/newsfirstlive-kannada/media/post_attachments/wp-content/uploads/2025/01/ROHIT.jpg)
ಆರೆಂಜ್ ಸಿಟಿ ನಾಗ್ಪುರ, ಮೊದಲ ಏಕದಿನ ಪಂದ್ಯಕ್ಕೆ ಸಜ್ಜಾಗಿದೆ. T20 ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನ 4-1 ಅಂತರದಿಂದ ಮಣಿಸಿರುವ ಟೀಮ್ ಇಂಡಿಯಾ, ಏಕದಿನ ಸರಣಿಯನ್ನ ಕ್ಲೀನ್ ಸ್ವೀಪ್ ಮಾಡುವ ನಿರೀಕ್ಷೆಯಲ್ಲಿದೆ. ಇದಕ್ಕಾಗಿ ರೋಹಿತ್ ಪಡೆ, ಎದುರಾಳಿಗಳ ವಿರುದ್ಧ ಸ್ಪಿನ್ ಅಸ್ತ್ರ ಬಳಸಲು ತುದಿಗಾಲಲ್ಲಿ ನಿಂತಿದೆ. ಮತ್ತೊಂದೆಡೆ ಟೀಮ್ ಇಂಡಿಯಾದ ಸ್ಪಿನ್​​​​​ ಅಸ್ತ್ರಕ್ಕೆ, ಇಂಗ್ಲೆಂಡ್ ಉತ್ತರ ಏನು?.
T20 ಸರಣಿ ಮುಗೀತು, ಇದೀಗ ಹೈವೋಲ್ಟೇಜ್ ಏಕದಿನ ಸರಣಿಯತ್ತ, ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ತಂಡಗಳ ಚಿತ್ತ ನೆಟ್ಟಿದೆ. ಕಿತ್ತಳೆ ನಗರಿ ನಾಗ್ಪುರದಲ್ಲಿ ಇಂದು, ವಿಶ್ವಕ್ರಿಕೆಟ್​ನ ಎರಡು ಬಲಿಷ್ಠ ತಂಡಗಳು ಗೆಲುವಿಗಾಗಿ ಜಿದ್ದಾಜಿದ್ದಿ ಫೈಟ್ ನಡೆಸಲಿವೆ.
/newsfirstlive-kannada/media/post_attachments/wp-content/uploads/2025/01/VARUN-CHAKRAVARTHI-2.jpg)
ಅಗ್ರೆಸಿವ್ ಬ್ರ್ಯಾಂಡ್ ಆಫ್​​​​​​​​​ ಕ್ರಿಕೆಟ್​ ಆಡಲು ಹೊರಟಿರುವ ಇಂಗ್ಲೆಂಡ್​​ಗೆ, ಟೀಮ್ ಇಂಡಿಯಾ ಮತ್ತೆ ಸ್ಪಿನ್ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಈಗಾಗಲೇ T20 ಸರಣಿಯಲ್ಲಿ ಸ್ಪಿನ್​​​ಗೆ ಸ್ಟನ್ ಆದ ಆಂಗ್ಲರಿಗೆ, ಏಕದಿನ ಸರಣಿಯಲ್ಲೂ ಸೋಲಿನ ಭೀತಿ ಶುರುವಾಗಿದೆ.
ಆರೆಂಜ್ ಸಿಟಿಗೆ ಕಾಲಿಟ್ಟ ಆಂಗ್ಲರಿಗೆ ಟೆನ್ಶನ್ ಶುರು..!​​​​​​​​​​​​​​​​
ಮುಂಬೈನಿಂದ ಸೀದಾ ನಾಗ್ಪುರಕ್ಕೆ ಬಂದಿಳಿದ ಇಂಗ್ಲೆಂಡ್​​​​ ಆಟಗಾರರು, ಟೆನ್ಶನ್​ನಲ್ಲೇ ಹೋಟೆಲ್​ ರೂಮ್​ಗೆ ತೆರಳಿದ್ರು. T20 ಸರಣಿಯಲ್ಲಿ ಇಂಡಿಯನ್ ಕಂಡೀಷನ್ಸ್​ಗೆ ಹೊಂದಿಕೊಳ್ಳಲಾಗದೇ ತ್ರೀವ ಮುಖಭಂಗ ಅನುಭವಿಸಿದ ಆಂಗ್ಲರು, ಏಕದಿನ ಸರಣಿ ಗೆಲ್ಲುವ ಒತ್ತಡದಲ್ಲಿದ್ದಾರೆ. ಆದ್ರೆ ಇಂಡಿಯನ್ ಸ್ಪಿನ್ನರ್ಸ್​ ಮುಂದೆ, ಅದು ಸುಲಭವಲ್ಲ ಅನ್ನೋದು ಜೋಸ್ ಬಟ್ಲರ್ ಪಡೆಗೆ ಚೆನ್ನಾಗೇ ಗೊತ್ತು.
ನಾಗ್ಪುರ ಪಿಚ್ ಸ್ಪಿನ್ನರ್ಸ್​ಗೆ ಸ್ವರ್ಗ, ಎದುರಾಳಿಗಳಿಗೆ ಢವ ಢವ..!
ನಾಗ್ಪುರದಲ್ಲಿ ನಡೆಯಲಿರೋ ಮೊದಲ ಏಕದಿನ ಪಂದ್ಯಕ್ಕೆ, ಕ್ಯೂರೇಟರ್ ಫ್ರೆಶ್ ಪಿಚ್ ನೀಡಲಿದ್ದಾರೆ. ವಿಶೇಷ ಅಂದ್ರೆ, ಆ ಪಿಚ್ ಸ್ಪಿನ್ನರ್ಸ್​ಗೆ ಹೆಚ್ಚು ನೆರವಾಗಲಿದೆ. ಈ ಪಿಚ್​ನಲ್ಲಿ ಬ್ಯಾಟ್ಸ್​ಮನ್​​ಗಳು ಸ್ಪಿನ್​ ವಿರುದ್ಧ ಪರದಾಡಲಿದ್ದಾರೆ. ರನ್​ಗಳಿಸೋದು ಅಷ್ಟು ಸುಲಭವಲ್ಲ. ಹಾಗಾಗಿ ಇಂಗ್ಲೆಂಡ್​​ ಆಟಗಾರರಿಗೆ, ಪಂದ್ಯಕ್ಕೂ ಮೊದಲೇ ಢವ ಢವ ಶುರುವಾಗಿದೆ.
ಏಕದಿನ ಸರಣಿಯಲ್ಲೂ ಬಟ್ಲರ್​ ಪಡೆಗೆ ಸ್ಪಿನ್​​​​​​​​​ ಭೀತಿ..!
5 ಪಂದ್ಯಗಳ T20 ಸರಣಿಯಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ಸ್​, ಮ್ಯಾಚ್ ವಿನ್ನರ್ಸ್​ ಆದ್ರು. ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್, ರವಿ ಬಿಷ್ನೋಯ್ ಸೇರಿ, ಇಂಗ್ಲೆಂಡ್ ಬ್ಯಾಟಿಂಗ್ ಲೈನ್​ಅಪ್​ನ ಧೂಳಿಪಟ ಮಾಡಿದ್ರು. ಇದೀಗ ಅನುಭವಿ ಸ್ಪಿನ್ನರ್ ರವೀಂದ್ರ ಜಡೇಜಾ, ತಂಡಕ್ಕೆ ಮರಳಿದ್ದಾರೆ. ಹಾಗಾಗಿ ಏಕದಿನ ಸರಣಿಯಲ್ಲೂ ಇಂಗ್ಲೆಂಡ್ ಬ್ಯಾಟರ್ಸ್​​ಗೆ ರನ್​ಗಳಿಸೋದು ಮತ್ತಷ್ಟು ಕಠಿಣವಾಗಲಿದೆ. ಕಾರಣ, ಟೀಮ್ ಇಂಡಿಯಾ ಕ್ಯಾಂಪ್​ನಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ ಐವರು ಸ್ಪಿನ್ನರ್ಸ್​ ಸ್ಥಾನ ಪಡೆದುಕೊಂಡಿದ್ದಾರೆ. ​
ಇದನ್ನೂ ಓದಿ: ಆಸೆ ತೋರಿಸಿ ಮಕ್ಮಲ್​ ಟೋಪಿ.. ಲಕ್ಷ ಲಕ್ಷ ಕಳೆದುಕೊಂಡ ಜಮೀನು ಮಾಲೀಕ ಏನ್ ಮಾಡಿದ?
/newsfirstlive-kannada/media/post_attachments/wp-content/uploads/2024/06/jadeja.jpg)
ಚಕ್ರವರ್ತಿ ಆಗಮನದಿಂದ ತಲೆಕೆಡಿಸಿಕೊಂಡ ಇಂಗ್ಲೆಂಡ್..!
ತಮಿಳುನಾಡಿನ ಇನ್​ಫಾರ್ಮ್​​ ಲೆಗ್​ಸ್ಪಿನ್ನರ್ ವರುಣ್ ಚಕ್ರವರ್ತಿ, T20 ತಂಡದಲ್ಲಿ ಮಾತ್ರ ಸ್ಥಾನ ಪಡೆದುಕೊಂಡಿದ್ದರು. ಆದ್ರೆ T20 ಸರಣಿಯಲ್ಲಿ ವರುಣ್ ನೀಡಿದ ಎಕ್ಸ್​ಟ್ರಾರ್ಡಿನರಿ ಪರ್ಫಾಮೆನ್ಸ್​​ಗೆ, ಬಿಸಿಸಿಐ ಏಕದಿನ ತಂಡಕ್ಕೆ ಪ್ರಮೋಟ್ ಮಾಡಿದೆ. 5 ಪಂದ್ಯಗಳ T20 ಸರಣಿಯಲ್ಲಿ 14 ವಿಕೆಟ್ ಪಡೆದಿದ್ದ ವರುಣ್ ಎಂಟ್ರಿ, ಇದೀಗ ಆಂಗ್ಲರ ನಿದ್ದೆ ಕೆಡಿಸಿದೆ.
T20 ಸರಣಿಯಲ್ಲಿ ಇಂಗ್ಲೆಂಡ್​​​​​​​​​ಗೆ ಸ್ಪಿನ್ನರ್ಸ್​ ವಿಲನ್..!
ಕೊಲ್ಕತ್ತಾ, ಚೆನ್ನೈ, ರಾಜ್​ಕೊಟ್, ಪುಣೆ ಮತ್ತು ಮುಂಬೈನಲ್ಲಿ, ಇಂಗ್ಲೆಂಡ್​​ಗೆ ಟೀಮ್ ಇಂಡಿಯಾ ಸ್ಪಿನ್ನರ್​ಗಳೇ ವಿಲನ್​ಗಳಾಗಿ ಕಾಡಿದರು. ವರುಣ್ ಚಕ್ರವರ್ತಿ, ಬಿಷ್ನೊಯ್, ಅಕ್ಷರ್, ವಾಷಿಂಗ್ಟನ್ ಸುಂದರ್ ಮತ್ತು ಅಭಿಷೇಕ್ ಶರ್ಮಾ ಸೇರಿ ಒಟ್ಟು 28 ವಿಕೆಟ್ ಪಡೆದಿದ್ದರು. T20 ಸರಣಿ ಗೆಲುವಿನಲ್ಲಿ, ಸ್ಪಿನ್ನರ್ಸ್​ ಪ್ರಮುಖ ಪಾತ್ರವಹಿಸಿದ್ದರು. ಟೀಮ್ ಇಂಡಿಯಾ ಮತ್ತೆ ಸ್ಪಿನ್ ಟು ವಿನ್ ಫಾರ್ಮುಲಾಗೆ ಮುಂದಾಗಿರೋದು, ಒಳ್ಳೆ ಐಡಿಯಾನೇ, ಆದ್ರೆ ಐದು ಮಂದಿ ಸ್ಪಿನ್ನರ್​ಗಳ ಪೈಕಿ, ಯಾರೆಲ್ಲಾ ಕಣಕ್ಕಿಳಿಯುತ್ತಾರೆ ಅನ್ನೋದೇ, ಮಿಲಿಯನ್ ಡಾಲರ್ ಪ್ರಶ್ನೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us