Advertisment

ಕಳೆದ 7 ಇನ್ನಿಂಗ್ಸ್​ಗಳಲ್ಲಿ 5 ಬಾರಿ ಡಕ್​ಔಟ್.. ಇವತ್ತು ಪ್ಲೇಯಿಂಗ್-11ನಲ್ಲಿ ಡೌಟ್..!

ಅತಿಯಾದ್ರೆ ಅಮೃತವೂ ವಿಷ ಅಂತಾರೆ. ಇದು ನೂರಕ್ಕೆ ನೂರರಷ್ಟು ಸತ್ಯ. ಅತಿಯಾದ ನಿರೀಕ್ಷೆ, ಭಾರೀ ನಿರಾಸೆ ಉಂಟು ಮಾಡುತ್ತದೆ. ಅಭಿಷೇಕ್ ಶರ್ಮಾಗೆ ಇದು ಸಖತ್ ಸೂಟಾಗುತ್ತದೆ. ತಮ್ಮ ಮೇಲಿಟ್ಟಿದ್ದ ನಿರೀಕ್ಷೆಯನ್ನ ಅಭಿಷೇಕ್ ಸುಳ್ಳಾಗಿಸಿದ್ದಾರೆ. ಅತಿಯಾದ ನಿರೀಕ್ಷೆಯಿಂದ ಒತ್ತಡಕ್ಕೆ ಸಿಲುಕಿ ಪರದಾಡ್ತಿದ್ದಾರೆ.

author-image
Ganesh Kerekuli
Abhishek sharma (10)
Advertisment
  • ವಿಶ್ವಕಪ್​ನಲ್ಲಿ ಅಭಿಷೇಕ್ 3 ಪಂದ್ಯ, 3 ಡಕೌಟ್
  • ಭಾರೀ ನಿರೀಕ್ಷೆಯಿಂದ ಒತ್ತಡಕ್ಕೆ ಸಿಲುಕಿದ್ರಾ ಅಭಿಷೇಕ್..?
  • ಅಭಿಷೇಕ್ ಶರ್ಮಾ ಮೈಂಡ್​ಸೆಟ್ ಬದಲಾಗಬೇಕಾ..?

ಅತಿಯಾದ್ರೆ ಅಮೃತವೂ ವಿಷ ಅಂತಾರೆ. ಇದು ನೂರಕ್ಕೆ ನೂರರಷ್ಟು ಸತ್ಯ. ಅತಿಯಾದ ನಿರೀಕ್ಷೆ, ಭಾರೀ ನಿರಾಸೆ ಉಂಟು ಮಾಡುತ್ತದೆ. ಟೀಮ್ ಇಂಡಿಯಾ ಓಪನರ್ ಅಭಿಷೇಕ್ ಶರ್ಮಾಗೆ ಇದು ಸಖತ್ ಸೂಟಾಗುತ್ತದೆ. ತಮ್ಮ ಮೇಲಿಟ್ಟಿದ್ದ ನಿರೀಕ್ಷೆಯನ್ನ ಅಭಿಷೇಕ್ ಸುಳ್ಳಾಗಿಸಿದ್ದಾರೆ. ಅತಿಯಾದ ನಿರೀಕ್ಷೆಯಿಂದ ಒತ್ತಡಕ್ಕೆ ಸಿಲುಕಿರುವ ಪಂಜಾಬ್ ಬ್ಯಾಟರ್ ರನ್​ಗಳಿಸೋಕೇ ಪರದಾಡ್ತಿದ್ದಾರೆ.

Advertisment

ಡಿಸ್ಟ್ರಕ್ಟೀವ್, ಡೆಡ್ಲಿ, ಡೇಂಜರಸ್, ಎಕ್ಸ್​​ಪ್ಲೋಸಿವ್, ಫಿಯರ್​ಲೆಸ್, ಅಗ್ರೆಸಿವ್. ಹೀಗೆ ಟೀಮ್ ಇಂಡಿಯಾ ಓಪನರ್ ಅಭಿಷೇಕ್ ಶರ್ಮಾ ಬಗ್ಗೆ ಹೇಳಿದ್ದೇ ಹೇಳಿದ್ದು. ಹೊಗಳಿದ್ದೇ ಹೊಗಳಿದ್ದು. ಅಭಿಷೇಕ್ ಶರ್ಮಾರನ್ನ ಹೊಗಳಿ ಹೊಗಳಿ, ಮೂಲೆಗೆ ಕೂರಿಸಲಾಗಿದೆ. ಅಂದು ಭಾರತದ ಪೋಸ್ಟರ್​ ಬಾಯ್ ಆಗಿ ಮನೆ ಮನೆ ಮಾತಾಗಿದ್ದ ಪಂಜಾಬ್ ಬ್ಯಾಟರ್ ಇಂದು ಸತತ ವೈಫಲ್ಯದಿಂದ ಟೀಕೆಗೆ ಒಳಗಾಗಿದ್ದಾರೆ. 

ಯುಎಸ್​ಎ ವಿರುದ್ಧ 1 ಎಸೆತ 0 ರನ್

ಅಮೆರಿಕಾ ವಿರುದ್ಧ ಟಿ-20 ವಿಶ್ವಕಪ್ ಅಭಿಯಾನ ಆರಂಭಿಸಿದ ಅಭಿಷೇಕ್ ಟೂರ್ನಿಯ ಮೊದಲ ಪಂದ್ಯದಲ್ಲಿ, ರನ್ ಅಕೌಂಟ್ ಓಪನ್ ಮಾಡದೇ ಮೊದಲ ಎಸೆತಕ್ಕೆ ಔಟಾದ್ರು. ಬದ್ಧವೈರಿ ಪಾಕಿಸ್ತಾನ ವಿರುದ್ಧ ಅಭಿಷೇಕ್ ಸಿಡಿದೇಳ್ತಾರೆ ಅಂತ ನಿರೀಕ್ಷಿಸಲಾಯ್ತು. ಆದ್ರೆ ಆ ಪಂದ್ಯದಲ್ಲಿ 4 ಎಸೆತಗಳನ್ನ ಫೇಸ್ ಮಾಡಿದ ಅಭಿಷೇಕ್, ಮತ್ತೆ ಡಕೌಟ್ ಆದ್ರು. ಲೀಗ್ ಹಂತದ ಕೊನೆಯ ಪಂದ್ಯದಲ್ಲಾದ್ರೂ ಅಭಿಷೇಕ್ ಖಾತೆ ತೆರೆಯಬಹುದು ಅಂತ ಅಭಿಮಾನಿಗಳು ಕಾಯ್ತಿದ್ರು. ಆದ್ರೆ ಅಲ್ಲೂ ಅದೇ ಆಟ ಪರದಾಟ.

5 ಬಾರಿ ಅಭಿಷೇಕ್ ಡಕೌಟ್

ಟಿ-20 ವಿಶ್ವಕಪ್​ನಲ್ಲಿ ಇದುವರೆಗೂ ಒಂದೇ ಒಂದು ರನ್​ ಕಲೆಹಾಕದ ಅಭಿಷೇಕ್ ಸತತ 3 ಬಾರಿ ಶೂನ್ಯ ಸುತ್ತಿದ್ದಾರೆ. ಕಳೆದ 7 ಟಿ-20 ಪಂದ್ಯಗಳಲ್ಲಿ ಅಭಿಷೇಕ್ ಸಾಧನೆ ಭಯನಕವಾಗಿದೆ. 7 ಪಂದ್ಯಗಳಲ್ಲಿ ಎಡಗೈ ಬ್ಯಾಟರ್ 5 ಬಾರಿ ಡಕೌಟ್ ಆಗಿದ್ದಾರೆ. ಇದು ನಿಜಕ್ಕೂ ಆತಂಕದ ವಿಚಾರಾನೇ. 25 ವರ್ಷದ ಅಭಿಷೇಕ್ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಆ ನಿರೀಕ್ಷೆಗಳೇ, ಅಭಿಷೇಕ್ ಮೇಲೆ ಹೆಚ್ಚು ಒತ್ತಡ ಹೇರಿರೋದು. ಒತ್ತಡ ಮತ್ತು ನಿರೀಕ್ಷೆಗಳಿಂದಲೇ ಕ್ರೀಸ್​​​​ಗಿಳಿಯುವ ಅಭಿಷೇಕ್ ಬ್ಯಾಟಿಂಗ್ ವೇಳೆ, ಮೈಂಡ್​​ಸೆಟ್ ಮೇಲೆ ಪರಿಣಾಮ ಬೀರುತ್ತದೆ. ಇದ್ರಿಂದ ಆಟಗಾರ ವೈಫಲ್ಯ ಅನುಭವಿಸ್ತಾರೆ. ಅಭಿಷೇಕ್​ಗೆ ಆಗಿರೋದು ಇದೇ. 

Advertisment

ಇದನ್ನೂ ಓದಿ: ಓದಿದ ಶಾಲೆಗೆ ಧನ್ಯತೆ ಅರ್ಪಿಸುವುದು ಎಂದರೆ, ಅಕ್ಷರ ಸಂಸ್ಕಾರಕ್ಕೆ ನಮಿಸುವುದು: ಕೆ.ವಿ.ಪ್ರಭಾಕರ್

abhishek sharma (8)

ಲೀಗ್ ಹಂತ ಮುಗೀತು. ಅಭಿಷೇಕ್ ಫ್ಲಾಪ್ ಶೋ ಕೂಡ ಮುಗೀತು. ಇದೀಗ ಮುಂದಿನ ಪಂದ್ಯಗಳತ್ತ ಅಭಿಷೇಕ್ ಗಮನ ಹರಿಸಬೇಕು. ಮೈಂಡ್​ಸೆಟ್ ಕೂಡ ಬದಲಾಗಬೇಕು. ಮೊದಲಿಗೆ ಕ್ರೀಸ್​ನಲ್ಲಿ ಒಂದೆರೆಡು ಓವರ್ ಸ್ಪೆಂಡ್ ಮಾಡಬೇಕು. ರನ್ ಅಕೌಂಟ್ ಓಪನ್ ಮಾಡಬೇಕು. ಸ್ಮಾರ್ಟ್ ಕ್ರಿಕೆಟ್ ಆಡಬೇಕು. ನಂತರ ತನ್ನ ನ್ಯಾಚ್ಯುರಲ್ ಗೇಮ್​ ಆಡಬೇಕು. ಇದನ್ನ ಅಭಿಷೇಕ್ ಗಮನದಲ್ಲಿಟ್ಟುಕೊಳ್ಳಬೇಕು.

ಅಭಿಷೇಕ್ ಶರ್ಮಾ ಫ್ಲಾಪ್ ಶೋನಿಂದ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್, ಆತಂಕಕ್ಕೆ ಒಳಗಾಗಿರೋದು ನಿಜ. ಅಭಿಷೇಕ್​ರನ್ನ ಡ್ರಾಪ್ ಮಾಡೋ ಮನಸ್ಥಿತಿಯಲ್ಲಿ, ಮ್ಯಾನೇಜ್ಮೆಂಟ್ ಇಲ್ಲ. ಆದ್ರೂ ಅಭಿಷೇಕ್​​ಗೆ ಬ್ರೇಕ್ ಕೊಟ್ಟು, ಸಂಜು ಸ್ಯಾಮ್ಸನ್​ರನ್ನ ಕಣಕ್ಕಿಳಿಸುವ ಲೆಕ್ಕಾಚಾರವನ್ನೂ ಸದ್ಯ ತಳ್ಳಿಹಾಕುವಂತಿಲ್ಲ.  

Advertisment

ನೋ ಡೌಟ್ ಅಭಿಷೇಕ್ ಟ್ಯಾಲೆಂಟೆಂಡ್ ಕ್ರಿಕೆಟರ್ ಅನ್ನೋದು. ಆದ್ರೆ ಬ್ಯಾಡ್ ಟೈಮ್ ಎಲ್ಲಾ ಕ್ರಿಕೆಟಿಗರನ್ನೂ ಕಾಡಿದೆ. ಸದ್ಯ ಅಭಿಷೇಕ್​​ಗೆ ಬ್ಯಾಡ್ ಟೈಮ್ ಮತ್ತು ಬ್ಯಾಡ್ ಲಕ್ ಕಾಡ್ತಿದೆ. ಇಂತಹ ಸಮಯದಲ್ಲಿ ಕ್ಯಾಪ್ಟನ್, ಕೋಚ್ ಮತ್ತು ಮ್ಯಾನೇಜ್ಮೆಂಟ್, ಅಭಿಷೇಕ್​ರನ್ನ ಬ್ಯಾಕ್ ಮಾಡಬೇಕಿದೆ. ಅಭಿಷೇಕ್ ಪರ ನಿಲ್ಲಬೇಕಿದೆ. ಯುವ ಕ್ರಿಕೆಟಿಗನ ಆತ್ಮವಿಶ್ವಾಸ ಹೆಚ್ಚಿಸಬೇಕಿದೆ. ಅಭಿಷೇಕ್ ಶರ್ಮಾ ಆದಷ್ಟು ಬೇಗ ಬ್ಯಾಡ್​ಪ್ಯಾಚ್​ನಿಂದ ಹೊರಬರಲಿ. ಈ ಹಿಂದಿನಂತೆ ಬೌಂಡ್ರಿ, ಸಿಕ್ಸರ್​ ಮತ್ತು ರನ್​ಮಳೆ ಸುರಿಸಲಿ. 

ಇದನ್ನೂ ಓದಿ: ಪತ್ನಿಗೆ ಪರ ಪುರುಷನ ಮೆಸೇಜ್.. ನೊಂದು ಬದುಕನ್ನೇ ಬಿಟ್ಟು ಹೋದ ಪತಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Abhishek Sharma
Advertisment
Advertisment
Advertisment