newsfirstkannada.com

ವಿಶ್ವಕಪ್​ ಟೂರ್ನಿಗೆ ಟೀಮ್​ ಇಂಡಿಯಾ ಸ್ಪೆಷಲ್ ಸೂತ್ರ.. ಬೌಲಿಂಗ್​, ಬ್ಯಾಟಿಂಗ್​ ಎರಡಕ್ಕೂ ಇವರು ಜೈ​

Share :

Published January 17, 2024 at 9:32am

Update January 17, 2024 at 9:33am

    ಟೀಮ್​ ಇಂಡಿಯಾದಲ್ಲಿ ವಿಶ್ವದ ಬೆಸ್ಟ್​ ಸ್ಪಿನ್​ ಅಟ್ಯಾಕ್​

    ಪ್ಲೇಯಿಂಗ್​ ಕಂಡಿಷನ್ಸ್​ ಕೂಡ ಭಾರತಕ್ಕೆ ನೆರವು

    ವಿಶ್ವಕಪ್​ ಟೂರ್ನಿಗೆ ಭಾರತ ಭರ್ಜರಿ ತಯಾರಿ

ಅಪ್ಘನ್​ ವಿರುದ್ಧದ ಸರಣಿಯ ಜೊತೆ ಜೊತೆಗೆ ಟಿ20 ವಿಶ್ವಕಪ್​ಗೂ ಟೀಮ್​ ಇಂಡಿಯಾದ ತಯಾರಿ ಆರಂಭವಾಗಿದೆ. ಬಹುಕಾಲದ ಐಸಿಸಿ ಟ್ರೋಫಿ ಕೊರಗಿಗೆ ಬ್ರೇಕ್​ ಹಾಕಲು ಸಜ್ಜಾಗಿರೋ ಟೀಮ್​ ಇಂಡಿಯಾ, ಸ್ಪೆಷಲ್​ ಸೂತ್ರವನ್ನ ರೂಪಿಸಿದೆ.

ಮುಂಬರುವ ಟಿ-20 ವಿಶ್ವಕಪ್​ ಟೂರ್ನಿಗೆ ಕೆಲವೇ ತಿಂಗಳುಗಳು ಮಾತ್ರ ಬಾಕಿ. ವೆಸ್ಟ್​ ಇಂಡೀಸ್​ ಹಾಗೂ ಅಮೆರಿಕಾದಲ್ಲಿ ನಡೆಯಲಿರೋ ಮಹತ್ವದ ಟೂರ್ನಿ ಕಪ್​ ಗೆಲ್ಲಲು 10 ತಂಡಗಳು ಭರ್ಜರಿಯಾಗಿ ಸಜ್ಜಾಗಿವೆ. ಅಪ್ಘನ್​ ವಿರುದ್ಧದ ಚುಟುಕು ಸರಣಿಯ ಮೊದಲ ಎರಡು ಪಂದ್ಯಗಳನ್ನ ಗೆದ್ದಿರುವ ಟೀಮ್​ ಇಂಡಿಯಾ, ವಿಶ್ವಕಪ್​ ಟೂರ್ನಿಗೆ ಭರ್ಜರಿ ತಯಾರಿಯನ್ನೇ ನಡೆಸಿದೆ. ಈ ಮೂಲಕ ಬಹುಕಾಲದ ಐಸಿಸಿ ಟ್ರೋಫಿ ಬರಕ್ಕೆ ಬ್ರೇಕ್​ ಹಾಕಲು ಪಣತೊಟ್ಟಿದೆ.

‘ಸ್ಪಿನ್​ ಟು ವಿನ್’​ ಮಂತ್ರವೇ ಯಶಸ್ಸಿನ ಸೂತ್ರ

ಈ ಬಾರಿಯ ವಿಶ್ವಕಪ್​​ ನಡೆಯೋ ವೆಸ್ಟ್​ ಇಂಡೀಸ್​ ಹಾಗೂ ಅಮೆರಿಕಾದ ಪಿಚ್​ಗಳು ಸ್ಲೋ ಪಿಚ್​​ಗಳಾಗಿವೆ. ಈ ನಿಧಾನಗತಿಯ ಪಿಚ್​​ಗಳಲ್ಲಿ ಸ್ಪಿನ್ನರ್​​ಗಳೇ ಮ್ಯಾಚ್​ ವಿನ್ನರ್ಸ್​​. ಇಲ್ಲಿನ ಪಿಚ್​​ಗಳು ಸ್ಪಿನ್​ ಬೌಲಿಂಗ್​ಗೆ ಹೆಚ್ಚು ನೆರವಾಗೋದ್ರಿಂದ, ಟೀಮ್​ ಇಂಡಿಯಾ ಈ ಬಾರಿ ಸ್ಪಿನ್​ ಟು ವಿನ್​ ಸೂತ್ರದ ಮೊರೆ ಹೋಗೋದ್ರಲ್ಲಿ ಅನುಮಾನವೇ ಇಲ್ಲ. ಈಗಾಗಲೇ ಸ್ಪಿನ್​ ಕೋಟಾದಲ್ಲಿ ಸ್ಥಾನಕ್ಕಾಗಿ ಪೈಪೋಟಿಯೂ ಶುರುವಾಗಿದೆ.

ವಿಶ್ವಕಪ್​ ಟೂರ್ನಿಯನ್ನಾಡೋ ಉಳಿದ 20 ತಂಡಗಳ ಪೈಕಿ ಸ್ಪಿನ್​ ವಿಭಾಗದಲ್ಲಿ ಟೀಮ್​ ಇಂಡಿಯಾನೇ ಬಲಿಷ್ಟವಾಗಿದೆ. ಏಳಕ್ಕೂ ಹೆಚ್ಚು ವರ್ಲ್ಡ್​​ ಕ್ಲಾಸ್​ ಸ್ಪಿನ್ನರ್​​ಗಳು ಟೀಮ್​ ಇಂಡಿಯಾದಲ್ಲಿದ್ದು, ವಿಶ್ವಕಪ್​ ಸ್ಥಾನಕ್ಕಾಗಿ ಪೈಪೋಟಿಗೆ ಬಿದ್ದಿದ್ದಾರೆ. ರವೀಂದ್ರ ಜಡೇಜಾ, ಅಕ್ಷರ್​ ಪಟೇಲ್​, ಕುಲ್​ದೀಪ್​ ಯಾದವ್​, ರವಿ ಬಿಷ್ನೋಯಿ ಹಾಗೂ ವಾಷಿಂಗ್ಟನ್​ ಸುಂದರ್​ ಸ್ಥಾನದ ರೇಸ್​ನಲ್ಲಿರೋ​ ಟಾಪ್​ ಕಂಟೆಂಡರ್ಸ್​ಗಳಾಗಿದ್ದಾರೆ. ಇವರ ಜೊತೆಗೆ ಆರ್​.ಅಶ್ವಿನ್​, ಯುಜುವೇಂದ್ರ ಚಹಲ್​ ಕೂಡ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.

ಬೌಲಿಂಗ್​ಗೂ ಸೈ, ಬ್ಯಾಟಿಂಗ್​​ಗೂ ಜೈ​

ವಿಶ್ವಕಪ್​ ತಂಡದ ಸ್ಥಾನದ ರೇಸ್​​ನಲ್ಲಿರೋ ಟೀಮ್​ ಇಂಡಿಯಾದ ಪ್ರಮುಖ ಸ್ಪಿನ್ನರ್​​ಗಳು, ಬೌಲಿಂಗ್​ ಜೊತೆಗೆ ಬ್ಯಾಟಿಂಗ್​ನಲ್ಲಿಯೋ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ. ಜಡೇಜಾ, ಅಕ್ಷರ್​, ಸುಂದರ್​ ಲೋವರ್​​​​ ಆರ್ಡರ್​​ ಬ್ಯಾಟಿಂಗ್​ಗೆ ಬಲವಾಗಲಿದ್ದಾರೆ. ಇದು ಚುಟುಕು ವಿಶ್ವಕಪ್​ ದಂಗಲ್​ನಲ್ಲಿ ಟೀಮ್​ ಇಂಡಿಯಾಗೆ ಪ್ಲಸ್​ ಪಾಯಿಂಟ್​ ಆಗಲಿದೆ.

ವೆಸ್ಟ್​ ಇಂಡೀಸ್​​​ ಹಾಗೂ ಅಮೆರಿಕಾದಲ್ಲಿನ ವಾತಾವರಣ​ ಕೂಡ ಟೀಮ್​ ಇಂಡಿಯಾಗೆ ಹೆಚ್ಚು ನೆರವಾಗಲಿದೆ. ಭಾರತದಲ್ಲಿನ ಪ್ಲೇಯಿಂಗ್​ ಕಂಡಿಷನ್ಸ್, ವಿಂಡೀಸ್​ ಹಾಗೂ ಅಮೆರಿಕದಲ್ಲಿನ ಪ್ಲೇಯಿಂಗ್​ ಕಂಡಿಷನ್ಸ್​ ಬಹುತೇಕ ಒಂದೆ ತೆರನಾಗಿರೋದ್ರಿಂದಾಗಿ ಆಟಗಾರರು ಆದಷ್ಟು ಬೇಗ ವಾತಾವರಣಕ್ಕೆ ಹೊಂದಿಕೊಳ್ಳಲಿದ್ದಾರೆ. ಇದು ಟೀಮ್​ ಇಂಡಿಯಾಗಿರೋ ಬಿಗ್ಗೆಸ್ಟ್​ ಅಡ್ವಾಂಟೇಜ್​.

ಒಟ್ಟಿನಲ್ಲಿ, ಈ ಬಾರಿಯ ವಿಶ್ವಕಪ್​ ಟೂರ್ನಿ ನಡೆಯೋದು ವೆಸ್ಟ್​ ಇಂಡೀಸ್​ ಹಾಗೂ ಅಮೆರಿಕಾದಲ್ಲಾದ್ರೂ, ಟೀಮ್​ ಇಂಡಿಯಾಗೆ ಹೆಚ್ಚು ಅಡ್ವಾಂಟೇಜ್​ ಇದೆ. ರೋಹಿತ್​ ಪಡೆ ಇದನ್ನ ಸಮರ್ಥವಾಗಿ ಬಳಸಿಕೊಳ್ಳುತ್ತಾ ಅನ್ನೋದೆ ಸದ್ಯಕ್ಕಿರೋ ಪ್ರಶ್ನೆಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿಶ್ವಕಪ್​ ಟೂರ್ನಿಗೆ ಟೀಮ್​ ಇಂಡಿಯಾ ಸ್ಪೆಷಲ್ ಸೂತ್ರ.. ಬೌಲಿಂಗ್​, ಬ್ಯಾಟಿಂಗ್​ ಎರಡಕ್ಕೂ ಇವರು ಜೈ​

https://newsfirstlive.com/wp-content/uploads/2024/01/Kohli_Rohit_IND.jpg

Load More