನುಮನ ಬಾಂಧವ್ಯ ಅದೆಷ್ಟು ಜೀವಕ್ಕೆ ಜೀವವಾದ್ದದ್ದು ಅನ್ನೋದನ್ನ ಸಾರಿ ಹೇಳುತ್ತೆ. ಈ ಹಾಡಿನ ಸಾಲಿನಂತೆಯೇ ಎಲ್ಲಿ ರಾಮ ಇರ್ತಾನೋ, ಅಲ್ಲಿ ಹನುಮ ಇರಲೇಬೇಕು. ಅದೇ ರೀತಿ ಶ್ರೀರಾಮನ ಬಂಟ ಆಂಜನೇಯ ಇಂದಿಗೂ ಅಯೋಧ್ಯೆಯ ಗಡಿಗೆ ಕಾವಲಾಗಿದ್ದಾನೆ. ಅಯೋಧ್ಯೆಯ ನಟ್ಟ ನಡುವಲ್ಲಿ ವಿರಾಜಮಾನನಾಗಿರುವ ಪವನ ಸುತನನ್ನ ಕಣ್ತುಂಬಿಕೊಳ್ಳುವುದೇ ಸೌಭಾಗ್ಯ.

ಅಯ್ಯೋಧ್ಯೆಯನ್ನ ಕಾಯ್ತಿದ್ದಾನೆ ಪವನಸುತ ಆಂಜನೇಯ!
ರಾಮದರ್ಶನಕ್ಕೂ ಮುನ್ನ ಹನುಮ ದರ್ಶನ ಮಾಡೋದ್ಯಾಕೆ?

ಆಂಜನೇಯ.. ಪವನ ಸುತ..ಶ್ರೀರಾಮನ ಪರಮ ಭಕ್ತ.. ಬಲಶಾಲಿ, ಪ್ರಚಂಡ ಶಕ್ತಿವಂತ ಹನುಮ ಇಂದಿಗೂ ಅಯೋಧ್ಯೆಯನ್ನ ಕಾಯ್ತಿದ್ದಾನೆ. ಅಯೋಧ್ಯೆಯ ನಟ್ಟ ನಡುವಲ್ಲೇ ವಿರಾಜಮಾನನಾಗಿರುವ ವಾಯಪುತ್ರನನ್ನ ನೋಡೋಕೆ ಅಂತಲೇ ನಿತ್ಯವೂ ಸಾವಿರಾರು ಜನ ಆಗಮಿಸ್ತಾರೆ. ಅಂದಹಾಗೇ, ಪ್ರಿಯವೀಕ್ಷಕರೇ.. ಆಂಜನೇಯ ನೆಲೆಸಿರೋ ಈ ಪುಣ್ಯಸ್ಥಳವನ್ನ ಹನುಮಾನ್ ಗಡಿ ಅಂತಲೇ ಕರೆಯಲಾಗುತ್ತೆ. ಆಂಜನೇಯ ಅಯೋಧ್ಯೆಯ ಮಧ್ಯದಲ್ಲೇ ಕೂತು ರಾಮಜನ್ಮಭೂಮಿಯ ರಕ್ಷಣೆ ಮಾಡ್ತಿದ್ದಾನೆ ಅನ್ನೋದು ರಾಮ ಭಕ್ತರ ನಂಬಿಕೆ. ಈ ಹನುಮಾನ್ ಗಡಿಯಲ್ಲಿ ಆಂಜನೇಯನ ಬೃಹತ್ ಮೂರ್ತಿಯಿದ್ದು, ಅಯೋಧ್ಯೆಗೆ ಯಾರೇ ಭಕ್ತರು ಹೋದ್ರು ರಾಮಲಲ್ಲನ ದರ್ಶನಕ್ಕೂ ಮುಂಚೆ ರಾಮಭಂಟನ ದರ್ಶನ ಮಾಡ್ಬೇಕು. ಬಳಿಕ ರಾಮನ ದರ್ಶನ ಮಾಡೋದು ವಾಡಿಕೆ. ಅಚ್ಚರಿ ಏನಂದ್ರೆ, ಇಲ್ಲಿ ರಾಮನಿಗಿಂತ ಮುಂಚೆ ಆಂಜನೇಯನಿಗೆ ಪೂಜೆ ಮಾಡಲಾಗುತ್ತೆ.

ಅಯ್ಯೋಧ್ಯೆಯಲ್ಲಿರುವ ಈ ಹನುಮಾನ್​ ಗಡಿಯ ಮಂದಿರದಲ್ಲಿ ಬರೋಬ್ಬರಿ 76 ಮೆಟ್ಟಿಲುಗಳಿವೆ. ಭಕ್ತರು ಈ ಮೆಟ್ಟಿಲುಗಳನ್ನ ಹತ್ತುವ ಮೂಲಕ ಗರ್ಭಗುಡಿಯಲ್ಲಿ ಆಂಜನೇಯನ ದರ್ಶನ ಮಾಡ್ತಾರೆ. ವಿಶೇಷ ಅಂದ್ರೆ ಗರ್ಭಗುಡಿಯಲ್ಲಿರುವ ಹನುಮ, ಮಾತೆಯ ಮಡಿಲಲ್ಲಿ ವಿರಾಜಮಾನನಾಗಿದ್ದಾನೆ. ಬೇರೆ ಕಡೆ ಎಲ್ಲ ಗರ್ಭಗುಡಿಯಲ್ಲಿ ಬೃಹತ್ ಮೂರ್ತಿಗಳಿದ್ರೆ ಇಲ್ಲಿ ಕೇವಲ 6 ಅಡಿಯ ಮೂರ್ತಿ ಮಾತ್ರವೇ ಇದೆ. ಈ ಹನುಮಾನ್​ ಗಡಿಯಲ್ಲೂ ನಿತ್ಯ ಭಜನೆ, ರಾಮಸ್ತೋತ್ರ ಪಠಣೆ ನಡೀತಾನೇ ಇರುತ್ತೆ.
ಅಯೋಧ್ಯೆಗೆ ಹನುಮ ಕಾವಲು. ಈ ಹನುಮಾನ್​ ಗಡಿಯಲ್ಲಿ ಶ್ರೀರಾಮನಿಗಿಂತ ಮುಂಚೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಲಾಗುತ್ತೆ. ಲಂಕಾ ಗೆದ್ದು ವಾಪಸಾದ ಬಳಿಕ ಶ್ರೀರಾಮ ಆಂಜನೇಯನಿಗೆ ಈ ಜಾಗದಲ್ಲಿ ನೆಲೆಸಲು ಸೂಚಿಸಿದ್ದನಂತೆ.

ಹೀಗಾಗಿ, ಆಂಜನೇಯ ಇಲ್ಲಿ ವಿರಾಜಮಾನಾರಾಗಿ ಅಯೋಧ್ಯೆಯನ್ನ ರಕ್ಷಣೆ ಮಾಡ್ತಿದ್ದಾನೆ ಅನ್ನೋದು ಭಕ್ತರ ನಂಬಿಕೆ. ಜೊತೆಗೆ ಆಂಜನೇಯನಿಗೆ ಅಮರನಾಗುವಂತೆ ರಾಮ ವರ ನೀಡಿದ್ದ ಅನ್ನೋ ಮಾತೂ ಕೂಡ ಇದೆ. ಇದೇ ಕಾರಣಕ್ಕೆ ರಾಮನಜನ್ಮಭೂಮಿಯಲ್ಲಿ ಶ್ರೀರಾಮನಿಗಿಂತ ಮೊದಲು ರಾಮ ಬಂಟ ಆಂಜನೇಯನ ದರ್ಶನ ಮಾಡಲಾಗುತ್ತೆ. ಹನುಮಾನ್ ಅಲ್ಲಿ ರಾಜನಂತೆ ವಿರಾಜಮಾನರಾಗಿದ್ದಾರೆ. ಅಲ್ಲಿ ಆಂಜನೇಯನಿಗೆ ಪೂಜೆ ಮಾಡಲಾಗುತ್ತೆ.. ಬೇಡಿಕೊಂಡರೆ ಮನೋಕಾಮನೆಗಳು ಈಡೇರುತ್ತೆ. ಅಷ್ಟೇ ಅಲ್ಲ, ಅಯೋಧ್ಯೆಯ ರಕ್ಷಣೆಯನ್ನ ಹನುಮಾನ್ ಜೀ ಮಾಡ್ತಿದ್ದಾರೆ. ಅವರ ಕೃಪೆಯಿಂದ ಕರಸೇವಕರಿಗೆ ಶಕ್ತಿ ಬಂತು.. ಅವರ ಆಶಿರ್ವಾದದಿಂದಲೇ ಈ ಪ್ರಕರಣಕ್ಕೆ ಜಯ ಸಿಕ್ತು. ಈಗ ರಾಮ ಮಂದಿರ ನಿರ್ಮಾಣವಾಗಿದೆ.

ಹೇಗಿದೆ ಗೊತ್ತಾ ಅಯೋಧ್ಯೆಯಲ್ಲಿರುವ ದಶರಥ ಮಹಲ್​?

ರಾಮ ಮಂದಿರ, ಕನಕ ಮಹಲ್​, ಹನುಮಾನ್​ ಗಡಿಯಂತೆ… ಶ್ರೀರಾಮನ ತಂದೆ ದಶರಥ ಮಹಾರಾಜನ ದಶರಥ ಮಹಲ್​ ಕೂಡ ಇಲ್ಲಿ ಅಷ್ಟೇ ಸರ್ವಶ್ರೇಷ್ಠವಾಗಿದೆ. ಅಸಲಿಗೆ ಇದು ರಾಮಜನಕ, ಚಕ್ರವರ್ತಿ ದಶರಥನ ಅರಮನೆಯಾಗಿದ್ದು, ಇಲ್ಲಿಂದಲೇ ರಾಜಾ ಪ್ರಜೆಗಳ ಕುಂದು ಕೊರತೆಗಳನ್ನ ಆಲಿಸಲಾಗ್ತಿತ್ತಂತೆ. ಜೊತೆಗೆ ಶ್ರೀರಾಮ ತನ್ನ ಬಾಲ್ಯವನ್ನ ಇದೇ ಅರಮನೆಯಲ್ಲಿ ಕಳೆದಿದ್ದ ಅನ್ನೋ ಪೌರಾಣಿಕ ಹಿನ್ನೆಲೆಯೂ ದಶರಥ ಮಹಲ್​​ಗಿದೆ.

ದಶರಥ ಮಹಲ್ ಬಳಿಕ ಇಲ್ಲಿ ಇನ್ನೊಂದು ಪ್ರಮುಖ ಪುಣ್ಯ ಸ್ಥಳ ಅಂದ್ರೆ ರತ್ನ ಸಿಂಹಾಸನ ರಾಜ ಗದ್ದುಗೆ. ವನವಾಸದಿಂದ ರಾಮ ಅಯೋಧ್ಯೆಗೆ ವಾಪಾಸದ ಬಳಿಕ ಶ್ರೀರಾಮನಿಗೆ ಈ ಜಾಗದಲ್ಲೇ ಪಟ್ಟಾಭಿಷೇಕ ಮಾಡಲಾಗಿತ್ತು. ಹೀಗಾಗಿ, ಈ ಸ್ಥಳವನ್ನ ರತ್ನ ಸಿಂಹಾಸನ ರಾಜ ಗದ್ದುಗೆ ಅಂತಲೇ ಕರೆಯಲಾಗುತ್ತೆ. ಈ ಪುಣ್ಯತಾಣದಲ್ಲಿ ಶ್ರೀರಾಮ, ಸೀತೆ ಲಕ್ಷ್ಮಣ, ಭರತ ಶತ್ರುಘ್ನರ ಮೂರ್ತಿಗಳನ್ನೂ ನಾವು ನೋಡಬಹುದು. ಈ ರತ್ನ ಸಿಂಹಾಸನದ ಪಕ್ಕದಲ್ಲೇ ಸೀತಾ ರಸೋಯಿ ಕೂಡ ಇದೆ. ಸೀತಾದೇವಿ ರಸೋಯಿ ಅಂದ್ರೆ ಸೀತಾಮಾತೆ ಅಡುಗೆ ಮಾಡುತ್ತಿದ್ದ ಮನೆ.. ತ್ರೇತಾಯುಗದ ಕಾಲದಲ್ಲಿ ಇದೇ ಸ್ಥಳದಲ್ಲಿ ಸೀತೆ ಅಡುಗೆ ಮಾಡ್ತಿದ್ರು ಅನ್ನೋದು ರಾಮಭಕ್ತರ ನಂಬಿಕೆ.

ಕೋಟಿ, ಕೋಟಿ ಭಾರತೀಯರ ಕನಸು ನನಸಾಗೋದಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಶ್ರೀರಾಮ ಮಂದಿರದ ಜೊತೆಗೆ ಲಕ್ಷ್ಮಣನ ಕೋಟೆ, ಸೀತೆಯ ಅರಮನೆ, ರಾಮನಿಗೆ ಪಟ್ಟಾಭಿಷೇಕ ಮಾಡಿದ ರಾಜ ಸಿಂಹಾಸನವನ್ನೂ ಜೀರ್ಣೋದ್ಧಾರ ಮಾಡಲಾಗ್ತಿದೆ. ರಾಮಲಲ್ಲಾನ ದರ್ಶನ ಮಾಡೋದ್ರೆ ಜೊತೆಗೆ ಈ ಪುಣ್ಯ ಸ್ಥಳಗಳನ್ನ ದರ್ಶನ ಮಾಡಿ ಮತ್ತೊಮ್ಮ ತ್ರೇತಾಯುಗದ ವೈಭವವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯ್ಯೋಧ್ಯೆಯನ್ನ ಕಾಯ್ತಿದ್ದಾನೆ ಪವನಸುತ ಆಂಜನೇಯ; ಹೇಗಿದೆ ಗೊತ್ತಾ ಹನುಮಾನ್ ಗಡಿ? ದಶರಥ ಮಹಲ್​?

https://newsfirstlive.com/wp-content/uploads/2024/01/hanuman-1.webp

Load More