/newsfirstlive-kannada/media/post_attachments/wp-content/uploads/2025/02/Air-Conditioner-1.jpg)
ಕಳೆದ 2 ದಿನಗಳಿಂದ ಇಡೀ ರಾಜ್ಯಾದ್ಯಂತ ಜನ ಬಿರು ಬಿಸಿಲಿಗೆ ತತ್ತರಿಸಿ ಹೋಗಿದ್ದಾರೆ. ಮನೆಯಿಂದ ಆಚೆ ಕಾಲಿಟ್ರೆ ಸಾಕು ನೆತ್ತಿ ಮೇಲೆ ಸೂರ್ಯನ ಕಣ್ಣು. ಹೀಟ್ ಸ್ಟ್ರೋಕ್, ಹೀಟ್ ವೇವ್ ಎಂದು ಜನ ರೋಸಿ ಹೋಗಿದ್ದಾರೆ. ಎಸಿ ಕೆಳಗೆ ಯಾವಾಗ ಕೂರೋದು ಅನ್ನೋ ಯೋಚನೆ ಜನರದ್ದು. ಬಿಸಿಲು ಎಂದು ಎಸಿ ಮೊರೆ ಹೋದ್ರೆ ಕಾಯಿಲೆ ವಕ್ಕರಿಸೋದು ಗ್ಯಾರಂಟಿ!
ನೆತ್ತಿ ಮೇಲೆ ಸುಡ್ತಿರೋ ಸೂರ್ಯ, ಭೂಮಿ ಕಾದ ಹೆಂಚಿನಂತೆ ಆಗಿರುತ್ತದೆ. ನಿಲ್ಲಂಗಿಲ್ಲ, ಕೂರಂಗಿಲ್ಲ ಮೈಯೆಲ್ಲೆಲ್ಲ ಬೆವರು. ತಂಪಾದ ಗಾಳಿಯೊಂದಿಗೆ, ಸದಾ ಕೂಲ್ ಕೂಲಾಗಿರುತ್ತಿದ್ದ ಸಿಟಿ ಮಂದಿ ಬೇಸಿಗೆ ಬಿಸಿಗೆ ಅಕ್ಷರಶಃ ನರಕ ದರ್ಶನ ಮಾಡಿಸ್ತಿದೆ. ಹೀಗಾಗಿ ಏನಾದ್ರು ಆಗ್ಲಿ ನೆಮ್ಮದಿಯಾಗಿ ಇರೋದಕ್ಕೆ ಒಂದ್ ಎಸಿ ಇದ್ರೆ ಸಾಕು ಅಂತಿದ್ದಾರೆ. ಎಸಿಯಿಂದಲೂ ದೇಹಕ್ಕೆ ಹಾನಿ ಅನ್ನೋ ವಿಚಾರ ರಿವೀಲ್ ಆಗಿದೆ. ಅದ್ರಲ್ಲೂ ಎಸಿ ಮೊರೆ ಹೋದ್ರೆ ಕಣ್ಣಿನ ಕಾಯಿಲೆ ಕಾಡುತ್ತಂತೆ.
ಎಸಿಯಿಂದ ಕಣ್ಣಿನ ಸಮಸ್ಯೆ
ಇನ್ನು, ಎಸಿ ನಮ್ಮ ದೇಹಕ್ಕೆ ತಂಪು ಕೊಡುತ್ತದೆ. ಆದರೆ ಕಣ್ಣಿನಲ್ಲಿರುವ ತೇವವನ್ನು ನಾಶ ಮಾಡುತ್ತದೆ. ಕಣ್ಣಿನ ತೇವ ಹೋದಾಗ ಬರಗಾಲ ಪೀಡಿತ ದೇಶದಲ್ಲಿ ಭೂಮಿ ಹೇಗೆ ಆಗಿರುತ್ತದೆ, ಹಾಗೇ ಕಣ್ಣಲ್ಲಿ ಅದೇ ತರಹ ಕಣಿಸುತ್ತದೆ. ಇದು ಕಣ್ಣಿನ ಸಮಸ್ಯೆಗೆ ಕಾರಣ ಆಗುತ್ತದೆ.
ಎಸಿ ಬಳಕೆಯಿಂದ ಕಣ್ಣು ಕೆಂಪಾಗಾಗೋದು, ಕಣ್ಣಲ್ಲಿ ಉರಿ ಉರಿ ಉಂಟಾಗುವ ಸಮಸ್ಯೆ ಕಾಡ್ತಿರೋದು ವೈದ್ಯರ ಗಮನಕ್ಕೆ ಬಂದಿದೆ. ಪ್ರತಿ ಬೇಸಿಗೆಯಲ್ಲಿ ಈ ತರಹದ ಕಾಯಿಲೆಗಳು ಬರೋದು ಸಹಜ. ಆದ್ರೆ, ಈ ಬಾರಿ ಕಳೆದ ವರ್ಷಕ್ಕಿಂತ 100 ಪಟ್ಟು ಹೆಚ್ಚಾಗಿರೋದು ಆತಂಕಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ, ಎಸಿ ಬಳಕೆಯಿಂದ ಕನ್ನಡಕ ಬಳಸೋರ ಕನ್ನಡಕದ ಪವರ್ ಚೇಂಜ್ ಆಗುವ ಸಾಧ್ಯತೆಯೂ ಕಣ್ಣಿನ ಪೊರೆಯತ್ತ ಪಿಂಪಲ್ಸ್ ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು.
ಕಣ್ಣಲ್ಲಿ ಬ್ಯಾಕ್ಟಿರೀಯಾ ಬೆಳೆದು ನಮ್ಮ ಕಣ್ಣನ್ನು ನಾಶ ಮಾಡಲು ಶುರು ಮಾಡಿ ತೊಂದರೆ ಕೊಡುತ್ತದೆ. ಎಸಿ ನೇರವಾಗಿ ದೇಹಕ್ಕೆ ಅಥವಾ ಕಣ್ಣಿಗೆ ಹೋಗುವಂತೆ ಇಟ್ಟುಕೊಂಡರೇ ತುಂಬಾ ಸಮಸ್ಯೆ. ಹೊರಗಡೆ ಬಿಸಲಿನಲ್ಲಿದ್ದಾಗ 34 ಡಿಗ್ರಿ, ಎಸಿಯಲ್ಲಿದ್ದಾಗ 20 ಡಿಗ್ರಿ. ಪದೇ ಪದೇ ಈ ಬದಲಾವಣೆಯಿಂದ ದೇಹದ ಮೇಲೆ ಪರಿಣಾಮ ಬೀರೋ ಸಾಧ್ಯತೆಯಿದೆ. ಹೀಗಾಗಿ, ನಿಮ್ಮ ಎಚ್ಚರಿಕೆಯಲ್ಲಿ ನೀವಿರೋದು ಒಳ್ಳೆಯದು.
ಇದನ್ನೂ ಓದಿ:ಹೆಂಡತಿ ಕಾಟಕ್ಕೆ ಜೀವ ಬಿಟ್ಟ ಕೇಸ್ಗೆ ಬಿಗ್ ಟ್ವಿಸ್ಟ್; ಗಂಡನ ವಿರುದ್ಧವೇ ನಿಕಿತಾ ಗಂಭೀರ ಆರೋಪ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ