ಅಭಿಷೇಕ್ ಮುಂದೆ ದಾಖಲೆಗಳು ಶೇಕ್.. ಗುರುವನ್ನೇ ಮೀರಿಸಿದ ಶಿಷ್ಯ..!

T20 ಕ್ರಿಕೆಟ್​ನಲ್ಲಿ ಅಭಿಷೇಕ್ ಶರ್ಮಾ ಘರ್ಜಿಸುತ್ತಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ದಾಖಲೆಗಳನ್ನ ಪುಡಿ ಪುಡಿ ಮಾಡ್ತಿರುವ ಪಂಜಾಬ್ ಬ್ಯಾಟ್ಸ್​ಮನ್, ಶಾರ್ಟರ್ ಫಾರ್ಮೆಟ್​​ನಲ್ಲಿ ದರ್ಬಾರ್ ನಡೆಸ್ತಿದ್ದಾರೆ. ಅಭಿಷೇಕ್ ಆರ್ಭಟಕ್ಕೆ ಎದುರಾಳಿಗಳು ಶೇಕ್ ಆಗ್ತಿದ್ದಾರೆ.

author-image
Ganesh Kerekuli
ABHISHEK_SHARMA (6)
Advertisment
  • ವೇಗವಾಗಿ 5 ಸಾವಿರ ರನ್ ಪೂರೈಸಿದ ವೀರ
  • ಸಿಕ್ಸರ್ ಸಿಡಿಸೋದ್ರಲ್ಲಿ ಅಭಿಷೇಕ್ ನಂಬರ್.1
  • ರೋಹಿತ್, ಸಂಜು ಅಭಿಷೇಕ್ ಮುಂದೆ ಷೇಕ್

ಎದುರಾಳಿಗಳು ಯಾರೇ ಇರಲಿ, ಬೌಲರ್​ಗಳು ಯಾರೇ ಆಗಲಿ, ಈತನ ಮಂತ್ರ ಒಂದೇ. ಅದು ದಂಡಂ ದಶಗುಣಂ. ಪಂದ್ಯದ ಮೊದಲ ಎಸೆತದಿಂದಲೇ ಅಬ್ಬರಿಸಲು ಶುರುಮಾಡುವ ಅಭಿಷೇಕ್, T20 ಕ್ರಿಕೆಟ್​ನ ಡೆಡ್ಲಿ ಌಂಡ್ ಡೇಂಜರಸ್ ಬ್ಯಾಟರ್. ಕ್ರಿಸ್ ಗೇಲ್, ಡೇವಿಡ್ ವಾರ್ನರ್, ಎಬಿ ಡಿವಿಲಿಯರ್ಸ್​ರಂತಹ ಟಾಪ್ ಆರ್ಡರ್ ಬ್ಯಾಟರ್ಸ್​​​​ ರಣಾರ್ಭಟವನ್ನ ನಾವ್ ನೋಡಿದ್ದೇವೆ. ಅಭಿಷೇಕ್ ಈ ತ್ರಿಮೂರ್ತಿಗಳಿಗಿಂತ ಒಂದು ಹೆಜ್ಜೆ ಮುಂದು. ಅಭಿಷೇಕ್ ಬ್ಯಾಟಿಂಗ್​ಗೆ ದಾಖಲೆಗಳೇ ಅಡ್ರೆಸ್ ಇಲ್ಲದಂತೆ ಕಳೆದು ಹೋಗಿವೆ.  ​​​​

5 ಸಾವಿರ ರನ್ ಪೂರೈಸಿದ ವೀರ

ನ್ಯೂಜಿಲೆಂಡ್ ವಿರುದ್ಧದ ಮೊದಲ T20 ಪಂದ್ಯದಲ್ಲಿ ಅಭಿಷೇಕ್ ಹಲವು ದಾಖಲೆಗಳನ್ನ ತನ್ನ ಹೆಸರಿಗೆ ಬರೆದುಕೊಂಡ್ರು. ಅದ್ರಲ್ಲಿ ಪ್ರಮುಖವಾಗಿ, ವೇಗಿವಾಗಿ 5 ಸಾವಿರ ರನ್​ ಕಲೆಹಾಕಿರುವ ರೆಕಾರ್ಡ್, ಅಭಿಷೇಕ್ ಹೆಸರಿಗೆ ದಾಖಲಾಯ್ತು. ಕೇವಲ 2898 ಎಸೆತಗಳಲ್ಲಿ 5 ಸಾವಿರ ರನ್​ಪೂರೈಸಿದ ಪಂಜಾಬ್ ಪುತ್ತರ್, ಶುಭ್ಮನ್ ಗಿಲ್, ಌಂಡ್ರೆ ರಸಲ್, ಟಿಮ್ ಡೇವಿಡ್, ವಿಲ್ ಜ್ಯಾಕ್ಸ್​ ಮತ್ತು ಗ್ಲೇನ್ ಮ್ಯಾಕ್ಸ್​ವೆಲ್ ದಾಖಲೆ ಪುಡಿ ಪುಡಿ ಮಾಡಿದ್ರು.

ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾಗೆ ಸಿಕ್ಸರ್​ ಸಿಡಿಸೋದು ಅಭ್ಯಾಸ ಆಗ್ಬಿಟ್ಟಿದೆ. ಪ್ರತಿ T20 ಪಂದ್ಯದಲ್ಲೂ ಅಭಿ, ಸಿಕ್ಸರ್​ಗಳ ಅಭಿಷೇಕ ಮಾಡ್ತಾರೆ. ಪ್ರತಿ ಸಿಕ್ಸರ್ ಸಿಡಿಸೋಕೆ ಪಂಜಾಬ್ ಯುವ ಬ್ಯಾಟರ್ ತೆಗೆದುಕೊಳ್ಳೋದು ಎಷ್ಟು ಎಸೆತ ಗೊತ್ತಾ? ಹೌದು! ಪ್ರತಿ ಸಿಕ್ಸರ್​ಗೆ ಅಭಿಷೇಕ್ ತೆಗೆದುಕೊಳ್ಳೋದು 7.75 ಎಸೆತ ಮಾತ್ರ. ರಿಂಕು ಸಿಂಗ್ 10.59 ಎಸೆತಕ್ಕೆ ಒಂದು ಸಿಕ್ಸರ್ ಸಿಡಿಸಿದ್ರೆ, ಸೂರ್ಯಕುಮಾರ್ ಯಾದವ್ 11.09 ಎಸೆತಕ್ಕೆ ಪ್ರತಿ ಸಿಕ್ಸರ್ ಬಾರಿಸ್ತಾರೆ. ಜೈಸ್ವಾಲ್, ಯುವರಾಜ್ ಸಿಂಗ್ ಸಹ ಅಭಿಷೇಕ್​​​​​​ ಹಿಂದೇನೇ ಇದ್ದಾರೆ.

ಇದನ್ನೂ ಓದಿ:ಜೈಲಿನಲ್ಲಿ ಕೊಲೆ ಅಪರಾಧಿಗಳ ಲವ್ ಶುರು : ಮದುವೆಯಾಗಲು ಪೆರೋಲ್ ಪಡೆದ ಅಪರಾಧಿಗಳು

ABHISHEK_SHARMA (8)

ಕಿವೀಸ್ ವಿರುದ್ಧ ನಾಗ್ಪುರ T20 ಪಂದ್ಯದಲ್ಲಿ ಅಭಿಷೇಕ್, ಬರೋಬ್ಬರಿ 8 ಸಿಕ್ಸರ್​​ಗಳನ್ನ ಸಿಡಿಸಿದ್ರು. ಅದು ಕೂಡ ದಾಖಲೆ ಪುಟಗಳಲ್ಲಿ ಸೇರಿಕೊಂಡಿತು. ಈ ಹಿಂದೆ ರೋಹಿತ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್, ಒಂದೊಂದು ಪಂದ್ಯದಲ್ಲಿ 8 ಸಿಕ್ಸರ್​​​​​​ ಸಿಡಿಸಿದ್ರು. ಅದು ಒಂದಲ್ಲ, ಎರಡಲ್ಲ.. 3 ಪಂದ್ಯಗಳಲ್ಲಿ ಈ ದಾಖಲೆ ನಿರ್ಮಿಸಿದ್ರು. ಆದ್ರೀಗ ಅಭಿಷೇಕ್ ಆ ರೆಕಾರ್ಡ್​​​​​​​​​​​​​​​​​​​​​​​​​​​​​​​​​​​​​​​​​​​​​​ ಅನ್ನ ಹಳಸಿ ಹಾಕಿದ್ದಾರೆ. ಪ್ರತಿ 4 ಪಂದ್ಯಗಳಲ್ಲಿ ಅಭಿಷೇಕ್ 8 ಕ್ಕಿಂತ ಹೆಚ್ಚು ಸಿಕ್ಸರ್ ಸಿಡಿಸಿ ಎಲ್ಲರನ್ನೂ ಷೇಕ್ ಮಾಡಿದ್ದಾರೆ.

ಗುರು ಮೀರಿಸಿದ ಶಿಷ್ಯ

ಅಭಿಷೇಕ್ ಶರ್ಮಾ ಗುರು ಯುವರಾಜ್ ಸಿಂಗ್ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಯುವರಾಜ್ ಸಿಂಗ್​ರಿಂದ ಬ್ಯಾಟಿಂಗ್ ಪಾಠ ಕಲಿಯುತ್ತಿರುವ ಅಭಿಷೇಕ್, ಈಗ ಗುರುವನ್ನೇ ಮೀರಿಸಿದ್ದಾರೆ. ಯುವಿ T20 ಪಂದ್ಯಗಳಲ್ಲಿ  5 ಬಾರಿ ಅರ್ಧಶತಕ ಸಿಡಿಸಿ, 200 ಸ್ಟ್ರೈಕ್​ರೇಟ್ ಕಾಯ್ದುಕೊಂಡಿದ್ದರು. ಆದ್ರೀಗ ಶಿಷ್ಯ ಅಭಿಷೇಕ್, 6 ಬಾರಿ ಅರ್ಧಶತಕ ಸಿಡಿಸಿದ ಪಂದ್ಯಗಳಲ್ಲಿ, 200ಕ್ಕಿಂತ ಹೆಚ್ಚು ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟಿಂಗ್ ನಡೆಸಿ, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಭಾರತ T20 ಕ್ರಿಕೆಟ್​ನ ಸಿಕ್ಸ್ ಮಷೀನ್ ಯಾರಪ್ಪಾ ಅಂದ್ರೆ ಸೂರ್ಯಕುಮಾರ್ ಯಾದವ್ ಹೆಸರು ಫಸ್ಟ್​ ಲೈನ್​ನಲ್ಲಿತ್ತು. ಅಭಿಷೇಕ್, ತಂಡದ ಸಾರಥಿಯನ್ನೇ ಸೈಡ್ ಹೊಡೆದಿದ್ದಾರೆ. ಕೇವಲ 33 ಪಂದ್ಯಗಳಲ್ಲಿ 81 ಸಿಕ್ಸರ್ ಕಲೆಹಾಕಿರುವ ಅಭಿಷೇಕ್, ಕಡಿಮೆ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿರುವ ಲಿಸ್ಟ್​ನಲ್ಲಿ ಟಾಪ್ 6ರಲ್ಲಿ ಕಾಣಿಸಿಕೊಂಡಿದ್ದಾರೆ. ರೋಹಿತ್, ಸೂರ್ಯ, ಕೊಹ್ಲಿ, ಹಾರ್ದಿಕ್ ಮತ್ತು ರಾಹುಲ್ ನಂತರ, ಅಭಿಷೇಕ್ ಸ್ಥಾನ ಪಡೆದಿದ್ದಾರೆ. ಆದ್ರೆ ಕೆಲವೇ ದಿನಗಳಲ್ಲಿ ಇವರೆಲ್ಲರನ್ನೂ, ಅಭಿಷೇಕ್ ಮೀರಿಸೇ ಮೀರಿಸ್ತಾರೆ. ಅದ್ರಲ್ಲಿ ಯಾವುದೇ ಅನುಮಾನವಿಲ್ಲ. T20 ಕ್ರಿಕೆಟ್​​ನಲ್ಲಿ ಅಭಿಷೇಕ್ ಕಿಂಗ್ ಆಗಿ ಮರೆಯುತ್ತಿದ್ದಾರೆ. ಅಭಿಷೇಕ್ ಬ್ಯಾಟಿಂಗ್​​ಗೆ ಷೇಕ್ ಆಗ್ತಿರುವ ಎದುರಾಳಿ ಬೌಲರ್​ಗಳು, ಕರಿಯರ್ ಕಳೆದುಕೊಳ್ಳುವ ಭೀತಿಯನ್ನಂತೂ ಎದುರಿಸುತ್ತಿದ್ದಾರೆ.

ಇದನ್ನೂ ಓದಿ:ಅಮೆಜಾನ್ ನಲ್ಲಿ ಮುಂದಿನ ವಾರ ಮತ್ತೆ 14 ಸಾವಿರ ಉದ್ಯೋಗಿಗಳಿಗೆ ಗೇಟ್‌ ಪಾಸ್‌ಗೆ ತೀರ್ಮಾನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Abhishek Sharma T20I
Advertisment