newsfirstkannada.com

×

ಸ್ಪರ್ಮ್​​ ಮತ್ತು ಎಗ್​ ದಾನ ಮಾಡೋರಿಗೆ ಹೈಕೋರ್ಟ್​ ಬಿಗ್​ ಶಾಕ್​​.. ಪೋಷಕರು ಓದಲೇಬೇಕಾದ ಸ್ಟೋರಿ

Share :

Published August 14, 2024 at 6:07am

    ಅಂಡಾಣು ಹಾಗೂ ವೀರ್ಯ ದಾನ ಮಾಡಿದವರಿಗಿಲ್ಲ ಮಕ್ಕಳ ಮೇಲೆ ಹಕ್ಕು

    ಬಾಂಬೆ ಹೈಕೋರ್ಟ್​ನಿಂದ ಹೊರಬಿದ್ದ ಮಹತ್ವದ ತೀರ್ಪುನಲ್ಲಿ ಏನಿದೆ?

    ಜೈವಿಕ ಪೋಷಕರು ಎಂದು ಹಕ್ಕು ಸಾಧಿಸುವ ಯಾವ ಅವಕಾಶವು ಇಲ್ಲ

ಮುಂಬೈ: ಪುರುಷರು ನೀಡುವ ವೀರ್ಯ ದಾನ ಹಾಗೂ ಮಹಿಳೆಯರು ನೀಡುವ ಅಂಡಾಣು ದಾನಿಗಳಿಗೆ ಒಂದು ಶಾಕ್ ಕಾದಿದೆ. ವೀರ್ಯ ದಾನ ಹಾಗೂ ಅಂಡಾಣು ದಾನ ಮಾಡಿದವರಿಂದ ಜನಿಸಿದ ಮಕ್ಕಳ ಮೇಲೆ ಕಾನೂನು ಬದ್ಧ ಅಧಿಕಾರವನ್ನು ಹೊಂದಿರುವುದಿಲ್ಲ ಎಂದು ಸ್ಪಷ್ಟವಾಗಿ ಹೈಕೋರ್ಟ್​​ ಹೇಳಿದೆ.

42 ವರ್ಷದ ಮಹಿಳೆಯೊಬ್ಬರು ತಮ್ಮ ಅಂಡಾಣು ದಾನದ ಮೂಲಕ ಹುಟ್ಟಿದ ಅವಳಿ ಮಕ್ಕಳನ್ನು ಭೇಟಿಯಾಗುವ ಹಕ್ಕು ನೀಡಬೇಕು ಎಂದು ಮನವಿ ಸಲ್ಲಿಸಿ ಕೋರ್ಟ್ ಮೊರೆ ಹೋಗಿದ್ದಳು. ಮಹಿಳೆಯ ಅರ್ಜಿಯನ್ನು ವಿಚಾರಣೆ ಮಾಡಿದ ಬಾಂಬೆ ಹೈಕೋರ್ಟ್​, ಮಹಿಳೆಯರ ಅಂಡಾಣು ದಾನದಿಂದ ಹಾಗೂ ಪುರುಷರ ವೀರ್ಯ ದಾನದಿಂದ ಹುಟ್ಟಿದ ಮಕ್ಕಳ ಮೇಲೆ ದಾನ ಮಾಡಿದವರ ಹಕ್ಕು ಇರುವುದಿಲ್ಲ. ಅವರು ಮಕ್ಕಳ ಜೈವಿಕ ಪೋಷಕರು ಅನಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಇದನ್ನೂ ಓದಿ: ಕೌನ್​ ಬನೇಗಾ ಕರೋಡಪತಿ.. ₹25 ಲಕ್ಷದ ಮಹಾಭಾರತದ ಪ್ರಶ್ನೆಗೆ ಉತ್ತರಿಸಲಾಗದ ಬೆಂಗಳೂರಿಗ; ಏನದು?

42 ವರ್ಷದ ಮಹಿಳೆ ತನ್ನ ಅರ್ಜಿಯಲ್ಲಿ ತನ್ನ ಬಾಡಿಗೆ ತಾಯ್ತತನದಿಂದ ಮಗುವನ್ನು ಪಡೆದು ದೂರ ಆಗಿರುವ ಪುರಷ ನನ್ನ ಮಗಳ ಜೊತೆಗೆ ನನ್ನ ತಂಗಿಯೊಂದಿಗೆ ಜೀವನ ನಡೆಸುತ್ತಿದ್ದಾನೆ. ಆ ಮಗು ಹುಟ್ಟಲು ನಾನು ನನ್ನ ಅಂಡಾಣು ದಾನವನ್ನು ಮಾಡಿದ್ದೇನೆ. ಹೀಗಾಗಿ ನನಗೆ ಮಗುವನ್ನು ಭೇಟಿ ಮಾಡುವ ಅವಕಾಶ ನೀಡಬೇಕು ಎಂದು ಕೋರ್ಟ್ ಮೊರೆ ಹೋಗಿದ್ದಳು.

ಇದನ್ನೂ ಓದಿ: ಮಧ್ಯರಾತ್ರಿ ಪದೇ ಪದೇ ನೀರು ಕುಡಿಯಬೇಕು ಅನಿಸ್ತಿದ್ಯಾ? ನೀವು ಓದಲೇಬೇಕಾದ ಸ್ಟೋರಿ!

ಮಹಿಳೆಯ ಅರ್ಜಿಯನ್ನು ವಿಚಾರಣೆ ಮಾಡಿದ ನ್ಯಾಯಮೂರ್ತಿ ಮಿಲಿಂದ್ ಎನ್ ಜಾಧವ್ ಅವರ ಏಕಸದಸ್ಯ ಪೀಠ ಮಹಿಳೆ ಅರ್ಜಿಯನ್ನು ವಜಾ ಮಾಡಿದೆ. ಮಹಿಳೆ ಹಾಗೂ ಆಕೆಯನ್ನು ಬಾಡಿಗೆ ತಾಯ್ತತನ ಪಡೆದ ಆಕೆಯಿಂದ ದೂರವಾಗಿದ್ದ ಪತಿ ಐದು ವರ್ಷದ ಮಗುವಿನ ಮೇಲೆ ತನಗೆ ಜೈವಿಕ ತಾಯಿಯ ಹಕ್ಕು ಇದೆ. ಅವಳಿ ಮಕ್ಕಳಲ್ಲಿ ಒಂದು ಮಗವನ್ನು ಪಡೆಯಲು ನನಗೆ ಅಧಿಕಾರವಿದೆ ಎಂದು ವಾದ ಹೂಡಿದ್ದರು.

ಇದನ್ನು ಆಲಿಸಿದ ಏಕಸದಸ್ಯ ಪೀಠ, ಆ ಮಕ್ಕಳನ್ನು ನೀವು ಬಾಡಿಗೆ ತಾಯ್ತತನದ ಕಾಯ್ದೆ ಅನ್ವಯ ಪಡಿದಿರುತ್ತೀರಿ. ಅಬ್ಬಬ್ಬಾ ಅಂದ್ರೆ ಅವು ನಿಮ್ಮ ಆನುವಂಶಿಕ ಮಕ್ಕಳು ಅನಿಸಿಕೊಳ್ಳಬಹುದೇ ಹೊರತು ಅದಾರಾಚೆ ಯಾವ ಹಕ್ಕು ನಿಮಗಿಲ್ಲ. ಅಂಡಾಣು ದಾನದಿಂದ ಹಾಗೂ ವಿರ್ಯಾಣು ದಾನದಿಂದ ಮಕ್ಕಳ ಮೇಲೆ ಯಾವ ಕಾನೂನು ಬದ್ಧ ಹಕ್ಕುಗಳು ದಾನಿಗಳಿಗೆ ಇರುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಪರ್ಮ್​​ ಮತ್ತು ಎಗ್​ ದಾನ ಮಾಡೋರಿಗೆ ಹೈಕೋರ್ಟ್​ ಬಿಗ್​ ಶಾಕ್​​.. ಪೋಷಕರು ಓದಲೇಬೇಕಾದ ಸ್ಟೋರಿ

https://newsfirstlive.com/wp-content/uploads/2024/08/SPERM-AND-EGG-DONOR-ISSUE-IN-COURT.jpg

Load More