/newsfirstlive-kannada/media/media_files/2025/10/02/rcb-2025-10-02-09-21-58.jpg)
ಐಪಿಎಲ್​ ಸೀಸನ್​ 19 ಕಿಕ್​ ಸ್ಟಾರ್ಟ್​ ಮಾಡೋಕೂ ಮುನ್ನ ಆರ್​​​ಸಿಬಿ ಸೇಲ್​ ಡೀಲ್​ ಫೈನಲ್​ ಹಂತ ತಲುಪಿದೆ. ಆರ್​​ಸಿಬಿ ನೂತನ ಮಾಲೀಕ ಯಾರಾಗ್ತಾರೆ.? ಅನ್ನೋ ಪ್ರಶ್ನೆಗೆ ಕೆಲವೇ ದಿನಗಳಲ್ಲಿ ಕ್ಲೀಯರ್​ ಪಿಚ್ಚರ್​ ಸಿಗಲಿದೆ. ರೆಡ್​ ಆರ್ಮಿಯ ಓನರ್ ಆಗೋಕೆ ಮಿಲೆನಿಯರ್​ಗಳ ಫೈಟ್​ ನಡೀತಿದೆ. ಪೂರ್ವಾಭಾವಿ ಬಿಡ್​ ಓಪನ್ ಆದ ಬೆನ್ನಲ್ಲೇ ಪ್ರತಿಷ್ಠಿತ ಕಂಪನಿಗಳು ಆರ್​​ಸಿಬಿ ಖರೀದಿಗೆ ಆಸಕ್ತಿ ತೋರಿಸಿ ಬಿಡ್​ ಮಾಡಿವೆ. ಆರ್​​ಸಿಬಿ ಖರೀದಿಗೆ ಯಾವ ಕಂಪನಿ ಎಷ್ಟು ಬಿಡ್​ ಮಾಡಿದೆ ಅನ್ನೋದ್ರ ಡಿಟೇಲ್ಸ್​ ಇದೀಗ ರಿವೀಲ್​ ಆಗಿದೆ.
ಮ್ಯಾಂಚೆಸ್ಟರ್​ ಯುನೈಟೆಡ್​: 16,300 ಕೋಟಿ
ವಿಶ್ವದ ಖ್ಯಾತ ಫುಟ್ಬಾಲ್​ ಕ್ಲಬ್​ ಮ್ಯಾಂಚೆಸ್ಟರ್​ ಯುನೈಟೆಡ್​ನ ಕಣ್ಣು ಕೂಡ ಆರ್​​ಸಿಬಿ ತಂಡದ ಓನರ್​ಶಿಪ್​ ಮೇಲೆ ಬಿದ್ದಿದೆ. ಮ್ಯಾಂಚೆಸ್ಟರ್​ ಯುನೈಟೆಡ್​ನ ಕೋ ಓನರ್​ ಅವ್ರಾಮ್​ ಗ್ಲೇಜರ್​ ಆರ್​​ಸಿಬಿಗೆ ಬಿಡ್​ ಸಲ್ಲಿಕೆ ಮಾಡಿದ್ದಾರೆ. ಮೂಲಗಳ ಪ್ರಕಾರ ಅವ್ರಾಮ್​ ಗ್ಲೇಜರ್​ 16,300 ಕೋಟಿಗೆ ಬಿಡ್​ ಸಲ್ಲಿಕೆ ಮಾಡಿದ್ದಾರೆ. ಅಮೇರಿಕಾ ಬಿಲೆನೀಯರ್​ ಮಲ್ಕಮ್​ ಗ್ಲೇಕರ್​ ಮಗನಾಗಿರೋ ಅವ್ರಾಮ್​ ಮ್ಯಾಂಚೆಸ್ಟರ್​ ಯುನೈಟೆಡ್​ನ ಡೈರೆಕ್ಟರ್​ ಆಗಿದ್ದಾರೆ. ಐಎಲ್​ಟಿ20 ಲೀಗ್​ನಲ್ಲಿ ಡೆಸರ್ಟ್​ ವಿಸ್ಪರ್ಸ್​ ತಂಡದ ಮಾಲೀಕರಾಗಿದ್ದಾರೆ.
ಇದನ್ನೂ ಓದಿ: ಪ್ರಾನ್ಸ್ ನಿಂದ 3.25 ಲಕ್ಷ ಕೋಟಿ ರೂಪಾಯಿಯಲ್ಲಿ 114 ರಫೇಲ್ ಯುದ್ಧ ವಿಮಾನ ಖರೀದಿ: ಈ ವಾರ ಅನುಮೋದನೆ ನಿರೀಕ್ಷೆ
/filters:format(webp)/newsfirstlive-kannada/media/media_files/2026/02/06/rcb-21-2026-02-06-10-58-24.jpg)
ಆಧಾರ್​ ಪೂನಾವಾಲ: 15,000 ಕೋಟಿ
ಆರ್​​​ಸಿಬಿ ಖರೀದಿಸಲು ಅತೀವ ಆಸಕ್ತಿ ಹೊಂದಿರೋ ಆಧಾರ್​ ಪೂನಾವಾಲಾ, ಓನರ್​ ಆಗೋಕೆ ಬಿಗ್​ ಅಮೌಂಟ್​ನ ಕೋಟ್​ ಮಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಟ್ವೀಟ್​ ಮೂಲಕ ನಾನು ಬಿಗ್ ಅಮೌಂಟ್​ ಕೋಟ್​ ಮಾಡ್ತಿನಿ ಎಂದು ಸೀರಮ್​ ಇನ್ಸಿಸ್ಟ್ಯೂಟ್​ನ ಆದಾರ್​ ಪೂನಾವಾಲ ಬಹಿರಂಗವಾಗಿಯೇ ಹೇಳಿದ್ರು. ಹೇಳಿದಂತೆ 15 ಸಾವಿರ ಕೋಟಿಗೆ ಬಿಡ್​ ಮಾಡಿದ್ದಾರೆ. ಪಾರ್ಟನರ್​ಶಿಪ್​ನಲ್ಲಿ ಡೀಲ್​ ಆದ್ರೆ, ತಂಡದ ಬಹುಪಾಲು ಷೇರುಗಳು ಆಧಾರ್​ ಪೂನಾವಾಲಾ ಪಾಲಾಗೋ ಸಾಧ್ಯತೆಯಿದೆ ಅನ್ನೋದು ಮಾರ್ಕೆಟ್​​ನ ಸದ್ಯದ ಟಾಕ್.!
ಗೌತಮ್ ಅದಾನಿ: 14,000 ಕೋಟಿ
ಭಾರತದ ಟಾಪ್​ ಶ್ರೀಮಂತರಲ್ಲಿ ಒಬ್ಬರಾದ ಗೌತಮ್​ ಅದಾನಿ ಕೂಡ ಆರ್​​ಸಿಬಿ ಖರೀದಿಗೆ ಮುಂದಾಗಿದ್ದಾರೆ. ಐಪಿಎಲ್​ನಲ್ಲಿ ತಂಡದ ಖರೀದಿಸಲು 2022ರಲ್ಲಿ ಪ್ರಯತ್ನಿಸಿ ಅದಾನಿ ಗ್ರೂಪ್​ ವಿಫಲವಾಗಿತ್ತು. ಅಂದು ಲಕ್ನೋ ಫ್ರಾಂಚೈಸಿ ಖರೀದಿಗೆ ಅದಾನಿ ಗ್ರೂಪ್​ 5,100 ಕೋಟಿವರೆಗೆ ಬಿಡ್​ ಮಾಡಿತ್ತು. ಆ ಬಳಿಕ ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ಗುಜರಾತ್​ ಜೈಂಟ್ಸ್​ ತಂಡವನ್ನ ಅದಾನಿ ಗ್ರೂಪ್​ ಖರೀದಿಸಿದೆ. ಇದೀಗ ಆರ್​​ಸಿಬಿಯನ್ನ ತೆಕ್ಕೆಗೆ ತೆಗೆದುಕೊಂಡು ಐಪಿಎಲ್​ಗೂ ಎಂಟ್ರಿಕೊಡೋ ಲೆಕ್ಕಾಚಾರದಲ್ಲಿದ್ದು, ಆರ್​​ಸಿಬಿ ತಂಡಕ್ಕೆ 14 ಸಾವಿರ ಕೋಟಿ ಬಿಡ್​ ಮಾಡಿದೆ.
ಇದನ್ನೂ ಓದಿ:ಚೆಕ್ ಬೌನ್ಸ್ ಕೇಸ್ ನಲ್ಲಿ ತಿಹಾರ್ ಜೈಲು ಸೇರಿದ ಬಾಲಿವುಡ್ ನಟ ರಾಜ್ ಪಾಲ್ ಯಾದವ್: ನೆರವಿಗೆ ಬಾರದ ಬಾಲಿವುಡ್!
/filters:format(webp)/newsfirstlive-kannada/media/media_files/2026/02/05/rcb-15-2026-02-05-14-52-12.jpg)
ಪಾರ್ಥ್​ ಜಿಂದಾಲ್​: 12,000 ಕೋಟಿ
ಉದ್ಯಮಿ ಪಾರ್ಥ್​ ಜಿಂದಾಲ್ ಕೂಡ ಆರ್​​​ಸಿಬಿಯ ಖರೀದಿಗೆ ಬಿಡ್​ ಮಾಡಿದ್ದಾರೆ. ಈಗಾಗಲೇ ಐಪಿಎಲ್​ನಲ್ಲಿ ಜಿಂದಾಲ್ ಕಂಪನಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಒಡೆತನವನ್ನ ಹೊಂದಿದೆ. ಡೆಲ್ಲಿ ಫ್ರಾಂಚೈಸಿಯ 50 ಪರ್ಸೆಂಟ್​ ಶೇರುಗಳ ಹೊಂದಿರೋ ಪಾರ್ಥ್​ ಜಿಂದಾಲ್​, ಪೂರ್ಣ ಪ್ರಮಾಣದಲ್ಲಿ ತಂಡವೊಂದರ ಒಡೆಯನಾಗೋ ಲೆಕ್ಕಾಚಾರದಲ್ಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ 12 ಸಾವಿರ ಕೋಟಿಗೆ ಜಿಂದಾಲ್​ ಬಿಡ್​ ಮಾಡಿದ್ದಾರಂತೆ. ISL​​ನ ಬೆಂಗಳೂರು ಫುಟ್ಬಾಲ್​ ತಂಡದ ಒಡೆಯನಾಗಿರೋ ಪಾರ್ಥ್​ ಜಿಂದಾಲ್​, ಕ್ರಿಕೆಟ್​ನಲ್ಲೂ ಬೆಂಗಳೂರು ಮೂಲದ ತಂಡದ ಒನರ್​ ಆಗೋ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.
ಇವಿಷ್ಟು ಸದ್ಯ ರಿವೀಲ್​ ಆಗಿರೋ ಮಾಹಿತಿಗಳು. ಈ ನಾಲ್ಕು ಕಂಪನಿಗಳ ಹೊರತಾಗಿ ಮಣಿಪಾಲ್ ಗ್ರೂಪ್​ನ ಚೇರ್​ಮನ್​ ರಂಜನ್​ ಪೈ, ಹೊಂಬಾಳೆ ಫಿಲ್ಮ್ಸ್​​ನ ವಿಜಯ್​ ಕಿರಗಂದೂರು, ಬಾಲಿವುಡ್​ ನಟ ರಣಬೀರ್​ ಕಪೂರ್​ ಕೂಡ ಆರ್​​ಸಿಬಿಯ ಕೆಲ ಷೇರುಗಳ ಖರೀದಿಗೆ ಆಸಕ್ತಿ ಹೊಂದಿದ್ದಾರೆ. ದಿನದಿಂದ ದಿನಕ್ಕೆ ಪೈಪೋಟಿ ಹೆಚ್ಚಾಗ್ತಿರೋದ್ರಿಂದ ಅಂತಿಮವಾಗಿ ಆರ್​​ಸಿಬಿ ಯಾರ ಪಾಲಾಗುತ್ತೆ ಅನ್ನೋದು ಅಭಿಮಾನಿಗಳಲ್ಲಿ ಕುತೂಹಲವನ್ನ ಮತ್ತಷ್ಟು ಹೆಚ್ಚಿಸ್ತಾ ಇದೆ.
ಇದನ್ನೂ ಓದಿ:ಬಾಲಿವುಡ್ ನಟ ರಾಜ್ ಪಾಲ್ ಯಾದವ್ ಜೈಲು ಪಾಲಾಗಿದ್ದೇಕೆ? ಎಷ್ಟು ಹಣ ಸಾಲ ಪಡೆದಿದ್ದರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us