/newsfirstlive-kannada/media/post_attachments/wp-content/uploads/2025/05/UDP_SHRI_KRISHNA_SINDOORA.jpg)
ಉಡುಪಿ: ಪಹಲ್ಗಾಮ್​ನಲ್ಲಿ ದಾಳಿ ಬೆನ್ನಲ್ಲೇ ಪ್ರತೀಕಾರಕ್ಕೆ ಭಾರತ ಸರ್ವಸನ್ನದ್ಧವಾಗಿ ಪಾಕ್ ಮೇಲೆ ದಾಳಿ ಮಾಡುತ್ತಿದೆ. ಈ ಹೋರಾಟದಲ್ಲಿ ಭಾರತಕ್ಕೆ ವಿಜಯಲಕ್ಷ್ಮಿ ಒಲಿಯಲಿ ಎಂದು ಉಡುಪಿಯ ಕಡೆಗೋಲು ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ ಮಾಡಿ ಪರ್ಯಾಯ ಶ್ರೀಪುತ್ತಿಗೆ ಶ್ರೀಗಳು ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2025/05/UDP_SHRI_KRISHNA_SINDOORA_2.jpg)
ದೇಶದ ರಕ್ಷಣೆ ಹಾಗೂ ಸೈನಿಕರ ರಕ್ಷಣೆಗಾಗಿ ಉಡುಪಿಯ ಕಡೆಗೋಲು ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ ಮಾಡಿ ಪರ್ಯಾಯ ಶ್ರೀಪುತ್ತಿಗೆ ಶ್ರೀಗಳು ಪ್ರಾರ್ಥನೆ ಮಾಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸೈನಿಕರಿಗೆ ಅಭಯ ನೀಡಿದ ಉಡುಪಿಯ ಶ್ರೀಕೃಷ್ಣ ಕೈಯಲ್ಲಿ ಸುದರ್ಶನ ಚಕ್ರ ಹಿಡಿದು ದೇಶ ರಕ್ಷಣೆಯ ಸಂದೇಶ ಹೊತ್ತ ಕೃಷ್ಣದೇವರ ಅಲಂಕಾರ. ಉಡುಪಿ ಕೃಷ್ಣ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು ಚಕ್ರಪಾಣಿ ಕೃಷ್ಣ ಅಲಂಕಾರ ದುಷ್ಟ ಶಕ್ತಿಗಳ ಸಂಹಾರದ ಸಂಕೇತವಾಗಿದೆ.
/newsfirstlive-kannada/media/post_attachments/wp-content/uploads/2025/05/UDP_SHRI_KRISHNA_SINDOORA_1.jpg)
ಉಡುಪಿಯಲ್ಲಿ ಶ್ರೀಕೃಷ್ಣನ ಒಂದು ಕೈಯಲ್ಲಿ ಚಕ್ರ ಮತ್ತೊಂದು ಕೈಯಲ್ಲಿ ಸಿಂಧೂರದ ಬಟ್ಟಲು ಹಿಡಿದು ನಿಂತಿದ್ದು ಯುದ್ಧಸನ್ನದ್ಧರಾದ ಸೈನಿಕರಿಗೆ, ಅವರ ಕುಟುಂಬಗಳಿಗೆ ಈ ಮೂಲಕ ಧೈರ್ಯ ತುಂಬಿದಂತೆ ಆಗಿದೆ. ಸುದರ್ಶನ ಚಕ್ರದ ಮೂಲಕ ದುಷ್ಟ ಸಂಹಾರ ಮಾಡಿದ್ದ ಕೃಷ್ಣ. ಸಿಂಧೂರದ ಬಟ್ಟಲು, ವೀರ ವನಿತೆಯರಿಗೆ ಶುಭಹಾರೈಕೆಯ ಸಂಕೇತವಾಗಿದೆ. ವಿಜಯಲಕ್ಷ್ಮಿ ಭಾರತಕ್ಕೆ ಒಲಿಯಲಿ ಎಂದು ಶ್ರೀಕೃಷ್ಣನಿಗೆ ಪರ್ಯಾಯ ಶ್ರೀ ಪುತ್ತಿಗೆ ಶ್ರೀಗಳಿಂದ ವಿಶೇಷ ಪ್ರಾರ್ಥನೆ, ವಿಶೇಷ ಪೂಜೆ ಸಲ್ಲಿಸಲಾಗಿದೆ. ಸದ್ಯ ವಿಶೇಷ ಅಲಂಕಾರದ ಮೂಲಕ ಗಮನ ಸೆಳೆಯುತ್ತಿರುವ ಕಡೆಗೋಲು ಕೃಷ್ಣ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us