newsfirstkannada.com

ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಿ; ರಾಜ್ಯಸಭೆಯಲ್ಲಿ ಹೆಚ್‌.ಡಿ ದೇವೇಗೌಡರ ಭಾಷಣ; ಹೇಳಿದ್ದೇನು?

Share :

Published February 6, 2024 at 8:52pm

Update February 6, 2024 at 8:54pm

  ಕರ್ನಾಟಕದ ಗ್ಯಾರಂಟಿ ಮತ್ತು ಮೋದಿ ಗ್ಯಾರಂಟಿಗೂ ವ್ಯತ್ಯಾಸವಿದೆ

  ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಲು ದೇವೇಗೌಡರ ಆಗ್ರಹ

  ದೇವೇಗೌಡರಿಗೆ ನಾಳೆ ಜಂತರ್ ಮಂತರ್‌ಗೆ ಬನ್ನಿ ಎಂದ ಕಾಂಗ್ರೆಸ್

ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಯುವಾಗ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು ಹಲವು ವಿಚಾರಗಳ ಬಗ್ಗೆ ಮಾತನಾಡಿ ಗಮನ ಸೆಳೆದಿದ್ದಾರೆ. ನೇರವಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರದ ಮೇಲೆ ಕಿಡಿಕಾರಿದ ದೇವೇಗೌಡರು, ಕಾವೇರಿ ನದಿ ನೀರಿನ ವಿವಾದವನ್ನು ಪ್ರಸ್ತಾಪ ಮಾಡಿದ್ದಾರೆ. ಕರ್ನಾಟಕದಲ್ಲಿ ದುಡಿದು ತಾಯಿ ಸಾಕಲು ಹೊರಟ ಮಗ ಉದ್ಯೋಗ ಇಲ್ಲದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗೆ ಗ್ಯಾರಂಟಿ ಸ್ಕೀಮ್ ಕರ್ನಾಟಕದಲ್ಲಿ ವರ್ಕ್ ಆಗುತ್ತಿವೆ. ಸೋಕಾಲ್ಡ್ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಅನಗತ್ಯ, ಅಲ್ಪ ಅವಧಿ ಲಾಭ ಕೊಡಬಹುದು. ಕರ್ನಾಟಕದ ಗ್ಯಾರಂಟಿ ಮತ್ತು ಪ್ರಧಾನಿ ಮೋದಿ ಗ್ಯಾರಂಟಿಗೂ ವ್ಯತ್ಯಾಸವಿದೆ ಎಂದಿದ್ದಾರೆ.

ನಾಳೆ ಕಾಂಗ್ರೆಸ್ಸಿಗರು ಜಂತರ್ ಮಂತರ್‌ನಲ್ಲಿ ದೊಡ್ಡ ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮನ್ನೆಲ್ಲಾ ಪ್ರತಿಭಟನೆಗೂ ಆಹ್ವಾನಿಸಿದ್ದಾರೆ. ಯಾವುದೇ ಲಾಭ ಮಾಡಿಕೊಳ್ಳುವ ಉದ್ದೇಶ ನನಗೆ ಇಲ್ಲ. ಒಂದು ವೇಳೆ ಕರ್ನಾಟಕ ಸರ್ಕಾರಕ್ಕೆ ಲಾಭವಾಗುವುದಾದರೆ, ಸಂತೋಷ. ಅನಗತ್ಯ ಖರ್ಚುಗಳು ಯಾಕೆ? ನಾನು ಯಾವೊಬ್ಬ ಶಾಸಕರನ್ನು ನಿಗಮ ಮಂಡಳಿಗೆ ನೇಮಿಸಿರಲಿಲ್ಲ ಎಂದು ದೇವೇಗೌಡರು ಹೇಳಿದರು.

ಇದನ್ನೂ ಓದಿ: ಮೋದಿ ಸರ್ಕಾರದಿಂದ ಅನ್ಯಾಯ; ಕರ್ನಾಟಕ ಬೆನ್ನಲ್ಲೇ ರೊಚ್ಚಿಗೆದ್ದ ಕೇರಳ, ತಮಿಳುನಾಡು..!

ದೇವೇಗೌಡರ ಭಾಷಣಕ್ಕೆ ಕಾಂಗ್ರೆಸ್‌ ಪಕ್ಷದ ಸದಸ್ಯ ನಾಸೀರ್ ಹುಸೇನ್ ಆಕ್ಷೇಪ ವ್ಯಕ್ತಪಡಿಸಿದರು. ಆಗ ಒಂದು ವೇಳೆ ನನ್ನ ಮಾತಿನಲ್ಲಿ ತಪ್ಪಾಗಿದ್ದರೆ ಇನ್ನೂ ಮೂರು ದಿನದಲ್ಲಿ ಕ್ಷಮೆ ಕೇಳುವೆ ಎಂದು ಹೆಚ್‌ಡಿಡಿ ಹೇಳಿದರು. ಆಗ ರಾಜ್ಯಸಭಾ ಸಭಾಪತಿಗಳು ನಿಮ್ಮ ಸೀಟಿನಲ್ಲಿ ಕುಳಿತುಕೊಳ್ಳಿ ಎಂದು ನಾಸೀರ್ ಹುಸೇನ್‌ಗೆ ಹೇಳಿದರು. ದೇವೇಗೌಡರ ಮಾತಿಗೆ ನಾನು ಉತ್ತರ ಕೊಡುತ್ತೇನೆ ಎಂದು ನಾಸೀರ್ ಹುಸೇನ್‌ ಪ್ರತ್ಯುತ್ತರ ನೀಡಿದರು. ಕರ್ನಾಟಕ ಸರ್ಕಾರದ ಬಗ್ಗೆ ಮಾತನಾಡಿದ್ದನ್ನು ಖಂಡಿಸಿ, ದಯವಿಟ್ಟು ನಾಳೆ ಜಂತರ್ ಮಂತರ್‌ಗೆ ಬನ್ನಿ ಎಂದು ದೇವೇಗೌಡರನ್ನು ಆಹ್ವಾನ ನೀಡಿದರು.

ಇದೇ ವೇಳೆ ಕರ್ನಾಟಕದ ನೀರಿನ ಸಮಸ್ಯೆ ಬಗೆಹರಿಸಲು ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಲು ದೇವೇಗೌಡರು ಆಗ್ರಹ ಮಾಡಿದರು. ದೇವೇಗೌಡರ ಭಾಷಣಕ್ಕೆ ತಮಿಳುನಾಡಿನ ಡಿಎಂಕೆ ಸಂಸದ ಗಿರಿರಾಜನ್ ಖಂಡಿಸಿದರು. ಕಾವೇರಿ ವಿವಾದ ಈಗಾಗಲೇ ಬಗೆಹರಿದಿದೆ. ಕಾವೇರಿ ನ್ಯಾಯಾಧೀಕರಣ ತೀರ್ಪು ನೀಡಿದೆ. ಈಗ ಏನಾದರೂ ಸಮಸ್ಯೆ ಇದ್ದರೇ, ನ್ಯಾಯಾಧೀಕರಣಕ್ಕೆ ಮನವಿ ಸಲ್ಲಿಸಲಿ. ಎರಡು ರಾಜ್ಯಗಳ ಮಧ್ಯೆ ಸಮಸ್ಯೆ ಸೃಷ್ಟಿಸುವುದು ಬೇಡ ಎಂದು ಗಿರಿರಾಜನ್ ಹೇಳಿದರು. ತಮಿಳುನಾಡಿನ ಎಐಎಡಿಎಂಕೆ ಸದಸ್ಯ ತಂಬಿದೊರೈ ಅವರು ತಮಿಳುನಾಡು ಜನರು ಬೆಂಗಳೂರಿಗೆ ಕಾವೇರಿ ನೀರು ನೀಡಲು ವಿರೋಧಿಸುತ್ತಿಲ್ಲ. ಕೆಆರ್.ಎಸ್. ಡ್ಯಾಂನಿಂದ 18 ಟಿಎಂಸಿ ನೀರು ಅನ್ನು ಬೆಂಗಳೂರಿಗೆ ಬಳಸಿಕೊಳ್ಳಲು ತೊಂದರೆ ಇಲ್ಲ. ಹೊಸ ಮೇಕೆದಾಟು ಡ್ಯಾಮ್ ಅಗತ್ಯವಿಲ್ಲ ಎಂದು ಹೇಳಿದರು.

ತಮಿಳುನಾಡಿನ ಡಿಎಂಕೆ ಸದಸ್ಯರ ಮಾತಿಗೆ ಮಧ್ಯ ಪ್ರವೇಶಿಸಿದ ಗಿರಿರಾಜನ್ ಅವರು ದೇವೇಗೌಡರು ಮನವಿ ಮಾತ್ರ ಮಾಡಿದ್ದಾರೆ. ನಾನು ದೇವೇಗೌಡರ ಪ್ರತಿಯೊಂದು ಶಬ್ದವನ್ನು ಕೇಳಿದ್ದೇನೆ ಎಂದರು. ಇದೇ ವೇಳೆ ಬಿಜೆಪಿ ಸದಸ್ಯ ನಟ ಜಗ್ಗೇಶ್ ಅವರು ದೇವೇಗೌಡರ ಮಾತು ಕರ್ನಾಟಕದ ಧ್ವನಿಯಾಗಿದೆ ಎಂದು ಬೆಂಬಲ ವ್ಯಕ್ತಪಡಿಸಿದರು.

ಮಾತು ಮುಂದುವರಿಸಿದ ದೇವೇಗೌಡರು ಕಾಡು ಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಬಹಳ ಪ್ರೀತಿ, ವಿಶ್ವಾಸವನ್ನು ನನ್ನ ಮೇಲೆ ತೋರಿದ್ದಾರೆ. ಕಾಡುಗೊಲ್ಲ ಸಮುದಾಯವನ್ನು ಎಸ್‌ಟಿಗೆ ಸೇರಿಸಲು 2014ರಲ್ಲೇ ಶಿಫಾರಸ್ಸು ಆಗಿದೆ. ಇದರ ಬಗ್ಗೆ ಕೇಂದ್ರದ ಕ್ಯಾಬಿನೆಟ್ ತೀರ್ಮಾನ ತೆಗೆದುಕೊಳ್ಳಬೇಕು. 13 ಜಿಲ್ಲೆಗಳಲ್ಲಿ ಕಾಡುಗೊಲ್ಲ ಸಮುದಾಯದ ಜನರಿದ್ದಾರೆ ಎಂದು ದೇವೇಗೌಡರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಿ; ರಾಜ್ಯಸಭೆಯಲ್ಲಿ ಹೆಚ್‌.ಡಿ ದೇವೇಗೌಡರ ಭಾಷಣ; ಹೇಳಿದ್ದೇನು?

https://newsfirstlive.com/wp-content/uploads/2024/02/HD-Devegowda-1.jpg

Load More