Advertisment

ಪತಿಯ ಬರ್ತ್​ ಡೇಗೆ ಪತ್ನಿಯಿಂದ ರೊಮ್ಯಾಂಟಿಕ್ ವಿಶ್​.. ನಟಿ ಅದಿತಿ ಪ್ರಭುದೇವ ಕೊಟ್ಟ ಉಡುಗೊರೆ ಏನು?

author-image
Veena Gangani
Updated On
ಆ ಸ್ಪೆಷಲ್ ವ್ಯಕ್ತಿಗಾಗಿ ರಾತ್ರಿಯೆಲ್ಲಾ ಮಲಗೋದೆ ಇಲ್ವಂತೆ ನಟಿ ಅದಿತಿ ಪ್ರಭುದೇವ; ಏನ್ಮಾಡ್ತಾರೆ ಗೊತ್ತಾ?
Advertisment
  • ಹೊಸ ವರ್ಷದ ದಿನವೇ ಫ್ಯಾನ್ಸ್​ಗೆ ಸಿಹಿ ಸುದ್ದಿ ಕೊಟ್ಟಿದ್ದ ಅದಿತಿ ಪ್ರಭುದೇವ
  • ಸದಾ ಕಾಲ ಹೀಗೆ ನಗು ನಗುತ್ತಾ ಜೊತೆಗಿರಿ ಎಂದು ಹಾರೈಸಿದ ಫ್ಯಾನ್ಸ್​
  • 2022ರಲ್ಲಿ ಯಶಸ್ಸು ಚಂದ್ರಕಾಂತ್​ ಜೊತೆ ಮದುವೆಯಾಗಿದ್ದ ಕನ್ನಡದ ನಟಿ

ಸ್ಯಾಂಡಲ್‌ವುಡ್ ಖ್ಯಾತ ನಟಿ ಅದಿತಿ ಪ್ರಭುದೇವ ಪತಿ ಯಶಸ್ಸು ಚಂದ್ರಕಾಂತ್ ಪಟ್ಲಾ ಅವರು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿದ್ದ ನಟಿ ಅದಿತಿ ಪ್ರಭುದೇವ ಅವರು ಪ್ರೀತಿಯ ಪತಿಗೆ ಸಖತ್ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ್ದಾರೆ.

Advertisment

publive-image

ಇದನ್ನೂ ಓದಿ:ಯುಗಾದಿ ಹಬ್ಬಕ್ಕೆ ಖುಷಿ ಸುದ್ದಿ ಹಂಚಿಕೊಂಡ ನಟಿ ಅದಿತಿ ಪ್ರಭುದೇವ; ಮಗುವಿನ ಫೋಟೋ ರಿಲೀಸ್‌!

2022ರಲ್ಲಿ ಉದ್ಯಮಿ ಯಶಸ್ಸು ಚಂದ್ರಕಾಂತ್​ ಪಟ್ಲಾ ಅವರನ್ನು ಸ್ಯಾಂಡಲ್​ವುಡ್​ ಮುದ್ದಾದ ನಟಿ ಅದಿತಿ ಪ್ರಭುದೇವ ವಿವಾಹವಾಗಿದ್ದರು. ಹೊಸ ವರ್ಷದ ದಿನವೇ ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ಕೊಟ್ಟಿದ್ದರು. ಯುಗಾದಿ ಹಬ್ಬದ ದಿನ ಅಂದರೆ ಏಪ್ರಿಲ್ 4ರಂದು ನಟಿ ಅದಿತಿ ಪ್ರಭುದೇವ ಅವರ ಮನೆಗೆ ಹೊಸ ಅತಿಥಿ ಆಗಮನವಾಗಿತ್ತು. ಯುಗಾದಿ ಹಬ್ಬದಂದು ತಾಯಿ ಆದ ಖುಷಿಯ ಜೊತೆಗೆ ನಮ್ಮ ಮನೆ ಮಹಾಲಕ್ಷ್ಮಿ ಅಂತಾ ಮಗುವಿನ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

publive-image

ಸದ್ಯ ಪತಿ ಯಶಸ್ಸು ಚಂದ್ರಕಾಂತ್ ಪಟ್ಲಾ ಅವರು ಹುಟ್ಟು ಹಬ್ಬಕ್ಕೆ ನಟಿ ಅದಿತಿ ಪ್ರಭುದೇವ ಅವರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಸಖತ್ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ. ಐದಾರು ಫೋಟೋಗಳನ್ನು ಶೇರ್ ಮಾಡಿಕೊಂಟ ನಟಿ ಪ್ರೀತಿಯ ಯಶು, ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ನೀವೊಬ್ಬ ನಿಷ್ಕಲ್ಮಶ ಮನಸ್ಸಿನ ವ್ಯಕ್ತಿತ್ವದವರು. ಮೌನಕ್ಕೂ ಅರ್ಥವಿದೆ ಎಂದು ತಿಳಿಸಿಕೊಟ್ಟ ಪ್ರೀತಿಯ ಗೆಳೆಯ ನೀವು. ನನ್ನ ಬದುಕಿನ ಶಕ್ತಿ ನೀವು. ಆ ದೇವರು ಪ್ರಪಂಚದ ಎಲ್ಲಾ ಸುಖವನ್ನು, ನೆಮ್ಮದಿಯನ್ನು ನಿಮಗೆ ನೀಡಲಿ ಕಂದ. ಹಾಗೆಯೇ ನಾವಿಬ್ರೂ ಯಾವಾಗಲೂ ಹೀಗೆ ಒಟ್ಟಿಗೆ, ಕಷ್ಟ ಸುಖಗಳಲ್ಲಿ ಒಂದಾಗಿ, ಜೊತೆಯಾಗಿ ಬೆಳೆದು ಸಾಧನೆ, ನೆಮ್ಮದಿಯತ್ತ ಹೆಜ್ಜೆ ಹಾಕೋಣ. ನಿಮಗೆ ನೆನಪಿದೆಯಾ.. ಕಳೆದ ವರ್ಷ ಇದೇ ದಿವಸ ನೀವು ತಂದೆಯಾಗುವ ಸುದ್ದಿಯನ್ನು ನೀಡಿದೆ. ಈ ವರ್ಷ ನಾವು ಇಬ್ಬರಲ್ಲ ಮೂವರು. ಈ ವರ್ಷದ ನಿಮ್ಮ ಹುಟ್ಟುಹಬ್ಬಕ್ಕೆ ನಮ್ಮ ಮಗಳನ್ನು ನಾನು ನಿಮಗೆ ನೀಡಿರುವ ಮುದ್ದಾದ ಉಡುಗೊರೆ ಏನಂತೀರಾ ಎಂದು ಬರೆದುಕೊಂಡಿದ್ದಾರೆ.

Advertisment

ಇದೇ ಫೋಟೋಗಳನ್ನು ನೋಡಿದ ಅಭಿಮಾನಿಗಳು, ನಟಿ ಅದಿತಿ ಪ್ರಭುದೇವ ಅವರ ಪತಿಯ ಹುಟ್ಟು ಹಬ್ಬಕ್ಕೆ ಶುಭ ಕೋರುತ್ತಿದ್ದಾರೆ. ಜೊತೆಗೆ ನೀವಿಬ್ಬರು ಸದಾ ಕಾಲ ಹೀಗೆ ನಗು ನಗುತ್ತಾ ಜೊತೆಗಿರಿ ಎಂದು ಶುಭ ಹಾರೈಸಿದ್ದಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment