Advertisment

ಮಹಾನಟಿ ವಿನ್ನರ್​ ಪ್ರಿಯಾಂಕ ಆಚಾರ್​​ಗೆ ಅಭಿಮಾನಿಗಳಿಂದ ಸ್ಪೆಷಲ್ ವಿಶ್​​; ಏನದು?

author-image
Veena Gangani
Updated On
ಮಹಾನಟಿ ವಿನ್ನರ್​ ಪ್ರಿಯಾಂಕ ಆಚಾರ್​​ಗೆ ಅಭಿಮಾನಿಗಳಿಂದ ಸ್ಪೆಷಲ್ ವಿಶ್​​; ಏನದು?
Advertisment
  • ಮಹಾನಟಿ ಕಿರೀಟ ತಮ್ಮ ಮುಡಿಗೇರಿಸಿಕೊಂಡ ಪ್ರಿಯಾಂಕ ಆಚಾರ್
  • ಕಿರುತೆರೆಯಲ್ಲೇ ದೊಡ್ಡ ಮಟ್ಟದಲ್ಲಿ ಸೌಂಡ್​ ಮಾಡಿದ್ದ ಮಹಾನಟಿ ಶೋ
  • ತಮ್ಮ ಅದ್ಭುತ ನಟನೆಯ ಮೂಲಕ ವೀಕ್ಷಕರ ಮನೆ ಮಾತಾಗಿದ್ದ ಸ್ಪರ್ಧಿಗಳು

ಕನ್ನಡ ಕಿರುತೆರೆಯ 'ಮಹಾನಟಿ' ಶೋ ಕೊನೆಗೂ ತೆರೆ ಕಂಡಿದೆ. ಗ್ರ್ಯಾಂಡ್ ಫಿನಾಲೆಗೆ ಐದು ಫೈನಲಿಸ್ಟ್‌ಗಳು ವೇದಿಕೆಗೆ ತಲುಪಿದ್ದರು‌. ಗಗನಾ, ಶ್ವೇತಾ ಭಟ್, ಧನ್ಯಶ್ರೀ, ಪ್ರಿಯಾಂಕ ಆಚಾರ್​ ಹಾಗೂ ಆರಾಧನಾ ಭಟ್ ಫಿನಾಲೆ ವೇದಿಕೆಯಲ್ಲಿ ಇದ್ದರು. ಆದರೆ ಐವರಲ್ಲಿ ಪ್ರಿಯಾಂಕ ಆಚಾರ್ ಅವರಿಗೆ ಮಹಾನಟಿ ಚಿನ್ನದ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

Advertisment

publive-image

ಇದನ್ನೂ ಓದಿ:ನಟ ದರ್ಶನ್​ ಆಪ್ತ ಸ್ನೇಹಿತನ ಮಗಳು ಈಗ ಮಹಾನಟಿ ವಿನ್ನರ್​​; ಯಾರಿದು ಪ್ರಿಯಾಂಕ ಆಚಾರ್​?

ಹಂತ ಹಂತವಾಗಿ ಮಹಾನಟಿ ಶೋಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳಲ್ಲಿ ಹೊಸ ಹೊಸ ಪ್ರತಿಭೆಯನ್ನು ಅನಾವರಣಗೊಳ್ಳಿಸಿದ್ದರು. ಈ ಮೂಲಕ ಮೊದಲ ಬಾರಿಗೆ ಮಹಾನಟಿ ರಿಯಾಲಿಟಿ ಶೋನ ಸ್ಪರ್ಧಿಗಳು ಶಾರ್ಟ್ ಫಿಲ್ಮ್​ನಲ್ಲಿ ನಟಿಸಿ ಸೈ ಎಂದೆನಿಸಿಕೊಂಡಿದ್ದರು. ಇದೀಗ ಒಟ್ಟು ಫೈನಲಿಸ್ಟ್‌ಗಳಲ್ಲಿ ಪ್ರಿಯಾಂಕ ಆಚಾರ್​ ಚಿನ್ನದ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

publive-image

ಅಭಿಮಾನಿಗಳಿಂದ ಶುಭ ಹಾರೈಕೆ

ಇನ್ನು, ಪ್ರಿಯಾಂಕ ಅವರು ವಿನ್ನರ್​ ಪಟ್ಟ ಗಿಟ್ಟಿಸಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಅದರಲ್ಲೂ ಪ್ರಿಯಾಂಕ ಅವರ ಅವರ ಅದ್ಭುತ ಅಭಿನಯಕ್ಕೆ ಫ್ಯಾನ್ಸ್​ ಬೇಷ್ ಎನ್ನುತ್ತಿದ್ದಾರೆ. ಜೊತೆಗೆ ವೇದಿಕೆ ಮೇಲೆಯೇ ಪ್ರಿಯಾಂಕ ಅವರನ್ನು ನೋಡಲು ಅಭಿಮಾನಿಗಳ ಸಂಘ ಬಂದಿತ್ತು. ಅದರಲ್ಲಿ ಸಹ ಸ್ಪರ್ಧಿ ಧನ್ಯಶ್ರೀ ಅವರ ತಂದೆಯೇ ಪ್ರಿಯಾಂಕ ಅವರ ಅಭಿಮಾನಿ ಸಂಘದ ಮುಖ್ಯಸ್ಥರಾಗಿದ್ದರು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕ ಅವರ ಹೊಸ ಹೊಸ ಫ್ಯಾನ್​​ ಪೇಜ್ ಕ್ರಿಯೇಟ್ ಮಾಡಿ ಶುಭ ಹಾರೈಸುತ್ತಿದ್ದಾರೆ. ಆದಷ್ಟೂ ಬೇಗ ಬೆಳ್ಳಿತೆರೆಗೆ ಎಂಟ್ರಿ ಕೊಡಿ ಅಂತ ಹಾರೈಸಿದ್ದಾರೆ

Advertisment

publive-image

ಪ್ರಿಯಾಂಕ ಗೆದ್ದ ಹಣವೆಷ್ಟು?

ಐದು ಫೈನಲಿಸ್ಟ್‌ಗಳಲ್ಲಿ ಕೊನೆಗೆ ವೇದಿಕೆ ಮೇಲೆ ಉಳಿದಿದ್ದು ಕೇವಲ ಇಬ್ಬರು ಮಾತ್ರ. ಕೊನೆಯದಾಗಿ ನಟ ರಮೇಶ್​ ಅರವಿಂದ್ ಅವರು ಪ್ರಿಯಾಂಕ ಹೆಸರ ಕೈ ಮೇಲೆ ಎತ್ತಿ ವಿನ್ನರ್ ಹೆಸರು ಘೋಷಿಸಿದ್ದರು. ಇದಾದ ಬಳಿಕ ಪ್ರಿಯಾಂಕಗೆ 15 ಲಕ್ಷದ ಪ್ಯೂರ್ ಚಿನ್ನದ ಕಿರೀಟ ಸಿಕ್ಕಿದೆ. ಎರಡನೇ ಸ್ಥಾನ ಪಡೆದ ಧನ್ಯಶ್ರೀಗೆ 10 ಲಕ್ಷ ನಗದು ಬಹುಮಾನ ಸಿಕ್ಕಿದೆ. ಮೂರನೇ ಸ್ಥಾನ ಪಡೆದ ಚಿತ್ರದುರ್ಗದ ಗಗನ, ನಾಲ್ಕನೇ ಸ್ಥಾನ ಪಡೆದ ಆರಾಧನಾ ಭಟ್‌, ಐದನೇ ಸ್ಥಾನ ಶ್ವೇತಾ ಭಟ್‌ಗೆ ತಲಾ ಒಂದು ಲಕ್ಷ ಬಹುಮಾನ ನೀಡಲಾಯಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment