ಸೈಫ್​ ​ಬೆನ್ನುಹುರಿಗೆ ಆಳವಾದ ಗಾಯ.. ಈ ಬೆನ್ನುಮೂಳೆ ಗಾಯ ಎಷ್ಟು ಅಪಾಯಕಾರಿ..?

author-image
Ganesh
Updated On
ಸೈಫ್​ ​ಬೆನ್ನುಹುರಿಗೆ ಆಳವಾದ ಗಾಯ.. ಈ ಬೆನ್ನುಮೂಳೆ ಗಾಯ ಎಷ್ಟು ಅಪಾಯಕಾರಿ..?
Advertisment
  • ಸೈಫ್ ಅಲಿ ಖಾನ್​ಗೆ ಚೂರಿ ಚುಚ್ಚಿರುವ ಕಳ್ಳ
  • ಬಲವಾದ ಗಾಯ ಸ್ಟ್ರೋಕ್​​ಗೆ ಕಾರಣವಾಗುತ್ತದೆ
  • ಬೆನ್ನುಹುರಿ ರಕ್ಷಿಸಿಕೊಳ್ಳಲು ನೀವು ಏನು ಮಾಡಬೇಕು?

ನಟ ಸೈಫ್ ಅಲಿ ಖಾನ್ ಮೇಲಿನ ಹಲ್ಲೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಬಾಲಿವುಡ್ ನಟನಿಗೆ ಚಾಕುವಿನಿಂದ ಆರು ಬಾರಿ ಇರಿಯಲಾಗಿದೆ. ಇದರಿಂದ ಅವರ ಬೆನ್ನುಹುರಿ ಮತ್ತು ಕುತ್ತಿಗೆಗೆ ಆಳವಾದ ಗಾಯಗಳಾಗಿವೆ. ನಟನ ಬೆನ್ನುಹುರಿಯಿಂದ 2.5 ಇಂಚಿನ ಚಾಕುವನ್ನು ತೆಗೆಯಲಾಗಿದೆ. ಬೆನ್ನುಹುರಿಗೆ ಆಗಿರುವ ಗಾಯವು ತುಂಬಾನೇ ಅಪಾಯಕಾರಿ!

ಬೆನ್ನುಮೂಳೆಯ ಗಾಯ ಎಷ್ಟು ಅಪಾಯಕಾರಿ?

ಮರಗಟ್ಟುವಿಕೆ: ಬೆನ್ನುಹುರಿಯ ಗಾಯವು ಮರಗಟ್ಟುವಿಕೆಗೆ ಕಾರಣವಾಗಬಹುದು. ಬೆನ್ನುಹುರಿಗೆ ಆಳವಾದ ಗಾಯವಾದರೆ ಪಾರ್ಶ್ವವಾಯು ಸಂಭವಿಸುವ ಸಾಧ್ಯತೆ ಇರುತ್ತದೆ. ಈ ರೀತಿಯ ಗಾಯಗಳು ರಕ್ತನಾಳಗಳು ಮತ್ತು ನರಗಳನ್ನು ಹಾನಿಗೊಳಿಸುತ್ತವೆ. ಬೆನ್ನುಹುರಿಗೆ ಬಲವಾದ ಪೆಟ್ಟು ಬಿದ್ದರೆ ದೇಹದೊಳಗೆ ರಕ್ತಸ್ರಾವ ಕೂಡ ಆಗಬಹುದು.

ಬೆನ್ನುಹುರಿಯ ಪ್ರಮುಖ ಭಾಗ

ಬೆನ್ನುಹುರಿ ದೇಹಕ್ಕೆ ಬೇಕಾಗಿರುವ ಅತ್ಯಗತ್ಯ ಅಂಗ. ಮೆದುಳಿನಿಂದ ದೇಹದ ಉಳಿದ ಭಾಗಗಳಿಗೆ ಸಂದೇಶಗಳನ್ನು ರವಾನಿಸಲು ಬೆನ್ನುಹುರಿ ಕಾರ್ಯನಿರ್ವಹಿಸುತ್ತದೆ. ಬೆನ್ನುಹುರಿಗೆ ಸಣ್ಣ ಗಾಯವಾದರೂ ದೌರ್ಬಲ್ಯ ಅಥವಾ ಸಂವೇದನೆಯ ನಷ್ಟವನ್ನು ಅನುಭವಿಸುತ್ತೇವೆ.

ಬೆನ್ನುಮೂಳೆ ಕಾಪಾಡಿಕೊಳ್ಳೋದು ಹೇಗೆ..?

  • ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳುವುದು
  • ಅತಿಯಾದ ಒತ್ತಡ ಹೇರದಿರೋದು
  •  ದೀರ್ಘಕಾಲ ಕುಳಿತುಕೊಳ್ಳದಿರುವುದು
  •  ನಿಯಮಿತವಾಗಿ ವ್ಯಾಯಾಮ ಮಾಡುವುದು

ಒಂದು ವೇಳೆ ನೀವು ಈ ನಿಯಮ ಪಾಲಿಸದಿದ್ದರೆ ಬೆನ್ನುಮೂಳೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಇದಲ್ಲದೆ, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರ ಪದಾರ್ಥಗಳನ್ನು ತಿನ್ನಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment