/newsfirstlive-kannada/media/media_files/2025/10/18/rashid_khan_team-2025-10-18-08-39-50.jpg)
ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ನಡುವೆ ಘರ್ಷಣೆ ಮುಂದುವರೆದಿದ್ದು ಭಾರೀ ಆತಂಕವನ್ನು ಮೂಡಿಸಿದೆ. ಪಾಕಿಸ್ತಾನ ನಡೆಸಿದ ಏರ್​ಸ್ಟ್ರೈಕ್​ನಲ್ಲಿ ಅಫ್ಘಾನಿಸ್ತಾನದ ಮೂವರು ದೇಶಿಯ ಕ್ರಿಕೆಟ್ ಆಟಗಾರರು ಬಲಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಪಕ್ತಿಕಾ ಪ್ರಾಂತ್ಯದಲ್ಲಿ ಪಾಕಿಸ್ತಾನದ ಮಿಲಿಟರಿ ಪಡೆ ನಡೆಸಿದ ಏರ್​​ಸ್ಟ್ರೈಕ್​ನಿಂದ ಅಫ್ಘಾನಿಸ್ತಾನದ ಮೂವರು ದೇಶಿ ಕ್ರಿಕೆಟ್​ ಆಟಗಾರರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂಬಂಧ ಪಾಕಿಸ್ತಾನದಲ್ಲಿ ನಡೆಯುವ ತ್ರಿಕೋನ ಟಿ20 ಸರಣಿಯಲ್ಲಿ ಅಫ್ಘಾನಿಸ್ತಾನ ಟೀಮ್ ಭಾಗಿಯಾಗಲ್ಲ ಎಂದು ಅಫ್ಘಾನಿಸ್ತಾನ ಕ್ರಿಕೆಟ್​ ಬೋರ್ಡ್​ (ಎಸಿಬಿ) ಹೇಳಿದೆ. ಇನ್ನು ಬಲಿಯಾದವರನ್ನು ಕಬೀರ್, ಸಿಬ್ಗತುಲ್ಲಾ ಹಾಗೂ ಹಾರೂನ್ ಎಂದು ಗುರುತಿಸಲಾಗಿದೆ.
ಈ ಕುರಿತು ಅಧಿಕೃತವಾಗಿ ಟ್ವೀಟ್ ಮಾಡಿರುವ ಅಫ್ಘಾನಿಸ್ತಾನ ಕ್ರಿಕೆಟ್​ ಬೋರ್ಡ್, ಪಾಕಿಸ್ತಾನದ ನರಿ ಬುದ್ಧಿಯನ್ನು ತೀವ್ರವಾಗಿ ಖಂಡಿಸುತ್ತಿದ್ದೇವೆ. ಪಾಕಿಸ್ತಾನದ ಆಡಳಿತ ನಡೆಸಿದ ಅಂತ್ಯತ ಹೇಡಿತನದ ದಾಳಿ ಇದು. ಈ ಹಿನ್ನೆಲೆಯಲ್ಲಿ ನವೆಂಬರ್​ 5 ರಿಂದ 29ರವರೆಗೆ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಆರಂಭವಾಗುವ ಟಿ20 ತ್ರಿಕೋನ ಸರಣಿಯಲ್ಲಿ ಆಡದೇ ಇರಲು ನಿರ್ಧರಿಸಲಾಗಿದೆ ಎಂದು ಹೇಳಿದೆ.
ಈ ತ್ರಿಕೋನ ಸರಣಿಯು ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ನಡುವೆ ನಡೆಯಬೇಕಿತ್ತು. ಆದರೆ ಇದರಲ್ಲಿ ಪಾಲ್ಗೊಳ್ಳಲ್ಲ ಎಂದು ಎಸಿಬಿ ಹೇಳಿರುವುದನ್ನು ಅಫ್ಘಾನ್ ತಂಡದ ಕ್ಯಾಪ್ಟನ್​ ರಶೀದ್ ಖಾನ್ ಬೆಂಬಲಿಸಿದ್ದಾರೆ. ತಮ್ಮ ದೇಶದ ಪರ ನಿಂತುಕೊಂಡಿದ್ದಾರೆ. ಅಲ್ಲದೇ ಪಾಕಿಸ್ತಾನದ ಏರ್​ಸ್ಟ್ರೈಕ್​ ಅನ್ನು ಅನಾಗರಿಕ ಏರ್​ಸ್ಟ್ರೈಕ್ ಎಂದು ಜರಿದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ