Advertisment

T20 ಕ್ರಿಕೆಟ್​ನ ನಂಬರ್​- 1 ಬ್ಯಾಟರ್​ ಅಭಿಷೇಕ್ ಶರ್ಮಾ.. ಐಸಿಸಿ ಱಕಿಂಗ್​ನಲ್ಲಿ ಹೊಸ ಇತಿಹಾಸ!

ಫಿಯರ್ ಲೆಸ್ ಬ್ಯಾಟಿಂಗ್​ನಿಂದ ಬೌಂಡರಿ, ಸಿಕ್ಸರ್​ಗಳ ಬೋರ್ಗೆರತ ಸೃಷ್ಟಿಸಿದ್ದ ನಂ.1 ಬ್ಯಾಟರ್​ ಅಭೀಷೇಕ್, ಐಸಿಸಿ ಟಿ20 ಱಕಿಂಗ್​ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಆದ್ರೆ, ನಂಬರ್​​.1 ಟಿ20 ಬ್ಯಾಟರ್ ಆಗಿ ಮುಂದುವರಿದಿರುವ ಅಭಿಷೇಕ್ ಶರ್ಮಾ..

author-image
Bhimappa
ABHISHEK_SHARMA (1)
Advertisment

ಅಭಿಷೇಕ್ ಶರ್ಮಾ ಟಿ20 ಕ್ರಿಕೆಟ್​ನ ಮಾಡ್ರನ್​ ಡೇ ಮಾಂತ್ರಿಕ. ಆಕ್ರಮಣಕಾರಿ ಆಟವಾಡುವ ಅಭಿಷೇಕ್ ಶರ್ಮಾ ನೆವರ್ ಗಿವ್ ಅಪ್ ಅಟಿಟ್ಯೂಡ್​​ನಿಂದಲೇ ಕ್ರಿಕೆಟ್​ ಲೋಕದ ಗಮನ ಸೆಳೆದಿದ್ದಾರೆ. ಇದಕ್ಕೆ ಕಾರಣ ಟಿ20 ನಂಬರ್​.1 ಬ್ಯಾಟರ್​ನ ರೇಟಿಂಗ್.

Advertisment

ಅಭಿಷೇಕ್ ಶರ್ಮಾ.. ಫಿಯರ್​ ಲೆಸ್ ಕ್ರಿಕೆಟರ್, ದಡಂ ದಶಗುಣಂ, ಬಾಲ್ ಇರೋದು ದಂಡಿಸೋಕೆ ಅನ್ನೋದು ಈತನ ಮೂಲ ಮಂತ್ರ. ಎದುರಿಸೋ ಮೊದಲ ಎಸೆತದಿಂದ ಕೊನೆಯ ಎಸೆತವರೆಗೆ ಬೌಂಡರಿ, ಸಿಕ್ಸರ್​ಗಳ ಬೋರ್ಗೆರತ ಸೃಷ್ಟಿಸುವ ಅಭಿಷೇಕ್, ಆನ್​ಫೀಲ್ಡ್​ನಲ್ಲಿ ಮೈದಾನದಲ್ಲಿ ರನ್ ಅಭಿಷೇಕ ಮಾಡ್ತಾರೆ. ಕ್ರೀಸ್​ನಲ್ಲಿದ್ದಷ್ಟು ಹೊತ್ತು ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿರುವ ಪಂಜಾಬ್​ ಪುತ್ತರ್​, ಟಿ20 ಕ್ರಿಕೆಟ್​​ನ ನಂಬರ್​.1 ಬ್ಯಾಟ್ಸ್​ಮನ್ ಆಗಿ ಮೆರೆದಾಡ್ತಿದ್ದಾರೆ. ಇದೀಗ ಇದೇ ನಂ.1 ಬ್ಯಾಟರ್ ಐಸಿಸಿ ಱಕಿಂಗ್​ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.  

abhishek sharma

ಟಿ20 ಱಕಿಂಗ್​ನಲ್ಲಿ ಅಭಿಷೇಕ್ ಶರ್ಮಾ ವಿಶ್ವ ದಾಖಲೆ..!

ಏಷ್ಯಾಕಪ್​​​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ದ ಅಭಿಷೇಕ್‌, ಟೀಮ್ ಇಂಡಿಯಾ ಗೆಲುವಿನ ಹಿಂದಿನ ರಿಯಲ್ ಹೀರೋ. ಫಿಯರ್ ಲೆಸ್ ಬ್ಯಾಟಿಂಗ್​ನಿಂದಲೇ ಬೌಂಡರಿ, ಸಿಕ್ಸರ್​ಗಳ ಬೋರ್ಗೆರತ ಸೃಷ್ಟಿಸಿದ್ದ ನಂ.1 ಬ್ಯಾಟರ್​ ಅಭೀಷೇಕ್, ಐಸಿಸಿ ಟಿ20 ಱಕಿಂಗ್​ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಆದ್ರೆ, ನಂಬರ್​​.1 ಟಿ20 ಬ್ಯಾಟರ್ ಆಗಿ ಮುಂದುವರಿದಿರುವ ಅಭಿಷೇಕ್ ಶರ್ಮಾ, ಟಿ20 ಱಕಿಂಗ್​ನಲ್ಲೇ ಮತ್ತೊಂದು ಇತಿಹಾಸ ನಿರ್ಮಿಸಿದ್ದಾರೆ. 

ಈಗಾಗಲೇ ನಂಬರ್​.1 ಬ್ಯಾಟರ್ ಆಗಿ ಟಿ20 ಕ್ರಿಕೆಟ್​ ಲೋಕವನ್ನಾಳ್ತಿರುವ ಅಭಿಷೇಕ್ ಶರ್ಮಾ, ಐಸಿಸಿ ರೇಟಿಂಗ್​​​ನಲ್ಲಿ ಅತ್ಯಧಿಕ 931 ಪಾಯಿಂಟ್ ಕಲೆ ಹಾಕಿದ್ದಾರೆ. ಆ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ, ಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಯಾವೊಬ್ಬ ಬ್ಯಾಟರ್ ಮಾಡದ ದಾಖಲೆ ಬರೆದಿದ್ದಾರೆ. ಅಷ್ಟೇ ಅಲ್ಲ, ಇಂಗ್ಲೆಂಡ್​​ನ ಡೇವಿಡ್ ಮಲನ್, ಸರ್ವ ಶ್ರೇಷ್ಠ ದಾಖಲೆಯನ್ನೇ ಬ್ರೇಕ್ ಮಾಡಿರುವ ಅಭಿಷೇಕ್, ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿಯನ್ನು ಮೀರಿಸಿದ್ದಾರೆ.

Advertisment

ಟಿ20ಯಲ್ಲಿ ಅತಿ ಹೆಚ್ಚು ರೇಟಿಂಗ್‌

ಸದ್ಯ 926 ಪಾಯಿಂಟ್ಸ್​ನೊಂದಿಗೆ ಅತ್ಯಧಿಕ ರೇಟಿಂಗ್ ಪಡೆದ ಸ್ಥಾನದಲ್ಲಿ ಅಭಿಷೇಕ್ ಶರ್ಮಾ ಇದ್ರೆ. 2020ರಲ್ಲಿ ಇಂಗ್ಲೆಂಡ್​ನ ಡೇವಿಡ್ ಮಲನ್,  919 ರೇಟಿಂಗ್ ಪಾಯಿಂಟ್ಸ್​ನೊಂದಿಗೆ ವಿಶ್ವದಾಖಲೆ ನಿರ್ಮಿಸಿದ್ದರು. 2022ರಲ್ಲಿ ಸೂರ್ಯಕುಮಾರ್, 912 ರೇಟಿಂಗ್ ಪಾಯಿಂಟ್‌ ತಲುಪಿದ್ದರೆ, ವಿರಾಟ್ ಕೊಹ್ಲಿ 909 ರೇಟಿಂಗ್ ಪಾಯಿಂಟ್​​ಗಳೊಂದಿಗೆ ನಂಬರ್​.1 ಬ್ಯಾಟರ್ ಆಗಿ ಮರೆದಾಡಿದ್ದರು. ಇವ್ರೇ ಅಲ್ಲ. ಆಸ್ಟ್ರೇಲಿಯಾದ ಆರೋನ್ ಫಿಂಚ್​, 2014ರಲ್ಲಿ 904 ಅಂಕಗಳಿಸಿದ್ದರು. ಇದೀಗ ಇವರೆನ್ನೆಲ್ಲ ಹಿಂದಿಕ್ಕಿರುವ ಅಭಿಷೇಕ್ ಶರ್ಮಾ, 931 ರೇಟಿಂಗ್ ಪಾಯಿಂಟ್ಸ್​​ ಕಲೆಹಾಕಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ABHISHEK_SHARMA (8)

ಸಾರ್ವಕಾಲಿಕ ಶ್ರೇಷ್ಠ ರೇಟಿಂಗ್​​ನತ್ತ ಅಭಿಷೇಕ್ ದಾಪುಗಾಲು..!

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರೇಟಿಂಗ್ ಪಡೆದ ಅಭಿಷೇಕ್ ಶರ್ಮಾ, ಈಗ ವಿರಾಟ್​ ಕೊಹ್ಲಿಯ ಸಾರ್ವಕಾಲಿಕ ಶ್ರೇಷ್ಠ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ ಬರೋಬ್ಬರಿ 937 ಅಂಕಗಳಿಸಿದ್ದ ವಿರಾಟ್, ಟೀಮ್ ಇಂಡಿಯಾ ಪರ ಐಸಿಸಿ ರ‍್ಯಾಂಕಿಂಗ್​ನಲ್ಲಿ ಅತ್ಯಧಿಕ ರೇಟಿಂಗ್ ಪಡೆದ ಬ್ಯಾಟರ್ ಆಗಿದ್ದಾರೆ. ಇದೀಗ ಟಿ20ಯಲ್ಲಿ ಈ ದಾಖಲೆ ಬರೆಯಲು ಅಭಿಷೇಕ್ ಶರ್ಮಾ ಜಸ್ಟ್​ 7 ಪಾಯಿಂಟ್ಸ್​ ಬೇಕಿದೆ. ಹೀಗಾಗಿ ಮುಂದಿನ ಆಸ್ಟ್ರೇಲಿಯಾ ಸರಣಿಯಲ್ಲಿ ಮತ್ತೊಮ್ಮೆ ಸಿಡಿದ್ರೆ,  ಐಸಿಸಿ ರ‍್ಯಾಂಕಿಂಗ್ ಇತಿಹಾಸದಲ್ಲೇ ಟೀಮ್ ಇಂಡಿಯಾ ಪರ ಅತ್ಯಧಿಕ ರೇಟಿಂಗ್ ಪಡೆದ ಬ್ಯಾಟರ್ ಆಗೋದ್ರಲ್ಲಿ ಡೌಟೇ ಇಲ್ಲ.

ಯಾರೊಬ್ಬರೂ ಡಾನ್ ಬ್ರಾಡ್ಮನ್ ಹತ್ತಿರಕ್ಕೂ ಸುಳಿದಿಲ್ಲ ..!

ಐಸಿಸಿ ಱಕಿಂಗ್​ ಇತಿಹಾಸದಲ್ಲಿ ಲೆಜೆಂಡರಿ ಕ್ರಿಕೆಟರ್​ ಡಾನ್ ಬ್ರಾಡ್ಮನ್, ಸರ್ವ ಶ್ರೇಷ್ಠ ಱಕಿಂಗ್ ಹೊಂದಿದ್ಧಾರೆ. ಟೆಸ್ಟ್ ಬ್ಯಾಟರ್​ಗಳ ಪಟ್ಟಿಯಲ್ಲಿ ಡಾನ್​ ಬ್ರಾಡ್ಮನ್, 1934ರಲ್ಲಿ ಬರೋಬ್ಬರಿ 961 ರೇಟಿಂಗ್ ಗಳಿಸಿದ್ದರು. ಇದುವರೆಗೂ ಯಾವೊಬ್ಬರ ಬ್ಯಾಟರ್ ಸಹ ಸುಳಿದಿಲ್ಲ. ಸ್ಟೀವ್ ಸ್ಮಿತ್, 947, ಇಂಗ್ಲೆಂಡ್​​ನ ಲಿಯೊನಾರ್ಡ್ ಹಟ್ಟನ್ 945, ಜ್ಯಾಕ್ ಹಾಬ್ಸ್ 942 ರೇಟಿಂಗ್ಸ್​ ಬಿಟ್ರೆ, ವಿಶ್ವದ ಉಳಿದ್ಯಾವ ಬ್ಯಾಟರ್​​​​​​​, 940ರ ಗಡಿಯನ್ನೇ ದಾಟಿಲ್ಲ. ಹೀಗಾಗಿ ಸದ್ಯ ಸಾಲಿಡ್ ಫಾರ್ಮ್​ನಲ್ಲಿರುವ ಅಭಿಷೇಕ್ ಶರ್ಮಾ, 31 ಅಂಕಗಳಿಸಿದಲ್ಲಿ ಐಸಿಸಿ ರ‍್ಯಾಂಕಿಂಗ್​ ಇತಿಹಾಸದಲ್ಲೇ ಅತ್ಯಧಿಕ ರೇಟಿಂಗ್ ಪಡೆದ ಬ್ಯಾಟರ್ ಎನಿಸಿಕೊಳ್ಳುವಲ್ಲಿ ಡೌಟೇ ಇಲ್ಲ. ಆದ್ರೆ, ಇದು ನಿಜವಾಗಬೇಕಾದ್ರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಭಿಷೇಕ್​​​​, ರನ್ ಅಭಿಷೇಕ ಮಾಡಿದ್ರೆ. ಅಸಾಧ್ಯವೇನಲ್ಲ. 

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

asia cup trophy Asia Cup 2025 Asia cup final Abhishek Sharma
Advertisment
Advertisment
Advertisment