/newsfirstlive-kannada/media/post_attachments/wp-content/uploads/2025/07/SPICE_JET_MUMBAI.jpg)
ಏರ್​ ಇಂಡಿಯಾ ಪತನದ ಬಳಿಕ ಕೆಲ ಪ್ಲೇನ್​ಗಳಲ್ಲಿ ಇಂಜಿನ್ ಸಮಸ್ಯೆ ಇರುವುದು ಕಂಡು ಬಂದಿದೆ. ಏರ್​ ಇಂಡಿಯಾ ಪತನದ ನಂತರ ಭಾರತ ಸರ್ಕಾರ ನಿರ್ದೇಶನ ನೀಡಿದ ಬಳಿಕ ಪರಿಶೀಲನೆ ಮಾಡಿದಾಗ ವಿಮಾನಗಳಲ್ಲಿ ಟೆಕ್ನಿಕಲ್ ಸಮಸ್ಯೆಗಳು ಕಂಡು ಬಂದಿವೆ. ಪ್ರಯಾಣಿಕರು ಸಹ ವಿಮಾನದಲ್ಲಿ ಪ್ರಯಾಣಿಸಲು ಆಲೋಚನೆ ಮಾಡುವಂತೆ ಆಗಿದೆ. ಇದರ ಬೆನ್ನಲ್ಲೇ ಸ್ಪೈಸ್​​ ಜೆಟ್ (SpiceJet Flight)​ ಚೋರ್ ಹೈ.. ಸ್ಪೈಸ್​​​ ಜೆಟ್​ ಚೋರ್ ಹೈ ಎಂದು ಪ್ರಯಾಣಿಕರು ಧರಣಿ ನಡೆಸಿ ಘೋಷಣೆ ಕೂಗಿದ್ದಾರೆ.
ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಸ್ಪೈಸ್​​ ಜೆಟ್​ ಎಸ್​​ಜಿ-59 ವಿಮಾನವೂ ಜುಲೈ 13 ಅಂದರೆ ಭಾನುವಾರ 1:50 AM​ಗೆ ತೆರಳಬೇಕಿತ್ತು. ಇದರಲ್ಲಿ ಒಟ್ಟು 170 ಪ್ರಯಾಣಿಕರು ದುಬೈಗೆ ಪ್ರಯಾಣಿಸಬೇಕಿತ್ತು. ಆದರೆ 10 ಗಂಟೆಗೂ ಅಧಿಕ ಸಮಯ ಕಳೆದರೂ ವಿಮಾನ, ಮುಂಬೈ ಏರ್​ಪೋರ್ಟ್​​ನಲ್ಲೇ ಉಳಿದುಕೊಂಡಿತ್ತು. ಇದರಿಂದ 170 ಪ್ರಯಾಣಿಕರು ಕಾದು ಕಾದು ಕಂಗಾಲಾಗಿ ಹೋಗಿದ್ದರು.
ಸ್ಪೈಸ್​ ಜೆಟ್​ ಸಂಸ್ಥೆ ತಡ ಯಾಕೆ ಎಂಬುದರ ಬಗ್ಗೆ ಯಾವುದನ್ನೂ ಪ್ರಯಾಣಿಕರಿಗೆ ಅಪ್​ಡೇಟ್​ ನೀಡಿರಲಿಲ್ಲ. ಇದರ ಜೊತೆಗೆ ಪ್ರಯಾಣಿಕರಿಗೆ ಸರಿಯಾದ ಆಹಾರ, ನೀರು ಕೂಡ ಸ್ಪೈಸ್​​ ಜೆಟ್​ ಸಂಸ್ಥೆ ಪೂರೈಕೆ ಮಾಡಿರಲಿಲ್ಲ. ಪ್ರಯಾಣಿಕರು ಏನಾದರೂ ಕೇಳಲು ಹೋದರೆ ಸಂಸ್ಥೆಯ ಸಿಬ್ಬಂದಿ, ಅಧಿಕಾರಿಗಳು 5 ನಿಮಿಷ, 10 ನಿಮಿಷದಲ್ಲಿ ಎಲ್ಲ ಸಿದ್ಧವಾಗುತ್ತೆ ಎಂದು ಹೇಳುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಹೊಸ ಸಿನಿಮಾ ಶೂಟಿಂಗ್​​.. ಕಾರು ಸ್ಟಂಟ್ ಮಾಡುವಾಗ ಉಸಿರು ಚೆಲ್ಲಿದ ಸಾಹಸ ಕಲಾವಿದ ರಾಜು
ದುಬೈಗೆ ತೆರಳಬೇಕಿದ್ದ ಸ್ಪೈಸ್​ ಜೆಟ್​ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಿದೆ ಎಂದು ಕೆಲ ಗಂಟೆಗಳ ನಂತರ ಪ್ರಯಾಣಿಕರಿಗೆ ತಿಳಿಸಲಾಗಿದೆ. ಇದರಿಂದ ಬೇಸರಗೊಂಡ ಪ್ರಯಾಣಿಕರು ವಿಮಾನ ನಿಲ್ದಾಣದ ಟರ್ಮಿನಲ್​ ಒಳಗೆ ಧರಣಿ ಕುಳಿತು ಸ್ಪೈಸ್​ ಜೆಟ್​ ಸಂಸ್ಥೆ ವಿರುದ್ಧ ಘೋಷಣೆ ಕೂಗಿದ್ದಾರೆ. ಸ್ಪೈಸ್​​​ ಜೆಟ್​ ಚೋರ್ ಹೈ.. ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಮಾನಕ್ಕೆ ಏನಾಗಿದೆ ಎಂದು ಏನನ್ನು ನಮಗೆ ತಿಳಿಸಿಲ್ಲ. 10 ಗಂಟೆಗೂ ಅಧಿಕ ಸಮಯದಿಂದ ನಿಲ್ದಾಣದ ಒಳಗೆ ಕಾಯುತ್ತಿದ್ದರು ಪ್ರಯಾಣಿಕರಿಗೆ ಆಹಾರ ಹಾಗೂ ನೀರು ಕೂಡ ಸಂಸ್ಥೆ ನೀಡಿಲ್ಲ. ಬದಲಿ ವಿಮಾನದ ವ್ಯವಸ್ಥೆ ಕೂಡ ಮಾಡಲಿಲ್ಲ. ಅರ್ಧದಿನ ಇಲ್ಲೇ ಕಳೆದಂತೆ ಆಗಿದೆ. ಮೂಲಭೂತ ಸೌಕರ್ಯ ಒದಗಿಸುವಲ್ಲಿ, ಸರಿಯಾದ ಕುಮುನಿಕೇಶನ್ ನೀಡುವಲ್ಲಿ ಸ್ಪೈಸ್​ ಜೆಟ್​ ವಿಫಲವಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ. ನಂತರ ವಿಮಾನದ ತಾಂತ್ರಿಕ ಸಮಸ್ಯೆ ಸರಿಪಡಿಸಿ ಮಧ್ಯಾಹ್ನದ ಬಳಿಕ ಎಲ್ಲರನ್ನೂ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ