/newsfirstlive-kannada/media/post_attachments/wp-content/uploads/2023/07/bharath-1.jpg)
ರಿಯಾಲಿಟಿ ಶೋಗಳ ಮೂಲಕ ನಟ ಭರತ್​ ಬೋಪಣ್ಣ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಬಳಿಕ ಬ್ರಹ್ಮಗಂಟು ಸೀರಿಯಲ್ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡರು. ವೀಕ್ಷಕರು ಇವತ್ತಿಗೂ ಸಹ ಇವರನ್ನು ಲಕ್ಕಿ ಅಂತಾನೇ ಗುರುತಿಸುತ್ತಾರೆ. ಇದೀಗ ನಟ ಭರತ್​​ ಬೋಪಣ್ಣ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ. ಹೌದು, ಕಿರುತೆರೆಯ ಪ್ರೀತಿಯ ಲಕ್ಕಿ ಸದ್ಯ ಸಿನಿಮಾಗಳತ್ತ ಮುಖ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2023/07/bharath.jpg)
ಕನ್ನಡ ತೆಲುಗು ಸೇರಿದಂತೆ ಬಹು ಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಕಾರಣಕ್ಕೆ ದೇಹವನ್ನ ಹುರಿ ಗೊಳಸುತ್ತಿರುವ ಸಮಯದಲ್ಲಿ ಸ್ಪೈನಲ್ ಕಾರ್ಡ್​ ಅಂದ್ರೆ ಬೆನ್ನುಹುರಿಗೆ ಏಟು ಮಾಡಿಕೊಂಡು ಒಂದು ತಿಂಗಳುಗಳ ಕಾಲ ಬೆಡ್​​ ರೆಸ್ಟ್​ನಲ್ಲಿದ್ದರಂತೆ ನಟ ಭರತ್​​. ನಟನಿಗೆ ಫಿಸಿಕ್​ನ ಕಾಪಾಡಿಕೊಳ್ಳೋದು ತುಂಬಾ ಮುಖ್ಯ. ಹೀಗಾಗಿ ಇಷ್ಟು ದಿನಗಳ ಕಾಲ ಶೂಟಿಂಗ್​ನಿಂದ ದೂರ ಉಳಿದಿದ್ರು. ಬೇಗ ಗುಣಮುಖವಾಗಲು ಆಯುರ್ವೇದಿಂದ ಹಿಡಿದು ಎಲ್ಲಾ ರೀತಿಯ ಚಿಕಿತ್ಸೆಗಳನ್ನ ಪಡೆಯುತ್ತಿದ್ದರಂತೆ. ಸದ್ಯ ಈಗ ಚೇತರಿಸಿಕೊಂಡಿದ್ದಾರಂತೆ ಭರತ್.
/newsfirstlive-kannada/media/post_attachments/wp-content/uploads/2023/07/bharath-2.jpg)
ಮೂಲಗಳ ಪ್ರಕಾರ ಭರತ್​ ಕೈಲಿ ಹಲವು ಸಿನಿಮಾಗಳಿದ್ದು, ಅದಕ್ಕಾಗಿ ಮತ್ತೆ ಕೆಲಸ ಶುರು ಮಾಡಿದ್ದಾರಂತೆ. ಮೊದಲಿನಂತೆ ದೇಹವನ್ನ ಹುರಿಗೊಳಿಸಲು ಟ್ರೈನಿಂಗ್​ ಪಡೆಯುತ್ತಿದ್ದಾರಂತೆ. ಒಟ್ಟಿನಲ್ಲಿ ಕಲಾವಿದರ ಲೈಫ್​ ನೋಡಿದಷ್ಟು ಸುಲಭವಲ್ಲ. ಒಟ್ಟಿನಲ್ಲಿ ನಟ ಭರತ್​ ಅವರು ಮತ್ತೆ ಬೆಳ್ಳಿತೆರೆಯನ್ನ ಬೆಳಗುವಂತಾಗಲಿ ಅಂತಾ ಹಾರೈಸೋಣ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ 'ಫಿಲ್ಮಿ ಫಸ್ಟ್' ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us