ಸರ್ಕಾರಿ ನೌಕರರಿಗೆ ಬಿಗ್ ಶಾಕ್​.. ₹5 ಸಾವಿರಕ್ಕಿಂತ ಹೆಚ್ಚು ಖರೀದಿಸಿದ್ರೆ ಅನುಮತಿ ಕಡ್ಡಾಯ!

author-image
Bheemappa
Updated On
​IT ಕಂಪನಿಗಳೂ ಒಂದೇ ಅಲ್ಲ.. ಬ್ಯಾಂಕ್​​ನಲ್ಲೂ ಕೆಲಸ ಸಿಗ್ತಿಲ್ಲ.. ಉದ್ಯೋಗಕ್ಕಾಗಿ ಕಾಯ್ತಿರೋರಿಗೆ ಶಾಕ್..!
Advertisment
  • ಹೆಂಡತಿಯ ಸೀರೆಗಳ ಖರೀದಿಗೂ ಮುಖ್ಯಸ್ಥರನ್ನು ಕೇಳಬೇಕಾ?
  • ಸರ್ಕಾರ ಹೊರಡಿಸಿದ ಆದೇಶಕ್ಕೆ ಸರ್ಕಾರಿ ನೌಕರರು ವಿರೋಧ
  • ಉದ್ಯೋಗಿಗಳ ಖರ್ಚಿನ ಮಿತಿ 1 ಲಕ್ಷ ರೂಪಾಯಿಗೆ ಏರಿಸಬೇಕು

ವಿಚಿತ್ರ ಬೆಳವಣಿಗೆಯೊಂದರಲ್ಲಿ ಉತ್ತರಾಖಂಡ ಸರ್ಕಾರವು ತನ್ನ ನೌಕರರು 5,000 ರೂಪಾಯಿಗಿಂತ ಹೆಚ್ಚಿನ ಖರ್ಚು ಮಾಡಿದರೆ, ಅದಕ್ಕೆ ಮೇಲಾಧಿಕಾರಿಯಿಂದ ಅನುಮತಿ ಪಡೆಯಬೇಕು ಎಂದು ಆದೇಶ ಹೊರಡಿಸಿದೆ. ಇದರರ್ಥ ಪೋನ್ ಅಥವಾ ಸೀರೆ ಸೇರಿದಂತೆ ಯಾವುದೇ ಖರೀದಿಗೆ ಉದ್ಯೋಗಿ ತಮ್ಮ ಮೇಲಾಧಿಕಾರಿಯಿಂದ ಅನುಮತಿ ಪಡೆಯಬೇಕು.

ಯಾವುದೇ ಸರ್ಕಾರಿ ನೌಕರನು ತನ್ನ 1 ತಿಂಗಳ ವೇತನ ಅಥವಾ 5,000 ರೂಪಾಯಿಗಳನ್ನು ಮೀರಿದ ಮೌಲ್ಯದ ಯಾವುದೇ ಚರ ಆಸ್ತಿಯ ಮಾರಾಟ ಅಥವಾ ಖರೀದಿ ಅಥವಾ ಇನ್ಯಾವುದೇ ರೀತಿಯ ವ್ಯವಹಾರವನ್ನು ಮಾಡಿದರೇ, ಅಂತಹ ವ್ಯವಹಾರವನ್ನು ತಕ್ಷಣವೇ ಸೂಕ್ತ ಪ್ರಾಧಿಕಾರಕ್ಕೆ ವರದಿ ಮಾಡಬೇಕು ಎಂದು ಜುಲೈ 14 ರಂದು ಹೊರಡಿಸಿದ ಸರ್ಕಾರಿ ಆದೇಶದಲ್ಲಿ ಹೇಳಿದ್ದಾರೆ. ಉದ್ಯೋಗಿಗಳು ತಮ್ಮ ಇಲಾಖೆಯ ಮುಖ್ಯಸ್ಥರು ಇಲ್ಲವೇ ಸೂಕ್ತ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

publive-image

ಸರ್ಕಾರದ ಆದೇಶಕ್ಕೆ ವಿರೋಧ

ಸರ್ಕಾರದ ಈ ಆದೇಶಕ್ಕೆ ಉತ್ತರಾಖಂಡ್ ಎಸ್‌.ಸಿ, ಎಸ್.ಟಿ. ಉದ್ಯೋಗಿಗಳ ಫೆಡರೇಷನ್ ತೀವ್ರವಾಗಿ ವಿರೋಧಿಸಿದೆ. ಇದೊಂದು ಹಾಸ್ಯಾಸ್ಪದ ಆದೇಶ. ಈ ಆದೇಶವನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಕುಟುಂಬದ ಸದಸ್ಯರ ಸಾಮಾನ್ಯ ಖರೀದಿಗೂ ಇಲಾಖಾ ಮುಖ್ಯಸ್ಥರು ಮತ್ತು ಸೂಕ್ತ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕೇ ಎಂದು ಪ್ರಶ್ನಿಸಿದ್ದಾರೆ.

ಹಣದುಬ್ಬರದ ಈ ಯುಗದಲ್ಲಿ 10 ಟೈಪ್ ತೆರಿಗೆಗಳನ್ನು ಕಟ್ಟಬೇಕಾಗಿದೆ. ನಿಮ್ಮ ಹೆಂಡತಿ ಮತ್ತು ಮಕ್ಕಳಿಗೆ ಏನನ್ನಾದರೂ ಕೊಳ್ಳಲು ಹೋದರೇ, 5 ಸಾವಿರ ರೂಪಾಯಿಗಿಂತ ಹೆಚ್ಚಾಗುತ್ತೆ ಎಂದು ಎಸ್‌.ಸಿ, ಎಸ್‌ಟಿ ಉದ್ಯೋಗಿಗಳ ಫೆಡರೇಷನ್‌ ಅಧ್ಯಕ್ಷ ಕರಮ್ ರಾಮ್ ಹೇಳಿದ್ದಾರೆ. ನೀವು ನಿಮ್ಮ ಹೆಂಡತಿಗೆ ಸೀರೆ ಖರೀದಿಸಲು ನಿಮ್ಮ ಇಲಾಖಾ ಮುಖ್ಯಸ್ಥರಿಂದ ಅನುಮತಿ ಪಡೆಯಬೇಕೇ?. ನಿಮ್ಮ ಮಕ್ಕಳಿಗೆ ಬಟ್ಟೆ ಖರೀದಿಸಲು ಕೂಡ ನಿಮ್ಮ ಇಲಾಖಾ ಮುಖ್ಯಸ್ಥರಿಂದ ಅನುಮತಿ ಪಡೆಯಬೇಕೇ? ಎಂದು ಕರಮ್ ರಾಮ್ ಪ್ರಶ್ನಿಸಿದ್ದಾರೆ. ಸರ್ಕಾರಿ ಉದ್ಯೋಗಿಗಳ ಖರ್ಚಿನ ಮಿತಿಯನ್ನು 1 ಲಕ್ಷ ರೂಪಾಯಿಗೆ ಏರಿಸಬೇಕು ಎಂದು ಕರಮ್ ರಾಮ್ ಹೇಳಿದ್ದಾರೆ.

ಇದನ್ನೂ ಓದಿ: ಪ್ರಿಯಕರನ ಜೀವ ತೆಗೆದಿದ್ದಕ್ಕೆ ಸಿಟ್ಟಿಗೆದ್ದ ನಾಗಿಣಿ.. ಮನೆಗೆ ನುಗ್ಗಿ ಸೇಡು ತೀರಿಸಿಕೊಂಡ ಹೆಣ್ಣು ಹಾವು!

publive-image

ಬರೀ 5 ಸಾವಿರ ಖರ್ಚಿಗೂ ಇಲಾಖಾ ಮುಖ್ಯಸ್ಥರ ಅನುಮತಿ ಬೇಕಾ?

ಬೇರೆ ಉದ್ಯೋಗಿಗಳು ಕೂಡ 5 ಸಾವಿರ ರೂಪಾಯಿ ಖರ್ಚಿಗೆ ಅನುಮತಿ ಪಡೆಯಬೇಕು ಎಂಬ ಆದೇಶಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ದೊಡ್ಡ ದೊಡ್ಡ ಮೊತ್ತ ನೀಡಿ ಖರೀದಿಸುವ ಆಸ್ತಿ, ವಾಹನ ಖರೀದಿಗೆ ಮಾತ್ರವೇ ಅನುಮತಿ ಪಡೆಯಬೇಕು ಎಂದು ಹೇಳಿದರೇ, ಓಕೆ. ಬರೀ 5 ಸಾವಿರ ಖರ್ಚಿಗೂ ಇಲಾಖಾ ಮುಖ್ಯಸ್ಥರ ಅನುಮತಿ ಪಡೆಯಬೇಕು ಎಂದು ಆದೇಶ ಹೊರಡಿಸಿರುವುದು ಸರಿಯಲ್ಲ ಎಂದು ಸರ್ಕಾರಿ ಉದ್ಯೋಗಿಗಳು ಹೇಳಿದ್ದಾರೆ.

ಇನ್ನೂ ಸರ್ಕಾರಿ ನೌಕರರು ಉದ್ಯೋಗಕ್ಕೆ ಸೇರುವಾಗ ತಮ್ಮ ಎಲ್ಲ ಸ್ಥಿರ ಆಸ್ತಿಗಳನ್ನು ಘೋಷಿಸಿಕೊಳ್ಳಬೇಕು, ನಂತರ ಪ್ರತಿ 5 ವರ್ಷಕ್ಕೊಮ್ಮೆ ಆಸ್ತಿ ವಿವರ ಘೋಷಿಸಬೇಕು. ಜೊತೆಗೆ ತಮ್ಮ ಬಾಳ ಸಂಗಾತಿ ಹಾಗೂ ಕುಟುಂಬ ಸದಸ್ಯರ ಆಸ್ತಿ ವಿವರಗಳನ್ನು ಘೋಷಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ಇದಕ್ಕೆ ಸರ್ಕಾರಿ ವಿರೋಧ ಬರಲಾರದು. ಆದರೇ, 5 ಸಾವಿರಕ್ಕಿಂತ ಹೆಚ್ಚಿನ ಖರೀದಿಗೆ ಇಲಾಖಾ ಮುಖ್ಯಸ್ಥರ ಅನುಮತಿ ಪಡೆಯಬೇಕು ಎಂಬ ಆದೇಶಕ್ಕೆ ತೀವ್ರ ವಿರೋಧ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment