newsfirstkannada.com

ಪಾಲಿಕೆಯಿಂದ ದಿಟ್ಟ ಹೆಜ್ಜೆ; ಪಿಚಕ್-ತುಫಕ್ ಅಂತಾ ಉಗುಳುತ್ತಿದ್ದ 287 ಮಂದಿಯಿಂದ 31,000 ರೂ ದಂಡ ವಸೂಲಿ

Share :

Published February 4, 2024 at 1:14pm

Update February 4, 2024 at 1:15pm

    ಸಾರ್ವಜನಿಕ ಸ್ಥಳ ಸ್ವಚ್ಛವಾಗಿಡಲು ಕಠಿಣ ಕ್ರಮ

    ಯಾವೆಲ್ಲ ಏರಿಯಾದಲ್ಲಿ ಉಗುಳಿದ್ರೆ ಬೀಳುತ್ತೆ ದಂಡ

    ಪಾಲಿಕೆ ಆಯುಕ್ತರ ನಿರ್ಧಾರಕ್ಕೆ ಭಾರೀ ಮೆಚ್ಚುಗೆ

ಮ್ಯಾನರ್ಸ್​ ಇಲ್ದೆ ಇರೋರಿಗೆ ಅದೆಷ್ಟೇ ಅಭಿಯಾನ ಮಾಡಿದ್ದರೂ ಅರ್ಥ ಮಾಡಿಕೊಳ್ಳಲ್ಲ. ಅದೇ ಕಾರಣಕ್ಕೆ ಕಂಡ ಕಂಡ ರಸ್ತೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಪಿಚಕ್, ತುಫಕ್ ಎಂದು ಎಂಜಲು, ಬೀಡಾ ಉಗುಳಿ ಗಲೀಜು ಮಾಡ್ತಿರೋರಿಗೆ ಬುದ್ಧಿ ಕಲಿಸಲು ಪಾಲಿಕೆ ದಿಟ್ಟ ಹೆಜ್ಜೆ ಇಟ್ಟಿದೆ.

ಗುಜರಾತ್​ನ ಅಹಮ್ಮದಾಬಾದ್​ನ ಮುನ್ಸಿಪಾಲ್ ಕಾರ್ಪೊರೇಷನ್ ಆಯುಕ್ತರು ಈ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಎರಡೇ ದಿನದಲ್ಲಿ 287 ಜನರಿಂದ 31 ಸಾವಿರ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಈ ಮೂಲಕ ಬೀಡಾಗಳನ್ನು ಹಾಕಿಕೊಂಡು ಕಂಡ ಕಂಡಲ್ಲಿ ಉಗುಳುತ್ತಿರೋರಿಗೆ ಪಾಠ ಕಲಿಸಲು ಮುಂದಾಗಿದೆ.

ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ವಿಭಾಗ ಕಠಿಣ ಕ್ರಮಕ್ಕೆ ಮುಂದಾಗಿದೆ. ರಸ್ತೆಗಳಲ್ಲಿ ಉಗುಳೋರಿಗೆ 50 ರಿಂದ 500 ವರೆಗೆ ದಂಡ ವಿಧಿಸುತ್ತಿದೆ. ಮೊನ್ನೆ ಮತ್ತು ನಿನ್ನೆ ಎರಡು ದಿನದಲ್ಲಿ ಹಲವು ಜನರಿಗೆ ದಂಡ ವಿಧಿಸಿ ಎಚ್ಚರಿಕೆಯನ್ನು ನೀಡಿದೆ. ಮತ್ತೆ ಉಗುಳಿದ್ರೆ 1500 ರೂಪಾಯಿ ದಂಡ ಹಾಕೋದಾಗಿ ಎಚ್ಚರಿಕೆ ನೀಡಿದೆ. ಮೊದಲ ದಿನ 152, ಎರಡನೇ ದಿನ 135 ಜನರಿಂದ ದಂಡ ವಸೂಲಿ ಮಾಡಿದೆ.

ಎಲ್ಲೆಲ್ಲಿ ಉಗುಳಿದ್ರೆ ದಂಡ..?
ಅಹಮ್ಮದಾಬಾದ್ ನಗರದ ಎಸ್​​ಜಿ ಹೆದ್ದಾರಿ, ನಾರಾಯಣ ಪುರ, ನವರಂಗ್ ಪುರ, ವಡಾಜ್, ಮಣಿನಗರ, ವೆಜಲ್​ಪುರ, ರಾನಿಪ್, ಪಾಲ್ಡಿ, ಸಬರಮತಿ, ಚಂದ್ ಖೇಡಾ, ನರೋಡಾ, ಬಾಪುನಗರ, ಸಾಯಿಪುರ, ಚಂದ್ಲೋಡಿಯಾ, ಐಐಎಂ ರಸ್ತೆಯಲ್ಲಿ ಉಗುಳಿದ್ರೆ ದಂಡ ಬೀಳೋದು ಗ್ಯಾರಂಟಿ. ನಗರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಉದ್ದೇಶಿದಂ ಪಾಲಿಕೆ ಈ ನಿರ್ಧಾರಕ್ಕೆ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಲಿಕೆಯಿಂದ ದಿಟ್ಟ ಹೆಜ್ಜೆ; ಪಿಚಕ್-ತುಫಕ್ ಅಂತಾ ಉಗುಳುತ್ತಿದ್ದ 287 ಮಂದಿಯಿಂದ 31,000 ರೂ ದಂಡ ವಸೂಲಿ

https://newsfirstlive.com/wp-content/uploads/2024/02/SPITTING-1.jpg

Load More